ಮದುವೆಯಾಗದ ಅರ್ಚಕ, ಪುರೋಹಿತರಿಗೆ ಗುಡ್ ನ್ಯೂಸ್ ನೀಡಿದ ಸರಕಾರ!
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅರ್ಚಕ, ಪುರೋಹಿತರ ವೃತ್ತಿ ನಡೆಸುತ್ತಿರುವವರಿಗೆ ವಧು ದೊರಕುವುದು ಕಷ್ಟವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಅರ್ಚಕರು, ಪುರೋಹಿತರ ವೃತ್ತಿಯವರನ್ನು ಮದುವೆಯಾಗುವ ವಧುವಿಗೆ ಮೈತ್ರಿ ಯೋಜನೆಯಡಿ ಮೂರು ಲಕ್ಷ ರೂ. ಮೊತ್ತದ ಬಾಂಡ್ ವಿತರಿಸಲು ನಿರ್ಧರಿಸಿದೆ.
ಈ ಕುರಿತು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಎಚ್. ಸಚ್ಚಿದಾನಂದ ಮಾಹಿತಿ ಹಂಚಿ ಕೊಂಡಿದ್ದಾರೆ. ಈ ಯೋಜನೆಗೆ ಜನವರಿ 6 ರಂದು ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಅರ್ಚಕರು ಮತ್ತು ಪುರೋಹಿತರನ್ನು ಮದುವೆಯಾಗುವ ವಧುವಿಗೆ ಮೂರು ಲಕ್ಷ ರೂ. ಮೊತ್ತದ ಬಾಂಡ್ ವಿತರಿಸಲಾಗುತ್ತದೆ. ಮೂರು ವರ್ಷಗಳ ಬಳಿಕ ಫಲಾನುಭವಿಗಳು ಬಾಂಡ್ ನ ಹಣವನ್ನು ಪಡೆಯಬಹುದು ಎಂದು ಅವರು ತಿಳಿಸಿದರು.