ಸಾವಿತ್ರಿ ಫುಲೆಯ ಹಾದಿಯಲ್ಲಿ ದಲಿತ ಮಹಿಳೆಯರು ಸಾಗಬೇಕು: ಜಯನ್ ಮಲ್ಪೆ

ಮಲ್ಪೆ: ದಲಿತ ಲೋಕದ ಅಕ್ಷರ ಜ್ಯೋತಿ,ವಿದ್ಯಾಮಾತೆ ಸಾವಿತ್ರಿ ಜ್ಯೋತಿ ಭಾಫುಲೆ ದಲಿತರಿಗೆ ವಿದ್ಯೆ ಕಲಿಸಿದ ಗುರು,ಅವಮಾನ ಸಂಕಷ್ಟಗಳನೆದುರಿಸುವಗ ಸಂತೈಸಿ ಕ್ರಾಂತಿದಾರಿಯಲಿ ಸಾಮಾನತೆ ನೀಡಿದ ಈ ವಿದ್ಯಾಮಾತೆಯ ಹಾದಿಯಲ್ಲಿ ದಲಿತ ಮಹಿಳೆಯರು ಸಾಗಿದರೆ ಮಾತ್ರ ಈ ನಾಡಿನಲ್ಲಿ ಕ್ಷೀಪ್ರ ಕಾಂತ್ರಿಗೆ ದಾರಿಯಾದಿತು ಎಂದು ದಲಿತ ಚಿಂತಕ ಹಾಗೂಉ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಅವರ ರವಿವಾರ ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ಅಂಬೇಡ್ಕರ್ ಯುವಸೇನೆಯ ಮಲ್ಪೆ ನಗರಶಾಖೆ ಆಯೋಜಿಸಿದ್ದ ಸಾವಿತ್ರಿ ಭಾಯಿಫುಲೆಯವರ ೧೯೦ನೇ ಜನ್ಮದಿನಾಚರಣೆಯ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡುತ್ತಾ,
ಸಾವಿತ್ರಿ ಫುಲೆ ಈ ಜಾತಿವ್ಯವಸ್ಥಯಲ್ಲಿ ಅನುಭವಿಸಿದ ನೋವನ್ನು ನಮ್ಮ ದಲಿತ ಮಹಿಳೆಯರು ಸರಿಯಾಗಿ ಅರ್ಥೈಸಿಕೊಂಡಿಲ್ಲ, ಬಡಜನರ ಶೈಕ್ಷಣಿಕ ಅಭಿವೃದ್ಧಿಗಾಗಿ ಅವರು ಅನುಭವಿಸಿದ ನೋವನ್ನು ನಮ್ಮ ವಿದ್ಯಾವಂತ ದಲಿತ ಸಮಾಜ ಇಂದಿಗೂ ಅವರ ನೆನಪನ್ನು ಸ್ಮರಿಸದಿರುವುದು ನಿಜಕ್ಕೂ ನೋವಿನ ವಿಚಾರ,ನಮಗೆ ವಿದ್ಯೆನೀಡಿದ ನಿಜವಾದ ತಾಯಿಯನ್ನು ಮರೆಯಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಸ್ ಸಾಲ್ಯಾನ್ ವಹಿಸಿದ್ದರು. ದಲಿತ ಮುಖಂಡ ಸುಂದರ ಕಪ್ಪೆಟ್ಟು ಮಾತನಾಡಿ ಶೋಷಿತ ಸಮಾಜದಲ್ಲಿ ಸ್ವಾಭಿಮಾನ ಮೂಡಿಸುವ ದಲಿತ ನಾಯಕರು ಮೊದಲು ಸಾವಿತ್ರಿ ಜ್ಯೋತಿ ಬಾಫುಲೆಯನ್ನು ದಲಿತ ಲೋಕಕ್ಕೆ ಅರ್ಥ್ಯಸಿಕೊಡಬೇಕು ಅದನ್ನು ಬಿಟ್ಟು ಅಂಬೇಡ್ಕರ್ ಹೆಸರಿನಲ್ಲಿ ಜೋಳಿಗೆ ಹಾಕಿಕೊಂಡು ತಿರುಕನ ಕನಸು ಕಾಣುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಸಮಾಜ ಸೇವಕಿ ಶಾರದ ನೆರ್ಗಿ.ಶಶಿಕಲಾ ತೊಟ್ಟಂ,ರಾಜೇಶ್ ಕೆಮ್ಮಣ್ಣು, ಯುವನಾಯಕ ಸುಮಿತ್ ನೆರ್ಗಿ,ವಿನೋದ,ದಿನೇಶ್ ಜವನೆರಕಟ್ಟೆ, ಕೃಷ್ಣ ಶ್ರೀಯಾನ್,ಸಂತೋಷ್ ಕಪ್ಪಟ್ಟು,ದೀಪಕ್ ಕೊಡವೂರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಅಂಬೇಡ್ಕರ್ ಯುವಸೇನೆಯ ಮುಖಂಡರಾದ ಸುಮ ನೆರ್ಗಿ, ವೀಣಾ, ಪೂರ್ಣಿಮಾ ಶಂಕರ್,ಸಭಿತಾ,ಶಾರದ,ಸುಜಾತ ಮುಂತ್ತಾದವರು ಭಾಗವಹಿಸಿದ್ದರು, ಭಗವಾನ್ ನೆರ್ಗಿ ಸ್ವಾಗತಿಸಿ, ಗುಣವಂತ ತೊಟ್ಟಂ ವಂದಿಸಿದರು, ಗಣೇಶ್ ನೆರ್ಗಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!