ತೊಕ್ಕೊಟ್ಟು: ಬೀಫ್ ಸ್ಟಾಲ್‌ಗೆ ಬೆಂಕಿ

ತೊಕ್ಕೊಟ್ಟು: ಬೀಫ್ ಸ್ಟಾಲ್‌ಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋದ ಘಟನೆ ಶುಕ್ರವಾರ ತಡರಾತ್ರಿ ತೊಕ್ಕೊಟ್ಟಿನ ನಗರ ಸಭಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ.

ಘಟನೆಯಿಂದ ಸ್ಟಾಲ್‌ನಲ್ಲಿದ್ದ ಸೊತ್ತುಗಳು ಸಂಪೂರ್ಣ ಸುಟ್ಟು ಹೋಗಿದೆ. ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತ ಪಡಿಸಲಾಗಿದ್ದು. ಕಳೆದ 50 ವರ್ಷಗಳಿಂದ ತೊಕ್ಕೊಟ್ಟು ಮಾರುಕಟ್ಟೆಯಲ್ಲಿ ಮಾಂಸ ವ್ಯಾಪಾರ ಮಾಡುತ್ತಿದ್ದ 4 ತಾತ್ಕಾಲಿಕ ಶೆಡ್ ಗೆ ದುಷ್ಕರ್ಮಿಗಳು ಕಳೆದ ರಾತ್ರಿ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಫಟನಾ ಸ್ಥಳಕ್ಕೆ ನಗರ ಸಭೆಯ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ  ಅಯ್ಯೂಬ್ ಮಂಚಿಲ, ಮಾಜಿ ಅಧ್ಯಕ್ಷ ರಾದಬಾಜಿಲ್ ಡಿಸೋಜ, ಯು.ಎ. ಇಸ್ಮಾಯಿಲ್, ಸದಸ್ಯರಾದ ಇಬ್ರಾಹಿಂ ಅಶ್ರಫ್, ಅಬ್ದುಲ್ ಅಝೀಝ್ ಕೋಡಿ, ವರ್ತಕರ ಸಂಘದ ಅಬ್ದುಲ್ ಕರೀಂ,  ಮನ್ಸೂರ್ ಉಳ್ಳಾಲ ಹಾಗೂ ಅನ್ಸಾರ್ ಅಳೇಕಳ ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.  ಈ ಸ್ಟಾಲ್‌ಗಳು ಪರವಾನಿಗೆ ಹೊಂದಿದ್ದು, ಇದಕ್ಕೆ ನಾವು ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದು ಉಳ್ಳಾಲ ನಗರ ಸಭೆ ಅಧ್ಯಕ್ಷರು ಚಂದ್ರ ಕಲಾ ಹಾಗೂ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!