ಜ.8: ಆತ್ಮನಿರ್ಬರ ಭಾರತ್ ಯೋಜನೆಯಡಿ ಮೀನುಗಾರಿಕಾ ಉಪಕರಣಗಳ ಉತ್ಪಾದನೆ ಬಗ್ಗೆ ಚರ್ಚೆ
ಬೆಂಗಳೂರು: ಕರಾವಳಿ ಮೀನುಗಾರಿಕೆ ಚಟುವಟಿಕೆಗಳಿಗೆ ವಿದೇಶಿ ನಿರ್ಮಾಣ ತಾಂತ್ರೀಕೃತ ಇಂಜಿನ್ ಮತ್ತು ಉಪಕರಣಗಳನ್ನು ಬಳಸುವುದನ್ನು ಕಡಿಮೆ ಮಾಡಿ, ಆತ್ಮನಿರ್ಬರ ಭಾರತ್ ಯೋಜನೆಯಡಿ ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗಿ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳುವ ಕುರಿತು ಪೂರ್ವ ಭಾವಿ ಚರ್ಚೆಗಾಗಿ ಜ.8 ರಂದು ಸಭೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಪ್ರಸ್ತುತ ಮೀನುಗಾರಿಕೆಗೆ ಬಳಸುವ ಬೋಟ್, ಯಂತ್ರೋಪಕರಣಗಳನ್ನು ಮತ್ತು ಇಂಜಿನ್ಗಳನ್ನು ವಿದೇಶಿ ಯಂತ್ರೋಪಕರಣಗಳ ಮೇಲೆ ವಿಶೇಷವಾಗಿ ಚೈನಾ ನಿರ್ಮಿತ ಉಪಕರಣಗಳನ್ನು ಬಳಸುತ್ತಿರುವುದು ಕಂಡು ಬಂದಿದೆ. ಇದರಿಂದಾಗಿ ಮೀನುಗಾರರಿಗೆ ದುಬಾರಿಯಾಗುವುದಲ್ಲದೆ, ಬಿಡಿ ಭಾಗಗಳು ಲಭ್ಯವಿಲ್ಲದೆ ತೊಂದರೆಯಾಗುತ್ತಿದ್ದು, ಆರ್ಥಿಕವಾಗಿಯೂ ರಾಜ್ಯಕ್ಕೆ ನಷ್ಟವಾಗುತ್ತದೆ. ಈ ಅಂಶಗಳನ್ನು ಗಮನಿಸಿ ಸ್ವದೇಶಿ ನಿರ್ಮಿತ ಇಂಜಿನ್/ ಉಪಕರಣಗಳ ಉತ್ಪಾದನೆ ಮಾಡಲು ಉದ್ದೇಶಿಸಿ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಉತ್ತೇಜನ ನೀಡಲು-ಯಂತ್ರೋಪಕರಣ ಉತ್ಪಾದನೆ ಮಾಡುವ ಕೈಗಾರಿಕೆ ಪ್ರತಿನಿಧಿಗಳು, ತಂತ್ರಜ್ಞಾರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲು ಉದ್ದೇಶಿಸಲಾಗಿದೆ. ಕರ್ನಾಟಕ ರಾಜ್ಯದ 03 ಕರಾವಳಿ ಜಿಲ್ಲೆಗಳಲ್ಲಿ 4745 ಸಂಖ್ಯೆಯ ಯಾಂತ್ರಿಕೃತ ಮೀನುಗಾರಿಕೆ ದೋಣಿಗಳಿರುತ್ತವ. ಇವುಗಳ ಜೊತೆಗೆ 9974 ಸಂಖ್ಯೆಯ ಮೂಟರೀಕೃತ ಮೀನುಗಾರಿಕೆ ನಾಡದೋಣಿಗಳಿರುತ್ತವೆ. ಸರ್ಕಾರದ ಆದೇಶದಂತೆ ಯಾಂತ್ರಿಕೃತ ದೋಣಿಗಳಿಗೆ 350 ಹಚ್.