ಹುಟ್ಟೂರಲ್ಲೇ ಅತ್ಯಾಧುನಿಕ ರೆಕಾರ್ಡಿಂಗ್ ಸ್ಟುಡಿಯೋ ನಿರ್ಮಿಸಿದ ರವಿ ಬಸ್ರೂರ್
ಕುಂದಾಪುರ: ಸ್ಯಾಂಡಲ್ವುಡ್ ನ ಪ್ರಸಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರ್ ತಮ್ಮ ಹುಟ್ಟೂರು ಕುಂದಾಪುರದ ಬಸ್ರೂರಿನಲ್ಲಿ ನೂತನವಾದ ಮ್ಯೂಸಿಕ್ ಆಂಡ್ ಮೂವಿ ಸ್ಟುಡಿಯೋ ನಿರ್ಮಿಸಿದ್ದಾರೆ. ಈ ಅತ್ಯಾಧುನಿಕ ಸ್ಟುಡಿಯೋವನ್ನು “ಕೆಜಿಎಫ್” ನಿರ್ದೇಶಕ ಪ್ರಶಾಂತ್ ನೀಲ್ ಉದ್ಘಾಟಿಸಿದ್ದಾರೆ.
“ಇದು ನನ್ನ ಜೀವನದ ಅತ್ಯುತ್ತಮ ದಿನ” ಎಂದು ಹೇಳಿರುವ ರವಿ ಬಸ್ರೂರ್ “ನನ್ನ ಊರಿನಲ್ಲಿ ಡ್ರೀಮ್ ಸ್ಟುಡಿಯೋ ನಿರ್ಮಿಸುವ ನನ್ನ ಕನಸು ಇಂದು ನಿಜವಾಯಿತು ಮತ್ತು ಇದನ್ನು ನನ್ನ ಮಾರ್ಗದರ್ಶಕ ಪ್ರಶಾಂತ್ ನೀಲ್ ಉದ್ಘಾಟಿಸಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ. ಜನವರಿ 1ರಂದು ರವಿ ಜನ್ಮದಿನದಂದೇ ಸ್ಟುಡಿಯೋ ಪ್ರಾಂಭಿಸಿದ್ದಾರೆ .
ನೀವು ನನ್ನನ್ನು ನಂಬಿದಿರಿ, ನನ್ನಲ್ಲಿ ಸ್ಪೂರ್ತಿಯ ಕಿಡಿ ಹೊತ್ತಿಸಿದಿರಿ.ನಾನು ಏನು ಎಂಬುದರ ಹಿಂದಿನ ಶಕ್ತಿ ನೀವಾಗಿದ್ದೀರಿ, ಬಹಳ ಧನ್ಯವಾದಗಳು” ಎಂದು ರವಿ ಬಸ್ರೂರ್ ಪ್ರಶಾಂತ್ ನೀಲ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಲಾಕ್ ಡೌನ್ ವೇಳೆ ಹುಟ್ಟೂರಿಗೆ ಆಗಮಿಸಿದ್ದ ರವಿ ಬಸ್ರೂರ್ ಇದೀಗ ಇಲ್ಲಿಂದಲೇ ಕನ್ನಡ, ತೆಲುಗು, ತಮಿಳು ಸಿನಿಮಾಗಳ ಕೆಲಸದಲ್ಲಿ ತೊಡಗಿದ್ದಾರೆ.