ಉಡುಪಿ: ಕೆಎಸ್’ಆರ್’ಟಿಸಿ ಬಸ್ಸ್ ನಿಲ್ದಾಣ ಈಗ ಖಾಸಗಿ ವಾಹನ ನಿಲ್ದಾಣವಾಗಿದೆಯೇ?

ಉಡುಪಿ: ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ಹಲವಾರು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಆದರೆ ನಮ್ಮಲ್ಲಿ ನಿಯಮಗಳನ್ನು ಪಾಲಿಸುವುದಕ್ಕಿಂತ ನಿಯಮಗಳನ್ನು ಉಲ್ಲಂಘಿಸುವವರೆ ಹೆಚ್ಚು ಬೈಕ್ ನಲ್ಲಿ ಸಂಚರಿಸುವಾಗ ಹೆಲ್ಮೆಟ್ ಹಾಕದಿರುವುದು, ಓವರ್ ಸ್ಪೀಡ್, ಓವರ್ ಟೇಕ್ ಇಷ್ಟೇ ನೋ ಪಾರ್ಕಿಂಗ್ ಏರಿಯಾದಲ್ಲಿ ವಾಹನಗಳ ಪಾರ್ಕಿಂಗ್ ಮಾಡುವುದು ಮೊದಲಾದ ನಿಯಮಗಳನ್ನು ಹೆಚ್ಚಾಗಿ ಉಲ್ಲಂಘಿಸೋದನ್ನು ನಾವು ನೋಡುತ್ತಲೇ ಇರುತ್ತೇವೆ.

ಇದೀಗ ಇಂತಹದ್ದೆ ಒಂದು ನಿಯಮವನ್ನು ಗಾಳಿಗೆ ತೂರಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ K.S.R.T.C.ಬಸ್ಸ್ ನಿಲ್ದಾಣದ ಹಿಂಬಾಗದಲ್ಲಿ ಖಾಸಗಿ ವಾಹನಗಳು ನಿಲುಗಡೆಯಾಗಿರುವುದು ಕಂಡು ಬಂದಿದೆ. ಅದರಲ್ಲೇನಿದೆ ಅಂತ ಅನ್ಕೊಳ್ಳಬಹುದು ಆದ್ರೆ ಇಲ್ಲೇ ಇರೋದು ವಿಷಯ. ಈ ಬಸ್ಸ್ ನಿಲ್ದಾಣದ ಒಳಗೆ  ಖಾಸಗಿ ವಾಹನಗಳಿಗೆ ನಿಷೇಧವಿದೆ. ಆದರೂ ಇಲ್ಲಿ ಸಾಲು ಸಾಲು ಖಾಸಗಿ ವಾಹನಗಳನ್ನು ಪಾರ್ಕಿಂಗ್ ಮಾಡಿರುವುದು ಕಂಡು ಬಂದಿದೆ.
 
ನಿಯಮ ಮೀರಿ ಈ ಭಾಗದಲ್ಲಿ ವಾಹನ ನಿಲುಗಡೆ ಆಗುತ್ತಿರುವುದು ಪೋಲಿಸರ ಗಮನಕ್ಕೆ ಬಂದಿಲ್ಲವೆ, ಅಥವಾ ಈ ಬಗ್ಗೆ ತಿಳಿದಿದ್ದರೂ ತಿಳಿಯದ ಹಾಗೆ ಇದ್ದಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಏನೇ ಆದರೂ ಯಾವುದೇ ನಿಯಮಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇರುತ್ತದೆ. ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ.

Leave a Reply

Your email address will not be published. Required fields are marked *

error: Content is protected !!