ಕಾರ್ಕಳ: ಇಬ್ಬರು ಮಕ್ಕಳೊಂದಿಗೆ ಗೃಹಣಿ ನಾಪತ್ತೆ
ಕಾರ್ಕಳ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಜೋಡುಕಟ್ಟೆ, ಸುರೇಖ ನಗರದಲ್ಲಿ ನಡೆದಿದೆ.
ಜ್ಯೋತಿ(25), ಚರಣ್(7), ತೃಪ್ತಿ (5) ನಾಪತ್ತೆಯಾದವರು. ಜೋಡುಕಟ್ಟೆ ನಿವಾಸಿ ಗಣೇಶ ಎಂಬವರ ಪತ್ನಿ ಜ್ಯೋತಿ ಅವರು ಜ.13 ರಂದು ಸಂಜೆ ಮನೆಯಲ್ಲಿ ಯಾರಿಗೂ ತಿಳಿಸದೆ ತಮ್ಮ ಇಬ್ಬರು ಮಕ್ಕಳೊಂದಿಗೆ ಮನೆಯನ್ನು ಬಿಟ್ಟು ಹೋಗಿದ್ದು, ಇವರೆಗೂ ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಗಣೇಶ ಅವರು ನೀಡಿರುವ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.