ಬಾಲಾಕೋಟ್ ವಾಯುದಾಳಿಯಲ್ಲಿ 300 ಉಗ್ರರ ಸಾವು: ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್

ನವದೆಹಲಿ: ಭಾರತೀಯ ಸೇನೆ ಈ ಹಿಂದೆ ಪಾಕಿಸ್ತಾನದ ಮೇಲೆ ನಡೆಸಿದ್ದ ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ ಸುಮಾರು 300 ಉಗ್ರರು ಸತ್ತಿರುವುದು ನಿಜ ಎಂದು ಪಾಕಿಸ್ತಾನ ಕೊನೆಗೂ ಸತ್ಯ ಒಪ್ಪಿಕೊಂಡಿದೆ.

ಈ ಬಗ್ಗೆ ಪಾಕಿಸ್ತಾನದ ಮಾಜಿ ರಾಯಭಾರಿ ಅಘಾ ಹಿಲಾಲಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು 2019 ರ ಫೆಬ್ರವರಿ 26 ರಂದು ನಡೆದ ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ 300 ಉಗ್ರರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ. 

‘ಭಾರತ ಅಂತಾರಾಷ್ಟ್ರೀಯ ಗಡಿಯನ್ನ ದಾಟಿ ದಾಳಿ ನಡೆಸಿತ್ತು. ಇದರಲ್ಲಿ 300 ಸಾವುಗಳಾಗಿದ್ದವು. ನಮ್ಮ ಗುರಿ ಅವರ ಗುರಿಗಿಂತಲೂ ವಿಭಿನ್ನವಾಗಿತ್ತು. ನಾವು ಅವರ ಹೈಕಮಾಂಡ್​ನ್ನು ಗುರಿಯಾಗಿಸಿದ್ದೆವು. ನಮ್ಮದು ನ್ಯಾಯಯುತ ಗುರಿಯಾಗಿತ್ತು. ನಾನು ಪರೋಕ್ಷವಾಗಿ ಸರ್ಜಿಕಲ್ ಸ್ಟ್ರೈಕ್​ನ್ನು ಒಪ್ಪಿಕೊಂಡಿದ್ದೇವೆ. ಅದರಲ್ಲಿ ಯಾವುದೇ ಸಾವು ನೋವಾಗಿಲ್ಲ ಎಂದು ಅಘಾ ಹಿಲಾಲಿ ಹೇಳಿಕೆ ನೀಡಿದ್ದಾರೆ.

ಭಾರತೀಯ ಸೇನೆಯ ಮೇಲೆ ದಾಳಿ ಮಾಡಿದ್ದು ನಾವೆ!
ಇನ್ನು ಇದೇ ವೇಳೆ ಭಾರತೀಯ ಸೇನೆಯ ಮೇಲೆ ದಾಳಿ ಮಾಡಿದ್ದು ನಾವೆ ಎಂದು ಹೇಳಿಕೆ ನೀಡಿರುವ ಅಘಾ ಹಿಲಾಲಿ, ನಮ್ಮ ಗುರಿ ಅವರ ಗುರಿಗಿಂತಲೂ ವಿಭಿನ್ನವಾಗಿತ್ತು. ನಾವು ಮಿಲಿಟರಿ ಸಿಬ್ಬಂದ ಇರುವ ಅವರ ಹೈಕಮಾಂಡ್​ನ್ನು ಗುರಿಯಾಗಿಸಿದ್ದೆವು. ಮ್ಮದು ನ್ಯಾಯಯುತ ಗುರಿಯಾಗಿತ್ತು ಎಂದು ಹೇಳಿದ್ದಾರೆ.

ಉರಿ ಸೆಕ್ಚರ್ ನಲ್ಲಿನ ಉಗ್ರ ದಾಳಿಯಲ್ಲಿ ಭಾರತೀಯ ಸೇನೆಯ 30 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ವಾಯುದಾಳಿ ನಡೆಸಿದ್ದ ಭಾರತೀಯ ವಾಯುಸೇನೆ  ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್ ಉಗ್ರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಭಾರತೀಯ ವಾಯುಪಡೆಯ ಹಲವು ವಿಮಾನಗಳು ಉಗ್ರ ಶಿಬಿರಗಳ ಮೇಲೆ ಬಾಂಬ್ ಗಳ ಸುರಿಮಳೆ ಗೈದಿತ್ತು. 

ಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರರು ಹಾಕಿದ್ದ ಕ್ಯಾಂಪ್ ಮೇಲೆ ಭಾರತೀಯ ಸೇನೆ ಏರ್ ಸ್ಟ್ರೈಕ್ ನಡೆಸಿತ್ತು., ಈ ಸಂದರ್ಭದಲ್ಲಿ ದಾಳಿ ವೇಳೆ ಪಾಕ್ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಿಕೆ ನೀಡಿತ್ತು. ಪುಲ್ವಾಮಾದಲ್ಲಿ 40 ಸೈನಿಕರ ಮೇಲೆ ಉಗ್ರರು ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಈ ದಾಳಿ ನಡೆಸಿತ್ತು.

ಇದೀಗ ಭಾರತೀಯ ಸೇನೆ ಈ ಹಿಂದೆ ಪಾಕಿಸ್ತಾನದ ಮೇಲೆ ನಡೆಸಿದ್ದ ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ ಸುಮಾರು 300 ಉಗ್ರರು ಹತರಾಗಿರುವುದು ನಿಜ ಎಂದು ಪಾಕ್ ಕೊನೆಗೂ ಸತ್ಯ ಒಪ್ಪಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!