ಪಿ ಗರಿಷ್ಟ ಇಂಜಿನ್ ಸಾಮರ್ಥ್ಯ ನಿಗಧಿಪಡಿಸಲಾಗಿರುತ್ತದೆ. ಆದರೆ, ಯಾಂತ್ರಿಕೃತ ದೋಣಿಗಳು ಇದಕ್ಕಿಂತ ಹೆಚ್ಚಿನ ಸಾಮರ್ಥ್ಯದ ವಿದೇಶಿ ನಿರ್ಮಿತ ಬಹುತೇಕ ಚೈನಾ ನಿರ್ಮಿತ ಇಂಜಿನ್ ಗಳನ್ನು ಅಳವಡಿಸಿಕೊಂಡಿವೆ. ಕೆಲವು ಮೀನುಗಾರಿಕೆ ದೋಣಿಗಳಲ್ಲಿ 500 ಹಚ್.ಪಿ ಗೂ ಮೀರಿದ ಇಂಜಿನ್ ಗಳನ್ನು ಅಳವಡಿಸಲಾಗಿದೆ ಎಂದು ಮೀನುಗಾರರಿಂದ ದೂರುಗಳು ಬರುತ್ತಿವೆ. ಇಂತಹ ದೋಣಿಗಳು ಮೀನುಗಾರಿಕೆ ನಡೆಸಿ ನಿಗದಿತ ಅಶ್ವಶಕ್ತಿಯ ಇಂಜಿನ್ ಅಳವಡಿಸಿರುವ ದೋಣಿಗಳಿಗಿಂತ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೀನು ಹಿಡುವಳಿ ಮಾಡಿ ಸುಸ್ತಿರ ಮೀನುಗಾರಿಕೆಯ ಮೂಲೋದ್ದೇಶಕ್ಕೆ ಧಕ್ಕೆ ತರುತ್ತಿವೆ. ಅಲ್ಲದ ಇಂತಹ ಇಂಜಿನ್ ಗಳು ದುರಸ್ತಿಗೆ ಬಂದಂತಹ ಸಂದರ್ಭಗಳಲ್ಲಿ ಬಿಡಿ ಭಾಗಗಳ ಕೊರತೆಯಿಂದಾಗಿ ದೋಣಿ ಮಾಲಿಕರು ನಷ್ಟ ಅನುಭವಿಸುತ್ತಿದ್ದಾರೆ. ಅಲ್ಲದ ಇಂತಹ ವಿದೇಶಿ ಇಂಜಿನ್ ಗಳ ನಿತ್ಯ ನಿರ್ವಹಣೆಯು ಸುಲಭ ಸಾದ್ಯವಿರುವುದಿಲ್ಲ, ಇಂತಹ ದೋಣಿಗಳ ತಪಾಸಣೆಗೆ ಆಥರೈಸ್ಡ್ ಅಧಿಕಾರಿಗಳು ತೆರಳಿದಾಗ ಇಂಜಿನ್ ಸಾಮರ್ಥ್ಯವನ್ನು ಪರಿಶೀಲಿಸುವುದು/ನಿರ್ಧರಿಸುವುದು ಸಾಧ್ಯವಾಗುವುದಿಲ್ಲ. ಹಚ್ಚಿನ ಅಶ್ವಶಕ್ತಿ ಇಂಜಿನ್ ಅಳವಡಿಸಿರುವ ದೋಣಿಗಳ ಮಾಲೀಕರು ಹಾಗೂ ನಿಗದಿತ ಅಶ್ವಶಕ್ತಿ ಇಂಜಿನ್ ಅಳವಡಿಸಿರುವ ದೋಣಿಗಳ ಮಾಲೀಕರ ನಡುವೆ ವೈಮನಸ್ಸು ಗಳು ಸಹ ಉಂಟಾಗುತ್ತಿದ್ದು, ಇದು ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಅಂಶವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆಯಲ್ಲಿ ತೊಡಗುವ ದೋಣಿಗಳಲ್ಲಿ ಏಕರೂಪತೆ ಸಾಧಿಸಿ ಮೀನುಗಾರರ ನಡುವೆ ವೈಮನಸ್ಯ ಇಲ್ಲದಂತಾಗಿಸಲು ಹಾಗೂ ಸುಸ್ಥಿರ ಮೀನುಗಾರಿಕೆಗೆ ಪೂರಕ ವಾತವರಣ ಕಲ್ಪಿಸಲು ಮೀನುಗಾರಿಕೆಯ ಎಲ್ಲಾ ದೋಣಿಗಳಲ್ಲೂ ಇಂಜಿನ್ ಸಾಮರ್ಥ್ಯವನ್ನು ನಿಖರವಾಗಿ ತಿಳಿಯಬಹುದಾದ ಸ್ವದೇಶಿ ನಿರ್ಮಿತ ಇಂಜಿನ್ ಗಳನ್ನು ಅಳವಡಿಸುವುದು ಅತ್ಯಾವಶ್ಯಕ.