ಉಡುಪಿ: ಶಾಂತಿಯುತ ಮತದಾನ, ನಾಲ್ಕು ತಾಲೂಕಿನಲ್ಲಿ ಶೇ.74.10 ಮತದಾನ

ಉಡುಪಿ: ಜಿಲ್ಲೆಯ ನಾಲ್ಕು ತಾಲೂಕಿನಲ್ಲಿ ನಡೆದ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ. 74.10 ರಷ್ಟು ಮತದಾನ ನಡೆದಿದೆ.
ಕೋವಿಡ್ ಆತಂಕ ಮರೆತು ಮತದಾರರು ಉತ್ಸಾಹದಿಂದ ಮತದಾನ ಕೇಂದ್ರಕ್ಕೆ ಬಂದು ಮತದಾನದ ಪ್ರಕ್ರಿಯೆಯಲ್ಲಿ ತೊಡಗಿಕೊಂಡರು.

ಎಲ್ಲಾ ಮತಗಟ್ಟೆಗಳಲ್ಲಿ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಮತಗಟ್ಟೆಗಳಲ್ಲಿ ಸಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ಮಾಡಿ ಮತದಾನಕ್ಕೆ ಅನುಮಾಡಿಕೊಡಲಾಗಿತ್ತು. ಹೆಚ್ಚಿನ ಮತಗಟ್ಟೆಗಳಲ್ಲಿ ಸಿಬಂದಿಗಳು ಫೇಸ್ ಮಾಸ್ಕ್ ಧರಿಸಿ ಕಾರ್ಯನಿರ್ವಹಿಸುತ್ತಿದ್ದರು.

ಉಡುಪಿ-74.80, ಬ್ರಹ್ಮಾವರ-73.79, ಹೆಬ್ರಿ-79..41 ಬೈಂದೂರು-71.28- ಒಟ್ಟು74.10

Leave a Reply

Your email address will not be published. Required fields are marked *

error: Content is protected !!