ವಿರೋಧದ ನಡುವೆಯೂ ಇಸ್ಲಾಮಾಬಾದ್‌ನಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಪಾಕ್ ಅನುಮತಿ!

ಲಾಹೋರ್: ಇಸ್ಲಾಮಿಕ್ ಗುಂಪುಗಳ ವಿರೋಧದ ನಡುವೆಯೂ ಇಸ್ಲಾಮಾಬಾದ್‌ನಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಪಾಕಿಸ್ತಾನ ಸರ್ಕಾರ ಅನುಮತಿ ನೀಡಿದೆ.

ಇಸ್ಲಾಮಿಕ್ ಗುಂಪುಗಳ ಒತ್ತಡದಿಂದಾಗಿ ಆರು ತಿಂಗಳ ಹಿಂದೆ ಹಿಂದೂ ದೇವಾಲಯದ ನಿರ್ಮಾಣದ ಕೆಲಸ ಸ್ಥಗಿತಗೊಂಡಿತ್ತು. 

ಕ್ಯಾಪಿಟಲ್ ಡೆವಲಪ್‌ಮೆಂಟ್ ಅಥಾರಿಟಿ(ಸಿಡಿಎ) ಲಾಹೋರ್‌ನಲ್ಲಿ ಅಧಿಸೂಚನೆ ಹೊರಡಿಸಿದೆ. ಇದೇ ವೇಳೆ ಇಸ್ಲಾಮಾಬಾದ್‌ನ ಹೆಚ್ -9/2 ಸೆಕ್ಟರ್‌ನಲ್ಲಿ ಹಿಂದೂ ಸಮುದಾಯದ ಶವಾಗಾರದ ಸುತ್ತಲೂ ಗಡಿ ಗೋಡೆ ನಿರ್ಮಿಸಲು ಅನುಮತಿ ನೀಡಿದೆ.

ಈ ಹಿಂದೆ ಕೆಲವು ಕಟ್ಟರ್ ಇಸ್ಲಾಂ ಧರ್ಮಗುರುಗಳು ಇಸ್ಲಾಮಾಬಾದ್‌ನಲ್ಲಿ ದೇವಾಲಯ ನಿರ್ಮಾಣಕ್ಕೆ ಅವಕಾಶ ನೀಡದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಅಕ್ಟೋಬರ್‌ನಲ್ಲಿ ಧಾರ್ಮಿಕ ವಿಷಯಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಿದ್ದ ಕೌನ್ಸಿಲ್, ಇಸ್ಲಾಮಾಬಾದ್ ಅಥವಾ ದೇಶದ ಯಾವುದೇ ಭಾಗದಲ್ಲಿ ದೇವಾಲಯ ನಿರ್ಮಾಣಕ್ಕೆ ಯಾವುದೇ ಸಾಂವಿಧಾನಿಕ ಅಥವಾ ಷರಿಯಾ ನಿರ್ಬಂಧಗಳಿಲ್ಲ ಎಂದು ಹೇಳಿದರು.

1 thought on “ವಿರೋಧದ ನಡುವೆಯೂ ಇಸ್ಲಾಮಾಬಾದ್‌ನಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಪಾಕ್ ಅನುಮತಿ!

Leave a Reply to ಆರ್ ಸಿ ನಾಯ್ಕ್ ಮಾಧವ್ Cancel reply

Your email address will not be published. Required fields are marked *

error: Content is protected !!