ಚಿಕ್ಕಮಗಳೂರು: ಕಾರುಗಳ ಮುಖಾಮುಖಿ ಡಿಕ್ಕಿ – ಕುಂದಾಪುರದ ಮೂವರು ದುರ್ಮರಣ
ಚಿಕ್ಕಮಗಳೂರು: ಹುಂಡೈ ಕಾರು ಮತ್ತು ಇಕೋ ಸ್ಪೋರ್ಟ್ಸ್ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ತರೀಕೆರೆ ತಾಲೂಕಿನ ರಂಗೇನಹಳ್ಳಿ ಬಳಿ ನಡೆದಿದೆ.
ಹುಂಡೈ ಕಾರು ಕುಂದಾಪುರದಿಂದ ಬೆಂಗಳೂರಿನ ಕಡೆ ಬರುತ್ತಿತ್ತು. ಇಕೋ ಸ್ಪೋರ್ಟ್ಸ್ ಕಾರು ಬೆಂಗಳೂರಿನಿಂದ ತೀರ್ಥಹಳ್ಳಿಗೆ ತೆರಳುತ್ತಿತ್ತು ರಂಗೇನಹಳ್ಳಿ ಬಳಿ ಮುಖಾಮುಖಿ ಡಿಕ್ಕಿಯಾಗಿವೆ.
ಮೃತರನ್ನು 35 ವರ್ಷದ ಅನಿಲ್, 30 ವರ್ಷದ ಸುಜಿತಾ ಮತ್ತು 26 ವರ್ಷದ ನಾಗೇಂದ್ರ ಎಂದು ಗುರುತಿಸಲಾಗಿದೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.