ಉಡುಪಿ: ಗೀತಾಜಯಂತಿ ಕಾರ್ಯಕ್ರಮ ಸಂಪನ್ನ
ಉಡುಪಿ: ಗೀತಾಜಯಂತಿ ಕಾರ್ಯಕ್ರಮವು ತೆಂಕಪೇಟೆಯ “ಸಂಸ್ಕೃತ ಭಾರತಿ” ಕಾರ್ಯಾಲಯದಲ್ಲಿ ಡಿ. 25 ರಂದು ವಿಜೃಂಭಣೆಯಿಂದ ನಡೆಯಿತು. ಈ ವೇಳೆ ಪೂಜೆ ಹಾಗೂ ಸಮಾಜನಿಧಿ ಸಮರ್ಪಣೆ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಡಾ ಯಾಜಿ ನಿರಂಜನ ಭಟ್ಟ ಅವರು,ಗೀತೆಯ ಮಹತ್ವದ ಕುರಿತು ಮಾಹಿತಿ ನೀಡಿದರು.
ಸಂಸ್ಕೃತ ಭಾರತಿಯ ಕೆಲಸಗಳ ಬಗ್ಗೆ ಅಧ್ಯಕ್ಷ ಶ್ರೀಧರ ಚಾರ್ಯರು ಮಾಹಿತಿ ನೀಡಿದರು. ಇದೇ ವೇಳೆ ಭಾರತದಲ್ಲಿಯೇ ಮೊದಲು ಎಂಬಂತೆ ಕೇವಲ ಸಂಸ್ಕೃತ ಭಜನೆಗಳನ್ನು ಮಾತ್ರ ಹೇಳುವ ವಿಶಿಷ್ಟವಾದ “ಸಂಸ್ಕೃತ ಭಜನಾ ಮಂಡಳಿ ಉಡುಪಿ” ಇದರ ಉದ್ಘಾಟನಾ ಕಾರ್ಯಕ್ರಮವೂ ನಡೆಯಿತು.
ಕಾರ್ಯಕ್ರಮ ದಲ್ಲಿ ವಿವಿಧ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಕೃತ ಭಾರತಿಯ ಜಿಲ್ಲಾ ಸಂಯೋಜಕಿ ಸುಧಾಶೆಣೈ, ಸಹಸಂಯೋಜಕ ನಟೇಶ್, ಸದಸ್ಯರಾದ ಶಕುಂತಳಾ, ಮಮತಾ, ಸಂಸ್ಕೃತ ಭಾರತಿಯ ಕಾರ್ಯಕರ್ತರು, ಸುಪ್ರೀತಾ, ಕೃಷ್ಣಮೂರ್ತಿ, ಶೋಭಾ, ಹಾಗೂ ಸಂಸ್ಕೃತಾಭಿಮಾನಿಗಳು ಉಪಸ್ಥಿತರಿದ್ದರು.