ಉಡುಪಿ ಪೊಲೀಸರ ಅತ್ಯುತ್ತಮ ಕರ್ತವ್ಯ ನಿರ್ವಹಣೆ: ಐಜಿಪಿಯವರಿಂದ ಪ್ರಶಂಸೆ, ನಗದು ಬಹುಮಾನ ಘೋಷಣೆ
ಉಡುಪಿ: ಉಡುಪಿ ಜಿಲ್ಲಾ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಇಲಾಖಾ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರು ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನವನ್ನು ಘೋಷಣೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ನಡೆದ ಹಲವು ಅಪರಾದ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳಿಗೆ ಈ ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ಸಿಕ್ಕಿದ್ದು ಈ ಪೈಕಿ, ವಿದೇಶದಲ್ಲಿ ಉದ್ಯೋಗದಲ್ಲಿದ್ದ ಕೋಟೇಶ್ವರದ ನಿವಾಸಿ ಹರೀಶ್ ಬಂಗೇರರವರ ಹೆಸರಿನಲ್ಲಿ ನಕಲಿ ಫೇಸ್ಸುಕ್ ಖಾತೆ ತೆರೆದು ಸೌದಿ ಅರೇಬಿಯಾದ ರಾಜನ ಬಗ್ಗೆ ಹಾಗೂ ಮುಸ್ಲಿಂ ಧರ್ಮದ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಸರಿಸಿ, ಸೌದಿ ಅರೇಬಿಯಾದಲ್ಲಿ ಹರೀಶ್ ಬಂಗೇರರವರ ಬಂಧನಕ್ಕೆ ಕಾರಣರಾದವರ ವಿರುದ್ಧ ಉಡುಪಿ ಜಿಲ್ಲೆಯ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿತ್ತು.
ಈ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ ತಂಡದಲ್ಲಿದ್ದ, ಹಾಗೂ ಈ ಹಿಂದೆ ಸೆನ್ ಅಪರಾಧ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಸೀತಾರಾಮ ಪಿ, ಹಾಗೂ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್, ಪಿಎಸ್.ಐ, ನಾರಾಯಣ, ಪಿಎಸ್ಐ ಲಕ್ಷ್ಮಣ ಹಾಗೂ ಸಿಬ್ಬಂದಿಯವರಾದ ಶ್ರೀಧರ್, ರಾಘವೇಂದ್ರ, ಕೃಷ್ಣಪ್ರಸಾದ್, ಜೀವನ್ ಹಾಗೂ ಪ್ರವೀಣ್ ಹಾಗೂ 2020ರ ಸೆ. 24 ರಂದು ಹಿರಿಯಡ್ಕ ಶ್ರೀ ವೀರಭದ್ರ ದೇವಸ್ಥಾನದ ಬಳಿ ನಡೆದ ಕಿಶನ್ ಹೆಗ್ಡೆ ಕೊಲೆ ಪ್ರಕರಣದಲ್ಲಿ ಆರೋಪಿತರಾದ 9 ಜನರನ್ನು ಶೀಘ್ರವಾಗಿ ಬಂಧಿಸಿದ ತಂಡದಲ್ಲಿದ್ದ ಬ್ರಹ್ಮಾವರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭ, ಆಗಿನ ಕಾಪು ವೃತ್ತ ನಿರೀಕ್ಷರಾದ ಮಹೇಶ್ ಪ್ರಸಾದ್, ಉಡುಪಿ ವೃತ್ತದ ವೃತ್ತ ನಿರೀಕ್ಷರಾದ ಮಂಜುನಾಥ, ಡಿಸಿಐಬಿ ಉಡುಪಿ ಇದರ ನಿರೀಕ್ಷಕರಾದ ಮಂಜಪ್ಪ ಡಿಆರ್, ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ, ಆಗಿನ ಬ್ರಹ್ಮಾವರ ಠಾಣೆಯ ಪಿಎಸ್,ಐ, ರಾಘವೆಂದ್ರ ಸಿ, ಕೋಟ ಠಾಣೆಯ ಪಿಎಸ್ಐ ಸಂತೋಷ್ ಬಿ.