ಉಡುಪಿ: ವ್ಯಾಯಾಮ ಶಾಲೆಯ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ, ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿ
ಉಡುಪಿ, ಏ.16(ಉಡುಪಿ ಟೈಮ್ಸ್ ವರದಿ): ದೇವಸ್ಥಾನದ ಹುಂಡಿ ಕಳವಿಗೆ ವಿಫಲ ಯತ್ನ ನಡೆಸಿರುವ ಘಟನೆ ಉಡುಪಿ -ಅಂಬಾಗಿಲು ಮುಖ್ಯರಸ್ತೆಯಲ್ಲಿರುವ ತಾಂಗದಗಡಿ ವೀರಾಂಜನೇಯ ದೇವಸ್ಥಾನದಲ್ಲಿ ನಡೆದಿದೆ.
ವೀರಾಂಜನೆಯ ವ್ಯಾಯಾಮ ಶಾಲೆಗೆ ಸೇರಿದ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು, ಇಂದು ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದೆ. ದೇವಸ್ಥಾನಕ್ಕೆ ಬಂದ ಕಳ್ಳರ ತಂಡ ಹುಂಡಿ ಕಳವಿಗೆ ಯತ್ನ ನಡೆಸಿದ್ದು ಬಳಿಕ ಕೃತ್ಯಕ್ಕೆ ಬಳಸಿದ್ದ ಮಂಗಳೂರು ನೋಂದಣಿಯ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.