ಉಡುಪಿ: ಬ್ರಿಟನ್’ನಿಂದ ಬಂದ ಏಂಟು ಮಂದಿಗೆ ಹೋಂ ಕ್ವಾರಂಟೈನ್!
ಉಡುಪಿ: ಬ್ರಿಟಿಷ್ ಏರ್ ವೇಸ್, ಇಂಡಿಯನ್ ಏರಲೈನ್ಸ್ ವಿಮಾನಗಳ ಮೂಲಕ 15 ಜನರು ಬ್ರಿಟನ್ ನಿಂದ ಬೆಂಗಳೂರಿಗೆ ಬಂದು, ಅಲ್ಲಿಂದ ಮಂಗಳೂರಿಗೆ ಬಂದಿದ್ದಾರೆ. ಅದರಲ್ಲಿ ಏಂಟು ಮಂದಿ ಉಡುಪಿಗೆ ಬಂದಿದ್ದು, ಸದ್ಯ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ ಉಡುಪಿ ತಾಲೂಕಿನ ಮೂವರು, ಕಾರ್ಕಳ ತಾಲೂಕಿನ ನಾಲ್ವರು ಮತ್ತು ಕುಂದಾಪುರ ತಾಲೂಕಿನ ಒಬ್ಬರು ಇದ್ದಾರೆ ಎಂದು ತಿಳಿದುಬಂದಿದೆ.
ಎಲ್ಲರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವೈದ್ಯರು ಅದರ ವರದಿಯ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.
ಎಲ್ಲರೂ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿದ್ದಾರೆ. ಅದಾಗ್ಯೂ ಅವರನ್ನು ಮತ್ತೊಮ್ಮೆ ಆರ್ ಟಿ ಪಿಸಿಅರ್ ಪರೀಕ್ಷೆಗೆ ಒಳಪಡಿಸಲಾಗುವುದು. 14 ದಿನಗಳ ಕ್ವಾರಂಟೈನ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯಇಲಾಖೆ ತಿಳಿಸಿದೆ.