ಪಿ., ಎಎಸ್,ಐ, ಕೃಷ್ಣಪ್ಪ, ಡಿಸಿಐಬಿಯ ಎಎಸ್ಐ ರವಿಚಂದ್ರ, ಹಾಗೂ ಡಿಸಿಐಬಿಯ ಸಿಬ್ಬಂದಿಯವರಾದ ರಾಮು ಹೆಗ್ಗೆ, ರಾಘವೆಂದ್ರ, ಬ್ರಹ್ಮಾವರ ವೃತ್ತ ಕಛೇರಿಯ ಸಿಬ್ಬಂದಿಯವರಾದ ವಾಸುದೇವ, ಗಣೇಶ್, ಪ್ರದೀಪ್ ನಾಯಕ್ ಹಾಗೂ ಚಾಲಕ ಶೇಖರ, ಬ್ರಹ್ಮಾವರ ಠಾಣೆಯ ಸಿಬ್ಬಂದಿಯವರಾದ ದಿಲೀಪ್, ಅಣ್ಣಪ್ಪ ಮೊಗವೀರ ಮತ್ತು ರವೀಂದ್ರ, ಹಿರಿಯಡ್ಕ ಠಾಣೆಯ ಸಿಬ್ಬಂದಿ ಇಂದ್ರೇಶ್ ನಗದು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಇತ್ತೀಚೆಗೆ ಭಾರೀ ಸಂಚಲನ ಮೂಡಿಸಿದ್ದ ಮಣಿಪಾಲ ಠಾಣೆಯಲ್ಲಿ ದಾಖಲಾದ ಮಾದಕ ದ್ರವ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಅತ್ಯಂತ ಚಾಣಾಕ್ಷತನದಿಂದ ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸಿ, ಅಪಾರ ಪ್ರಮಾಣದ ಭಾರೀ ಮೌಲ್ಯದ ಮಾದಕ ದ್ರವ್ಯ ಪದಾರ್ಥಗಳನ್ನು ವಶಪಡಿಸಿಕೊಂಡ ತಂಡದ ನೇತೃತ್ವ ವಹಿಸಿದ ಅಧಿಕಾರಿಗಳಾದ ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಎಂ, ಹಾಗೂ ಮಣಿಪಾಲ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ರಾಜಶೇಖರ ವಂದಲಿರವರು ಹಾಗೂ 2019 ಮತ್ತು ಅದಕ್ಕೂ ಹಿಂದೆ ವರದಿಯಾಗಿರುವ ಪ್ರಕರಣಗಳ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ತನಿಖೆಯಲ್ಲಿರುವ ಪ್ರಕರಣಗಳ ಸಂಖ್ಯೆಯನ್ನು ಇಳಿಮುಖ ಮಾಡುವಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸಿದ ಮಣಿಪಾಲ ಠಾಣೆ ಪೊಲೀಸ್ ನಿರೀಕ್ಷಕ ಮಂಜುನಾಥ ಎಂ ಹಾಗೂ ಮಣಿಪಾಲ ಠಾಣೆಯ ಪೊಲೀಸ್ ಉಪನಿರೀಕ್ಷಕರುಗಳಾದ ರಾಜಶೇಖರ ವಂದಿ, ಕಾಪು ಠಾಣೆಯ ರಾಜಶೇಖರ ಬಿ. ಸಾಗನೂರು , ಬೈಂದೂರು ಠಾಣೆಯ ಕುಮಾರಿ ಸಂಗೀತ, ಕೋಟ ಠಾಣೆಯ ಸಂತೋಷ್ ಬಿಪಿ, ಉಡುಪಿ ನಗರ ಠಾಣೆಯ ಸಕ್ತಿವೇಲು , ಮಣಿಪಾಲ ಠಾಣೆಯ ಎಎಸ್.ಐ ರವರಾದ ದಿವಾಕರ ಶರ್ಮ, ಬೈಂದೂರು ಠಾಣೆಯ ಮಂಜುನಾಥ, ಉಡುಪಿ ನಗರ ಠಾಣೆಯ ಸಿಬ್ಬಂದಿಗಳಾದ ರಿಯಾಜ್ ಅಹ್ಮದ್ ಮತ್ತು ವಿಶ್ವನಾಥ, ಬೈಂದೂರು ಠಾಣೆಯ ನಾಗರಾಜ್, ಕೋಟಾ ಠಾಣೆಯ ಗಣೇಶ್ ಮತ್ತು ಕೃಷ್ಣ ಮಣಿಪಾಲ ಠಾಣೆಯ ಆದರ್ಶ ಹಾಗೂ ಕಾಪು ಠಾಣೆಯ ಮಹಾಬಲ ಶೆಟ್ಟಿಗಾರ್ ಮತ್ತು ಅರುಣ್ ಕುಮಾರ್ರವರು ಈ ಪುರಸ್ಕಾರಕ್ಕೆ ಭಾಜನರಾಗಿರುತ್ತಾರೆ.
