ಕಾಂಗ್ರೆಸ್ ತೊರೆದು ಜೆಡಿಎಸ್’ಗೆ ಸೇರುತ್ತಿದ್ದೇನೆ ಎಂದ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ

ಬೆಂಗಳೂರು:  ಕಾಂಗ್ರೆಸ್ ತೊರೆದು ನಾನು ಜೆಡಿಎಸ್‍ಗೆ ಸೇರುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಬಹಿರಂಗ ಹೇಳಿಕೆ ನೀಡಿದ್ದಾರೆ.  ಈ ಕುರಿತು ಬೆಂಗಳೂರಿನ ಶಾಸಕರ ಭವನದಲ್ಲಿ ಮಾತನಾಡಿದ ಅವರು, ನನಗೆ ಏನಾದರು ಆಗಬೇಕು ಎಂದು ನಾನು ಜೆಡಿಎಸ್ ಪಕ್ಷಕ್ಕೆ ಹೋಗುತ್ತಿಲ್ಲ. ದೇಶ ಮತ್ತು ರಾಜ್ಯಕ್ಕೆ ಏನಾದರೂ ಮಾಡಬೇಕು ಎನ್ನುವ ಕಾರಣಕ್ಕೆ ಜೆಡಿಎಸ್ ಗೆ ಹೋಗ್ತಿದ್ದೇನೆ ಎಂದರು.

ನಾನು ಮನಸ್ಸು ಮಾಡಿದ್ದರೆ ಯಾವತ್ತೋ ಮುಸ್ಲಿಂ ಲೀಡರ್ ಆಗ್ತಿದ್ದೆ ಎಂದ ಅವರು, ನನಗೆ ಈ ಬಗ್ಗೆ ಯಾವುದೇ ಆಸೆಗಳಿಲ್ಲ. ವಾಸ್ತವಾಗಿ ನನಗೆ ಹೇಳಲು ಯಾವುದೇ ಭಯವಿಲ್ಲ ನಾನು ಕಾಂಗ್ರೆಸ್ ಬಿಟ್ಟು ಜೆಡಿಎಸ್‍ಗೆ ಹೋಗುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಕೆಟ್ಟ ಬುದ್ಧಿಯಿಂದಲೇ ರಾವಣ ಸತ್ತ, ಮಹಿಷಾಸುರ ನಾಶವಾದ. ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬರುವುದಿಲ್ಲ, ಉಪ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಹೇಳಿದ್ದೆ. ಅದರಂತೆ ಕಾಂಗ್ರಸ್ ಪಕ್ಷ ಇಂದು ಸೋತಿದೆ. ಹಾಗಂತ ನಾನು ಕಾಲಜ್ಞಾನ ಹೇಳುತ್ತಿಲ್ಲ. ನನಗೂ ದೇವರು ಒಂದಿಷ್ಟು ಜ್ಞಾನ ಕೊಟ್ಟಿದ್ದಾನೆ. ಸದ್ಯಕ್ಕೆ ನಾನು ಯಾವುದೇ ತಂತ್ರವನ್ನು ಬಿಟ್ಟುಕೊಡುವುದಿಲ್ಲ. ಈಗ ಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದರು.

ಈ ವೇಳೆ ಅಪ್ಪ-ಮಕ್ಕಳು ಜೆಡಿಎಸ್ ಪಕ್ಷದಲ್ಲಿ ಮಾತ್ರ ಇದ್ದಾರಾ? ಎಂದು ಪ್ರಶ್ನಿಸಿದ ಅವರು,  ಅಪ್ಪ-ಮಕ್ಕಳ ಪಕ್ಷ ಕಾಂಗ್ರಸ್ಸಿನಲ್ಲಿ ಇಲ್ವಾ, ಆರ್.ಜೆ.ಡಿಯಲ್ಲಿ ಇಲ್ವಾ ಎಂದು ಹೇಳುವ ಮೂಲಕ ರೈತರು ಮುಂದಿನ ಬೆಳೆ ಬೆಳೆಯೋಕೆ ಬೀಜ ಇಟ್ಟುಕೊಂಡಿರುತ್ತಾರೋ ಹಾಗೆಯೇ ದೇವೇಗೌಡರು ಪಕ್ಷ ಕಟ್ಟಲು ಉತ್ತಮ ಸಂಕಲ್ಪ ಇಟ್ಕೊಂಡಿದ್ದಾರೆ. ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ಜೆಡಿಎಸ್‍ಗೆ ಸೇರಿಕೊಳ್ಳಲು ಇನ್ನೂ ಸಮಯಾವಕಾಶವಿದೆ ಎಂದರು. 

ಈ ಕುರಿತು ಮಾತು ಮುಂದುವರೆಸಿದ ಅವರು, ಪ್ರಭಾಕರ್ ಕೋರೆ, ಉಮೇಶ್ ಕತ್ತಿ ನನ್ನನ್ನು ಭೇಟಿ ಮಾಡಿ ಮತನಾಡಿದ್ದು ನಿಜ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಕೂಡ ನನಗೆ ಒಳ್ಳೆಯ ಸ್ನೇಹಿತರು. ಅರ್ ಎಸ್ ಎಸ್ ನವರು ಕೂಡ ನನಗೆ ಸ್ನೇಹಿತರು. ಅನೇಕರು ನನ್ನ ಮನೆಗೆ ಬಂದಿದ್ದಾರೆ ಎಂದು ಹೇಳಿದರು.

1 thought on “ಕಾಂಗ್ರೆಸ್ ತೊರೆದು ಜೆಡಿಎಸ್’ಗೆ ಸೇರುತ್ತಿದ್ದೇನೆ ಎಂದ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ

  1. ರೊಟ್ಟಿ ಬಿದ್ದಕಡೆ ಲಾಗಹೊಡೆಯೋದು ಈ ಇಬ್ರಾಹಿಂ ನ ಹುಟ್ಟುಗುಣ. ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಸಿಗದ ಪಸೆಗಾಗಿ ಜೆಡಿಎಸ್ ನ ಕಾಲುಹಿಡಿಯಲು ಹೊರಟ ಈ ಹಎಡಬಿಡಂಗಿ, ರಾಜಕಾರಣಿ ಇನ್ನು ಮುಂದೆ ಏನೇನು ಹೊಸ ಮಸಲತ್ತುಗಳನ್ನು ಹೆಣೆಯಲಿದ್ದಾನೋ?

Leave a Reply

Your email address will not be published. Required fields are marked *

error: Content is protected !!