ಮದುವೆಗೆ ಹೊರಟಿದ್ದ ಬಸ್ ಮನೆ ಮೇಲೆ ಉರುಳಿ ಏಳು ಮಂದಿ ಮೃತ್ಯು

ಮಂಗಳೂರು: ಮದುವೆಗೆ ಹೊರಟಿದ್ದ ಬಸ್ ರಸ್ತೆ ಬದಿಯಿದ್ದ ಮನೆ ಮೇಲೆ ಉರುಳಿಬಿದ್ದ ಪರಿಣಾಮ ಏಳು ಮಂದಿ ದುರ್ಮರಣ ಹೊಂದಿದ್ದಾರೆ. 

ಕರ್ನಾಟಕ-ಕೇರಳ ಗಡಿಭಾಗದ ಕಲ್ಲಪ್ಲಳ್ಳಿ ಬಳಿ ಅಪಘಾತ ಸಂಭವಿಸಿದೆ. ಪುತ್ತೂರಿನಿಂದ ಕೇರಳದ ಪಾಣತ್ತೂರಿಗೆ 63 ಮಂದಿ ಬಸ್ ನಲ್ಲಿ ತೆರಳುತ್ತಿತ್ತು. ಆದರೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಮನೆಯ ಮೇಲೆ ಉರುಳಿ ಬಿದ್ದಿದೆ. 

ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದು ಹಲವು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೇರಳ ಮತ್ತು ಮಂಗಳೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರನ್ನು ಆದರ್ಶ್(12), ಶ್ರೇಯಸ್(13), ರವಿಚಂದ್ರನ್(40), ರಾಜೇಶ್(45), ಸುಮತಿ(50), ಜಯಲಕ್ಷ್ಮಿ(39) ಮತ್ತು ಸಸೀಂದ್ರ ಪೂಜಾರ(43) ಮೃತ ದುರ್ದೈವಿಗಳು.

Leave a Reply

Your email address will not be published. Required fields are marked *

error: Content is protected !!