ಹಾಗಯೇ ಮೂಟರೀಕೃತ ನಾಡ ದೋಣಿಗಳು ಸಹ ವಿದೇಶಿ ನಿರ್ಮಿತ ಔಟ್ ಬೋರ್ಡ್ ಇಂಜಿನ್ ಗಳನ್ನು ಬಳಸುತ್ತಿದ್ದು ಇವು ದುಬಾರಿ ಬೆಲೆಯವುಗಳಾಗಿವೆ, ಇವುಗಳ ನಿರ್ವಹಣೆಯು ಸಹ ಆರ್ಥಿಕವಾಗಿ ಮೀನುಗಾರರಿಗೆ ಹೂರೆಯಾಗುತ್ತಿವೆ. ದೋಣಿಗಳ ಸಾಮರ್ಥ್ಯಕ್ಕೆ ಮೀರಿದ ಇಂಜಿನ್ಗಳ ಅಳವಡಿಕೆಯಿಂದಲೂ ಮೀನುಗಾರರಿಗೆ ನಿರ್ವಹಣೆ ಹೊರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ವದೇಶಿ ನಿರ್ಮಿತ ಕಡಿಮೆ ವೆಚ್ಚದ ಹಾಗೂ ನಿರ್ವಹಣ ವೆಚ್ಚ ಕಡಿಮೆ ಇರುವ ಪರ್ಯಾಯ ಇಂಜಿನ್ ಗಳನ್ನು ಕಂಡುಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ. ಮೇಲಿನ ಎರಡು ಪ್ರಕರಣಗಳಲ್ಲೂ ಮಾನ್ಯ ಪ್ರಧಾನ ಮಂತ್ರಿಗಳ ಆತ್ಮ ನಿರ್ಭರ-ಮೇಕ್ ಇನ್ ಇಂಡಿಯ ಪರಿಕಲ್ಪನೆಯಡಿ ಪರಿಹಾರವನ್ನು ಕಂಡುಕೊಳ್ಳಲು ವಿಫುಲ ಅವಕಾಶಗಳಿದ್ದು, ಕರ್ನಾಟಕ ಕಡಲ ಮೀನುಗಾರಿಕೆಯ ಯಾಂತ್ರೀಕರಣ ಭಾಗವು ಪೂರ್ಣವಾಗಿ ಸ್ವಾವಲಂಭಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಇದೇ ಪರಿಕಲ್ಪನೆಯಡಿಯಲ್ಲಿ ಮೀನುಗಾರಿಕ ಪದ್ಧತಿಗಳಲ್ಲಿ ಮತ್ತು ಮೀನುಗಾರಿಕ ದೋಣಿಗಳಲ್ಲಿ ಬಳಸುವ ನಿರ್ಧಿಷ್ಟ ಮಾನದಂಡವಿಲ್ಲದ ಹಲವಾರು ಉಪಕರಣಗಳ ಸ್ಥಾನದಲ್ಲಿ ಪರ್ಯಾಯವಾಗಿ ಸ್ವದೇಶಿ ನಿರ್ಮಿತ ಉಪಕರಣಗಳನ್ನು ಕಂಡುಕೊಂಡು ಅಳವಡಿಸಿಕೊಂಡಲ್ಲಿ ರಾಜ್ಯದ ಮೀನುಗಾರಿಕೆಗೆ ಆರ್ಥಿಕ ಹೊರೆ ಕಡಿಮೆಯಾಗುವುದಲ್ಲದೇ ಕಡಲ ಮತ್ರ್ಯ ಸಂಪತ್ತು ಸಂರಕ್ಷಣೆಯ ಜೊತೆಗೆ ರಾಜ್ಯದ ಕಡಲ ಮೀನುಗಾರಿಕೆಯಲ್ಲಿ ಸಂಪೂರ್ಣ ಸ್ವಾವಲಂಬನೆಯನ್ನು ಸಾಧಿಸಬಹುದಾಗಿದೆ. ಈ ನಿಟ್ಟಿನಲ್ಲಿ ಇಂದಿನ ಸಭೆ ನಡೆಸಲು ನಿರ್ಧರಿಸಲಾಗಿದೆ. |