ಇನ್ನು 2020ನೇ ಸಾಲಿನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 67 ಪ್ರಕರಣಗಳನ್ನು ಇತ್ಯರ್ಥಪಡಿಸಿ ನ್ಯಾಯಾಂಗ ವಿಚಾರಣೆಯ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ ತಂಡದಲ್ಲಿ ಭಾಗವಹಿಸಿದ ಪಿಎಸ್,ಐರವರುಗಳಾದ ಬೈಂದೂರು ಠಾಣೆಯ ಕುಮಾರಿ ಸಂಗೀತ,ಶಂಕರನಾರಾಯಣ ಠಾಣೆಯ ಶ್ರೀಧರ ನಾಯ್ಕ, ಪಡುಬಿದ್ರಿ ಠಾಣೆಯ ದಿಲೀಪ್, ಕುಂದಾಪುರ ಠಾಣೆಯ ಸದಾಶಿವ ಗವರೋಜಿ, ಬ್ರಹ್ಮಾವರ ಠಾಣೆ (ಪ್ರಸ್ತುತ ಕಾಪು ಠಾಣೆ) ರಾಘವೇಂದ್ರ, ಹಾಗೂ ಉಡುಪಿ ಸಂಚಾರ ಠಾಣೆಯ ಅಬ್ದುಲ್ ಖಾದರ್ ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕಹೊಂದಿ, ಅಲ್ಲಿನ ಆಗುಹೋಗುಗಳ ಬಗ್ಗೆ ಗಮನಹರಿಸಿ, ಬೀಟ್ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸಿಬ್ಬಂದಿಯವರಾದ ಕೊಲ್ಲೂರು ಠಾಣೆಯ ನವೀನ್ ದೇವಾಡಿ, ಮಲ್ಪೆಯ ರವಿರಾಜ್, ಪಡುಬಿದ್ರೆಯ ಬಸಪ್ಪ, ಶಿರ್ವಾದ ಅಂದಪ್ಪ ಹಾಗೂ ಕುಂದಾಪುರ ಠಾಣೆಯ ಪ್ರಸನ್ನರವರು ಈ ಪುರಸ್ಕಾರಕ್ಕೆ ಭಾಜನರಾಗಿರುತ್ತಾರೆ.
ಪ್ರಶಸ್ತಿ ಗಳಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್, ವಿಷ್ಣುವರ್ಧನ ಐಪಿಎಸ್, ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರು ಶ್ಲಾಘಿಸಿದ್ದಾರೆ. ಈ ವೇಳೆ ಪ್ರಂಶಸನಾ ಪತ್ರ ಹಾಗೂ ನಗದು ಪುರಸ್ಕಾರ ಘೋಷಿಸಿದ ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ ಪೊಲೀಸ್ ವರಿಷ್ಠಾಧಿಕಾರಿಯವರು ಪ್ರಶಂಸನಾ ಪತ್ರ ಹಾಗೂ ನಗದು ಪುರಸ್ಕಾರ ಪಡೆದುಕೊಂಡ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ, ಇದೇ ರೀತಿ ತಮ್ಮ ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಂಡು, ಇನ್ನೂ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ ಹಾಗೂ ಜಿಲ್ಲೆಯ ಇತರ ಅಧಿಕಾರಿ, ಸಿಬ್ಬಂದಿಯವರೂ ಸಹ ಇದೇ ರೀತಿ ತಮ್ಮ ಕಾರ್ಯದಕ್ಷತೆಯನ್ನು ನಿರ್ವಹಿಸಿ, ಮೇಲಾಧಿಕಾರಿಯವರಿಂದ ಪ್ರಶಂಸನಾ ಪತ್ರ ಹಾಗೂ ನಗದು ಪುರಸ್ಕಾರ ಪಡೆಯುವಂತಾಗಲಿ ಎಂದು ಹಾರೈಸಿದರು.