ಕೇಶವಾನಂದ ಭಾರತಿ ಶ್ರೀಗಳ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ: ಸಚ್ಚಿದಾನಂದ ಭಾರತಿಶ್ರೀ

ಮಂಗಳೂರು: 400 ವರ್ಷಗಳ ಪುರಾತನ ಕಾಸರಗೋಡಿನ ಎಡನೀರು ಮಠದ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಕೇಶವಾನಂದ ಭಾರತಿ ಶ್ರೀಗಳ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಅಧ್ಯಯನ ಪೀಠ ಸ್ಥಾಪಿಸುವ ಬಹುದೊಡ್ಡ ಬಯಕೆ ಇದೆ ಎಂದು ಎಡನೀರು ಸಂಸ್ಥಾನದ ನೂತನ ಪೀಠಾಧಿಪತಿ ಸಚ್ಚಿದಾನಂದ ಭಾರತಿ ಶ್ರೀಗಳು ತಿಳಿಸಿದರು.

ಅವರು ಶನಿವಾರ ಸಂಜೆ ನಗರದ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿರುವ ಶ್ವೇತಾ ಜುವೆಲ್ಲರ್ಸ್ ಸ್ವರ್ಣಾಭರಣ ಮಳಿಗೆಗೆ ಭೇಟಿ ನೀಡಿದ ಸಂದರ್ಭ ಆಶೀರ್ವಚನ ನೀಡಿದರು.

ಕೇಶವಾನಂದ ಭಾರತಿ ಶ್ರೀಗಳು ತಮ್ಮ ಕಾರ್ಯಾವೈಕರಿಯಿಂದ ದೇಶವಿದೇಶಗಳಲ್ಲಿ ಅತ್ಯಂತ ಹೆಸರುವಾಸಿಯಾದವರು.  ಧಾರ್ಮಿಕತೆ ಹೊರತು ಪಡಿಸಿ ಹೆಚ್ಚು ಹೆಚ್ಚು ಜನರೊಂದಿಗೆ ಬೇರೆತು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. 52 ವರ್ಷಗಳವರೆಗೆ ಮಠದ ಮುಖ್ಯಸ್ಥರಾಗಿದ್ದ ಕೇಶವಾನಂದ ಭಾರತಿ ಶ್ರೀಗಳು  ಸೆಪ್ಟಂಬರ್. 6ರಂದು ಬೃಂದಾವನಸ್ಥರಾದರು. ಹಿಂದಿನ ಸ್ವಾಮಿಗಳ ಜೊತೆ ಪೂರ್ಣಾವಧಿಯಲ್ಲಿ ಬೆಳೆದವ ನಾನು, ಹಾಗಾಗಿ ಅವರ ಎಲ್ಲಾ ಕಾರ್ಯಚಟುವಟಿಕೆಗಳನ್ನು ರೂಢಿಸಿಕೊಂಡು ಬಂದಿರುತ್ತೇನೆ.

ಕೇಶವಾನಂದ ಭಾರತಿ ಶ್ರೀಗಳು ಕಲೆ ಸಾಹಿತ್ಯ, ಸಾಂಕೃತಿಕ ಚಟುವಟಿಕೆಗಳಿಗೆತುಂಬ ಬೆಲೆ ಕೊಡುತ್ತಿದ್ದರು. ಹಾಗಾಗಿ ದೇವರು ಹಾಗೂ ಸ್ವಾಮಿಗಳ ಅನುಗೃಹದಿಂದ ನಾನು ಕೂಡ ಇದನ್ನು ಮುಂದುವರೆಸಿಕೊಂಡು ಹೋಗುವ ಜೊತೆಗೆ ಮಠವನ್ನು ಇನ್ನೂ ಹೆಚ್ಚಿನ ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಹೋಗುತ್ತೇನೆ ಎಂದು  ಸಚ್ಚಿದಾನಂದ ಭಾರತಿ ಶ್ರೀಗಳು ಹೇಳಿದರು.  

ಈ ವೇಳೆ ದೈವಜ್ಞ ಕೊ-ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಅಶೋಕ್ ಶೇಟ್, ಶ್ವೇತಾ ಜುವೆಲ್ಲರ್ಸ್ ಮಾಲ್ಹಕ ಅಶೋಕ್ ಶೇಟ್ ಹಾಗು ಅವರ ಕುಟುಂಬದವರು ಸ್ವಾಮೀಜಿಯವರಿಗೆ ಗೌರವಾರ್ಪಣೆ ಸಲ್ಲಿಸಿದರು.

ಅಶೋಕ್ ಶೇಟ್ ಅವರ ಸಹೋದರರಾದ ಅರುಣ್ ಕುಮಾರ್ ಶೇಟ್, ವಿನಯ ಕುಮಾರ್ ಶೇಟ್, ಅಶೋಕ್ ಶೇಟ್ ಪತ್ನಿ ಸಂಧ್ಯಾ ಶೇಟ್, ಭರತ್ ಕಾಮಾತ್ ಕಾಸರಗೋಡು, ಚಾಂದಿನಿ ಶೇಟ್, ಮೇಘ ಶೇಟ್ ಬೆಂಗಳೂರು, ಶ್ಲೋಕ ನನ್ನನ್ ಬೆಂಗಳೂರು, ಆಡ್ವಕೇಟ್ ಹಾಗೂ ಸಾಹಿತಿ ಶಶಿರಾಜ್ ಕಾವೂರ್,  ಪ್ರಮುಖರಾದ ನಾರಾಯಣ ಭಟ್ ಕೊಳಿಯೂರು, ಬೆಂಗಳೂರು., ವೇಣುಮಿತ್ರ, ಶೇಖರ್ ಅಮೀನ್, ದಿವ್ಯಾ ರೈ, ರೇಶ್ಮಾ ಡಿ’ಸೋಜ, ಮಂಜುನಾಥ್ ಗೋಕರ್ಣಕರ್, ರಾಜೇಶ್ ಮುಂತಾದವರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.


Leave a Reply

Your email address will not be published. Required fields are marked *

error: Content is protected !!