ಉಡುಪಿ ಪ್ರಸಾದ್ ನೇತ್ರಾಲಯ: ಕನ್ನಡಕ ರಹಿತ 3ಡಿ ತಂತ್ರಜ್ಞಾನದ ಲೇಸರ್ ಚಿಕಿತ್ಸೆ
ಉಡುಪಿ: ಮಾನವನ ದೇಹದ ವಿವಿಧ ಅಂಗಾಂಗಳ ಜೊತೆಗೆ ಕಣ್ಣಿನ ಆರೋಗ್ಯವೂ ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಹೆಚ್ಚಿನ ಸಮಯ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಗಳ ಸ್ಕ್ರೀನ್ ವೀಕ್ಷಣೆ ಮೊದಲಾದ ಹಲವಾರು ಕಾರಣಗಳಿಂದಾಗಿ ದೃಷ್ಟಿ ದೋಷದ ಸಮಸ್ಯೆ ಗಳು ಹೆಚ್ಚುತ್ತಿವೆ. ಇದರೊಂದಿಗೆ ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆಯಲ್ಲಿಯೂ ಹೊಸ ಹೊಸ ಆವಿಷ್ಕಾರಗಳು , ಸಂಶೋಧನೆ ಗಳು ನಡೆಯುತ್ತಿದೆ.
ಅದರಂತೆ ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ದೃಷ್ಟಿ ದೋಷ ನಮಸ್ಯೆಯ ಚಿಕಿತ್ಸೆಗೆ ಸಂಬಂಧಿಸಿ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರ ಉಪಕರಣಗಳನ್ನು ಬಳಸಿ ದೃಷ್ಟಿ ದೋಷವನ್ನು ಸರಿಪಡಿಸುವ ಚಿಕಿತ್ಸಾ ಸೇವೆ ಲಭ್ಯವಿದೆ. ಈ ಮೂಲಕ ಅಂತರಾಷ್ಟ್ರೀಯ ಗುಣ ಮಟ್ಟದ ಚಿಕಿತ್ಸಾ ವಿಧಾನಗಳಾದ ಸ್ಮೈಲ್, ಪ್ರೆಸ್ ಬಿಯಾಂಡ್, ಲಾಸಿಕ್, ಪಿಆರ್ ಕೆ, ಸಿ3 ಆರ್ ಲೇಸರ್ ಚಿಕಿತ್ಸಾ ಕ್ರಮಗಳು, ಕಾಲಿಸ್ಟೊ ಕಂಪ್ಯೂಟರ್ ನಿರ್ದೇಶಿತ ಪೊರೆ ಚಿಕಿತ್ಸೆ, ಫೇಕೊ ಇಮಲ್ಸಿಫಿ ಕೇಶನ್ ಪೊರೆ ಚಿಕಿತ್ಸೆ, ರೆಟಿನಾ ವಿಭಾಗ ದಲ್ಲಿ ಕಣ್ಣಿನ ನರದೋಷ ಸಂಬಂಧಿ ಚಿಕಿತ್ಸೆ, ಮಧುಮೇಹ ಕಣ್ಣಿನ ಚಿಕಿತ್ಸೆ, ಮಕ್ಕಳ ಕಣ್ಣಿನ ವಿಭಾಗ, ಮೆಳ್ಳೆಗಣ್ಣು ಚಿಕಿತ್ಸಾ ವಿಭಾಗ, ಗ್ಲಾಕೋಮಾ ಕಣ್ಣಿನ ಚಿಕಿತ್ಸೆ, ಅತ್ಯಾಧುನಿಕ ಮಿ-ಚೆಕ್ ಶುಷ್ಕ ಕಣ್ಣಿನ (ಡ್ರೈಐ) ಚಿಕಿತ್ಸೆ, ಕಣ್ಣಿನ ಕರಿಗುಡ್ಡೆ ಕಸಿ ಚಿಕಿತ್ಸೆ, ನೇತ್ರ ಭಂಡಾರ ಮುಂದಾತ ಎಲ್ಲಾ ಸೌಲಭ್ಯಗಳಿವೆ.
ಇಲ್ಲಿ ಲೇಸರ್ ಚಿಕಿತ್ಸೆಗಳಾದ ರಿಲೆಕ್ಸ್ ಸೈಲ್ ಚಿಕಿತ್ಸಾ ವಿಧಾನದ ಮೂಲಕ ಲಾಸಿಕ್ ಗಿಂತ ಮಿಗಿಲಾದ 3 ಡಿ ತಂತ್ರಜ್ಞಾನ ದ ಲೇಸರ್ ಚಿಕಿತ್ಸೆಯು 18 ವರ್ಷ ಮೇಲ್ಪಟ್ಟವರಿಗೆ ಹಾಗೂ ನಿರಂತರ ಕಂಪ್ಯೂಟರ್ ಉಪಯೋಗಿಸುವವರಿಗೆ ಜರ್ಮನಿಯ ಕಾರ್ಲ್ ಝೈಸ್ ಕಂಪೆನಿಯ ವಿಸು ಮ್ಯಾಕ್ಸ್ ಫೆಂಟೋಸೆಕೆಂಡ್ ನೋವಿಲ್ಲದ, ಗಾಯವಿಲ್ಲದ, ಬ್ಲೇಡ್ ರಹಿತ , ಸಂಪೂರ್ಣ ಲೇಸರ್ ಚಿಕಿತ್ಸಾ ವಿಧಾನವಾಗಿದೆ. ಪ್ರೆಸ್ ಬಿಯಾಂಡ್- ಲೇಸರ್ ಬ್ಲೆಂಡೆಡ್ ವಿಷನ್ ಚಿಕಿತ್ಸಾ ವಿಧಾನದ ಮೂಲಕ 40 ವರ್ಷ ಮೇಲ್ಪಟ್ಟವರಿಗೆ ವಯೋ ಸಹಜ ದೃಷ್ಟಿ ದೋಷಕ್ಕೆ ಕನ್ನಡಕದ ಅಗತ್ಯವಿಲ್ಲದೆ ಲೇಸರ್ ಚಿಕಿತ್ಸೆ ಮಾಡಲಾಗುತ್ತದೆ. ಅಲ್ಲದೆ ಪ್ರಸಾದ್ ನೇತ್ರಾಲಯವು ಏಷ್ಯಾ ಖಂಡದಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಚಿಕಿತ್ಸೆ ಮಾಡಿರುವ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಉಡುಪಿಯ ಅಲಂಕಾರ್ ಚಿತ್ರ ಮಂದಿರದ ಎ.ಜೆ ಅಲ್ಸೆ ರಸ್ತೆ ಮತ್ತು ಮಂಗಳೂರಿನ ಪಂಪ್ ವೆಲ್ – ಉಜ್ಜೋಡಿ ರಾ.ಹೆ ಮಹಾಕಾಳಿ ದೇಗುಲದ ಬಳಿ ಪ್ರಸಾದ್ ನೇತ್ರಾಲಯದ ಕಾರ್ಯಚರಿಸುತ್ತಿದ್ದು, ದಿನದ 24 ಗಂಟೆಯೂ ನಿರಂತರ ನುರಿತ ವೈದ್ಯರ ತಂಡದಿಂದ ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡುತ್ತಾ ಬರುತ್ತಿದೆ ಪ್ರಸಾದ್ ನೇತ್ರಾಲಯ.