ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾಗಿ ಅಬ್ದುಲ್ ಗಫೂರ್ ಆಯ್ಕೆ
ಉಡುಪಿ, ಜ.13: ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾಗಿ ಕಲ್ಯಾಣಪುರ ಅಬ್ದುಲ್ ಗಫೂರ್ ಆಯ್ಕೆಯಾಗಿದ್ದಾರೆ.
ಜ.3ರಂದು ಸಂಸ್ಥೆಯ ಕಚೇರಿಯಲ್ಲಿ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಉಮರ್ ಅಧ್ಯಕ್ಷತೆಯಲ್ಲಿ ಜರಗಿದ ವಾರ್ಷಿಕ ಮಹಾ ಸಭೆಯಲ್ಲಿ ಈ ಆಯ್ಕೆ ಮಾಡ ಲಾಯಿತು. ನಿಕಟಪೂರ್ವ ಕಾರ್ಯದರ್ಶಿ ಖಲೀಲ್ ಅಹಮದ್ ವಾರ್ಷಿಕ ವರದಿ, ಖಜಾಂಚಿ ಮುನೀರ್ ಲೆಕ್ಕಪತ್ರ ಮಂಡಿಸಿದರು.
ಮುಂದಿನ ವರ್ಷಕ್ಕೆ ನೂನತ ಸಮಿತಿಯನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕೆ.ಅಬ್ದುಲ್ ಗಫೂರ್ ಆದಿಉಡುಪಿ, ಕಾರ್ಯದರ್ಶಿಯಾಗಿ ಯು.ಇಬ್ರಾಹಿಮ್, ಜತೆಕಾರ್ಯದರ್ಶಿ ಮುಹಮ್ಮದ್ ಫಯಾಜ್ ಹಾಗು ಖಜಾಂಚಿಯಾಗಿ ಝಕೀರ್ ಹುಸೇನ್, ಸದಸ್ಯರುಗಳಾಗಿ ವಿ.ಎಸ್.ಉಮರ್, ಮುನೀರ್ ಮಹಮೂದ್, ಖಾಲಿದ್ ಅಬ್ದುಲ್ ಅಝೀಜ್, ಎಸ್.ಎ.ಶಮೀಮ್, ರಿಯಾಜ್ ಅಹ್ಮದ್, ಇಕ್ವಾನ್ ಜಿ.ರವೂಫ್ ಆಯ್ಕೆಯಾದರು. ಇವರೊಂದಿಗೆ ಇಕ್ಬಾಲ್ ಮನ್ನಾ ಮತ್ತು ಪರ್ವೇಜ್ ಯಕೂಬ್ ಅವರನ್ನು ಹೆಚ್ಚುವರಿ ಸದಸ್ಯರನ್ನಾಗಿ ಸೇರಿಸಿ ಕೊಳ್ಳಲಾಯಿತು