ಉದ್ಯಾವರ: ಕಾಂಗ್ರೆಸ್ ನ ಭದ್ರಕೋಟೆಯನ್ನು ಛಿದ್ರ ಮಾಡಿದ ಬಿಜೆಪಿ!

ಉದ್ಯಾವರದ ಗ್ರಾಮ ಪಂಚಾಯತ್ ಚುನಾವಣೆ ಈ ಭಾರಿ ದಾಖಲೆಯನ್ನು ಸೃಷ್ಟಿಸಿದೆ. ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಉದ್ಯಾವರದಲ್ಲಿ ಈಗ ಕಮಲ ಅರಳಿದೆ. 

ಆಸ್ಕರ್ ಫೆರ್ನಾಂಡಿಸ್ ಅವರ ಆಪ್ತ ಮಂಜುನಾಥ ಉದ್ಯಾವರ ಇವರ ಸಹಕಾರದೊಂದಿದೆ ಉದ್ಯಾವರದಲ್ಲು ಭರಪೂರ ಅಭಿವೃದ್ಧಿ ಕಾರ್ಯ ನಡೆದಿದ್ದು, ಉದ್ಯಾವರದ ಸರ್ವತೋಮುಖ ಅಭಿವೃದ್ಧಿಗೆ  ನಾಂದಿ ಹಾಡಿದ್ದರು.

ಇಂದು ಉದ್ಯಾವರ ಒಂದು ಪ್ರಮುಖ ಕ್ಷೇತ್ರವಾಗಿ ಹೊರಮ್ಮಿದೆ ಅಂದ್ರೆ ಅದರಲ್ಲಿ ಮಂಜುನಾಥ್ ಉದ್ಯಾವರ ಅವರ ಪಾತ್ರ ತುಂಬಾನೇ ಪ್ರಮುಖವಾಗಿದೆ. ಸದಾ ಗೆಲುವಿನ ನಗೆ ಬೀರುತ್ತಿದ್ದ ಕಾಂಗ್ರೆಸ್ ಗೆ ಈ ಭಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಿದೆ.

ಮತದಾರರ ತೀರ್ಪು ನಿನ್ನೆ ಹೊರಬಿದ್ದಿದ್ದು, ಈ ಭಾರಿ ಮತದಾರರು ಕೈ ತೊರೆದು ಕಮಲ ಆಯ್ಕೆ ಮಾಡಿದ್ದು ಸ್ಪಷ್ಟವಾಗಿ ಗೋಚರವಾಗುತ್ತದೆ. ಹಲವಾರು ವರುಷಗಳಿಂದ ಪ್ರಬಲ ಪಕ್ಷಗಳು ಗೆಲ್ಲುತ್ತಾನೆ ಬಂದಿದ್ದರೂ ಸಮಸ್ಯೆಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರು, ಇದರಿಂದ  2010 ರಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ  ಪರಿಸರ ಹೋರಾಟ ಸಮಿತಿ ಸ್ಪರ್ಧಿಸಿದ್ದು ಮಾತ್ರವಲ್ಲದೆ ಅತೀ ಹೆಚ್ಚು ಮತಗಳಿಂದ ಗೆದ್ದು ಅಧಿಕಾರ ತನ್ನದಾಗಿಸಿಕೊಂಡಿತು.

ಬಳಿಕ 2015 ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತ್ತೆ ಉದ್ಯಾವರವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡು ಆಧಿಕಾರಕ್ಕೆ ಏರಿತ್ತು. ಆದರೆ ಈ ಭಾರಿ ಗ್ರಾಮ ಪಂಚಾಯತ್ ಚುನಾವಣೆಯ ಜಿದ್ದಾಜಿದ್ದಿನ ಫೈಟ್ ನಲ್ಲಿ 30 ಸ್ಥಾನಗಳಲ್ಲಿ 15 ಸ್ಥಾನಗಳ ನ್ನು ಬಾಚಿಕೊಳ್ಳುವ ಮೂಲಕ ಬಿಜೆಪಿ ಉದ್ಯಾವರದಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ 12 ಸ್ಥಾನಗಳನ್ನು ಪಡೆದು ಕೊಂಡಿದೆ. ಇನ್ನು ಪಕ್ಷೇತರರು 2 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ಕಾಂಗ್ರೆಸ್ ನ ಆಡಳಿತ ವಿರೋಧಿ ಹಾಗೂ ಮೋದಿ ಅಲೆಯ ಪ್ರಭಾವದಿಂದಾಗಿ ಈ ಭಾರಿ ಕಾಂಗ್ರೆಸ್ ಗೆ ಹಿನ್ನೆಡೆಯಾಗಿ ಬಿಜೆಪಿ ಬಲ ಪಡೆದುಕೊಳ್ಳಲು ಕಾರಣವಾಗಿರಬಹುದು. ಇದಲ್ಲದೆ ಉದ್ಯಾವರದಲ್ಲಿ ಪಕ್ಷಕ್ಕಾಗಿ ಹಗಲಿರುಳು ದುಡಿದ ಪಕ್ಷದ ಕಾರ್ಯ ಕರ್ತರ ಪರಿಶ್ರಮ ಹಾಗೂ  ಪಂಚಾಯತ್ ನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂಬ ಎಲ್ಲರ ಒಗ್ಗಟಿನ ಪ್ರಭಾವದಿಂದ ಈ ಭಾರಿ ಉದ್ಯಾವರದಲ್ಲಿ ಬಿಜೆಪಿ ಗೆದ್ದು ಬೀಗುವಂತಾಗಿದೆ.

ಇನ್ನು ಉದ್ಯಾವರ ಗ್ರಾಮ ಪಂಚಾಯತ್ ನ 12ನೇ ವಾರ್ಡ್ ನಲ್ಲಿ ಮೊದಲಿನಿಂದಲೂ  ಫಿಶ್ ಮಿಲ್ ಗೆ ವಿರೋಧ ವ್ಯಕ್ತವಾಗುತ್ತಿದ್ದುದು, ಎಂದಿನಂತೆ ಫಿಶ್ ಮಿಲ್ ರಾಜಕಾರಣವೇ ಬಿಜೆಪಿ ಗೆಲುವಿಗೆ ಕಾರಣವಾಯಿತಾ..? ಯಾಕೆಂದರೆ  ಈ ಭಾಗದಲ್ಲಿಯೂ 3 ಸ್ಥಾನಗಳಲ್ಲಿ 2 ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿ ಕೊಂಡರೆ ಒಂದು ಸ್ಥಾನ ಪಕ್ಷೇತರರ ಪಾಲಿಗೆ ಸೇರಿದೆ.

Leave a Reply

Your email address will not be published. Required fields are marked *

error: Content is protected !!