ನವದೆಹಲಿ: ಜಗತ್ತಿನ ಮೊಟ್ಟ ಮೊದಲ ವಿದ್ಯುತ್ ಚಾಲಿತ ಡಬಲ್-ಸ್ಟ್ಯಾಕ್ ಕಂಟೇನರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ : ಜಗತ್ತಿನ ಮೊಟ್ಟ ಮೊದಲ ವಿದ್ಯುತ್ ಚಾಲಿತ ಡಬಲ್-ಸ್ಟ್ಯಾಕ್ ಕಂಟೇನರ್ ರೈಲಿಗೆ ಪ್ರಧಾನಿ  ನರೇಂದ್ರ ಮೋದಿ ಅವರು ಚಾಲನೆ ನೀಡಿದರು.  ನ್ಯೂ ಅಟೇಲಿ-ನ್ಯೂ ಕಿಶನ್‌‌‌ ಘರ್‌ ಮಧ್ಯೆ ಸಾಗುವ ಜಗತ್ತಿನ ಮೊದಲ ವಿದ್ಯು‌ತ್‌ ಚಾಲಿತ ಡಬಲ್‌‌ ಸ್ಟ್ಯಾಕ್‌‌  ಕಂಟೇನರ್ ರೈಲು 1.5-ಕಿ.ಮೀ ಉದ್ದವಿರಲಿದೆ.  
ಇದೇ ವೇಳೆ, ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ನ 306 ಕಿ.ಮೀ ರೇವಾರಿ-ಮದಾರ್ ವಿಭಾಗವನ್ನು ಕೂಡಾ ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು.
ಎರಡು ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, “ಇದು ದೇಶದ ವಿವಿಧ ಭಾಗಗಳಲ್ಲಿ ನೂತನ ಅಭಿವೃದ್ದಿ ಕೇಂದ್ರಗಳ ರಚನೆಗೆ ನೆರವಾಗಲಿವೆ. ಅಲ್ಲದೇ, ದೇಶದ ಪಾಲಿಗೆ ಪೂರ್ವ-ಪಶ್ಚಿಮ ರಿಸರ್ವ್ ಸರಕು ಕಾರಿಡಾರ್‌ಗಳು ಅಭಿವೃದ್ದಿಯ ದಿಕ್ಕನ್ನು ಬದಲಾಯಿಸಲಿವೆ” ಎಂದರು.
ಈ ವೇಳೆ  ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ನಿರ್ಮಾಣದ ಸಂದರ್ಭದಲ್ಲಿ ಆರ್ಥಿಕ ಹಾಗೂ ತಾಂತ್ರಿಕವಾದ ನೆರವು ನೀಡಿದ ಜಪಾನ್‌‌ ಗೆ ಧನ್ಯವಾದ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!