ಹನುಮ ಹುಟ್ಟಿದ ದಿನಾಂಕ ಗೊತ್ತಿದ್ರೆ ಜಯಂತಿ ಆಚರಣೆ ಮಾಡು: ಕಾರ್ಯಕರ್ತನಿಗೆ ಹೇಳಿದ ಸಿದ್ದರಾಮಯ್ಯ
ಮೈಸೂರು: ಈ ಹಿಂದೆ ಮುಖ್ಯ ಮಂತ್ರಿಯಾಗಿದ್ದಾಗ ಮೀನು ತಿಂದು ದೇವಸ್ಥಾನಕ್ಕೆ ಹೋಗಿ, ಸಮರ್ಥಿಸಿಕೊಂಡು ವಿವಾದ ಮೈಮೇಲೆ ಹತ್ತಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗಾ ಮತ್ತೊಂದು ವಿವಾದ ಇವರ ಹಿಂದೂ ವಿರೋಧಿ ದೋರಣೆ ಭಗವದ್ ಭಕ್ತರ ಕೆಂಗೆಣ್ಣಿಗೆ ಗುರಿಯಾಗುವುದಂತೂ ನಿಶ್ಚಿತವಾಗಿದೆ.
ಇಂದು ಮೈಸೂರಿನ ಸಿದ್ದರಾಮನ ಹುಂಡಿಗೆ ಭೇಟಿ ನೀಡಿದ ವೇಳೆ ಸಿದ್ದರಾಮಯ್ಯ ಹನುಮ ಜಯಂತಿಯ ಬಗ್ಗೆ ತಮ್ಮ ಮನದ ಮಾತನ್ನು ಹೊರ ಹಾಕಿದ್ದಾರೆ.
ಕಾರ್ಯಕರ್ತರ ಜೊತೆ ಮಾಂಸಹಾರ ಊಟಕ್ಕೆ ಕುಳಿತಾಗ ಸಿದ್ದರಾಮಯ್ಯಗೆ ಕಾರ್ಯಕರ್ತನೊರ್ವ ಅಣ್ಣಾ, ಇವತ್ತು ಹನುಮ ಜಯಂತಿ ಎಂದರು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಯಾವ ಜಯಂತಿ? ಹನುಮ ಹುಟ್ಟಿದ ದಿನಾಂಕ ನಿನಗೆ ಗೊತ್ತಾ? ಸ್ಪಷ್ಟವಾಗಿ ಗೊತ್ತಿದ್ರೆ ಜಯಂತಿ ಆಚರಣೆ ಮಾಡು ಇಲ್ಲದಿದ್ರೆ ಚಿಕನ್ ತಿನ್ನಬಹುದು, ಗೊತ್ತಿಲ್ಲ ತಾನೆ ಏನೂ ಆಗಲ್ಲ ತಿನ್ನು ಎಂದು ಹೇಳಿದ್ದಾರೆ.
ಈ ಮೊದಲು ನಾನು ದಿನಕ್ಕೆ 2 ಬಾರಿ ನಾನ್ ವೆಜ್ ಊಟ ಮಾಡುತ್ತಿದ್ದೆ. ಆಂಜಿಯೋಗ್ರಾಮ್ ಆದ ಬಳಿಕ ಈಗ ವಾರಕ್ಕೆ 3 ದಿನವಷ್ಟೇ ನಾನ್ ವೆಜ್ ಊಟ ಮಾಡುತ್ತಿದ್ದೇನೆ ಎಂದು ತಮ್ಮ ಆಹಾರದ ಕ್ರಮದ ಬಗ್ಗೆ ಮಾತನಾಡಿದ್ದಾರೆ.
ಕಳೆದ ಬಾರಿ ಇವರ ಈ ಮಾತು ಕರಾವಳಿ ಸಹಿತ ಅನೇಕ ಭಾಗಗಳಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿತ್ತು, ಆದ್ದರಿಂದ ನಂತರ ನಡೆದ ಚುನಾವಣೆಯಲ್ಲಿ ಅನೇಕ ಕ್ಷೇತ್ರವನ್ನು ಕಾಂಗ್ರೆಸ್ ಕಳೆದುಕೊಳ್ಳುವoತಾಗಿತ್ತು ಎನ್ನುವುದು ರಾಜಕೀಯಾ ವಿಶ್ಲೇಷಕರ ಮಾತಾಗಿತ್ತು.