ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ – ಇಬ್ಬರ ಬಂಧನ
ಮಂಗಳೂರು: ಮಂಗಳೂರಿನ ರಥಬೀದಿ ಬಳಿಯಲ್ಲಿ ಕರ್ತವ್ಯ ನಿರತ ಹೆಡ್ ಕಾನ್‌ಸ್ಟೆಬಲ್ ಮೇಲೆ ನಡೆದ ತಲವಾರ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು ಕುದ್ರೋಳಿ ನಿವಾಸಿ ಮಹಮ್ಮದ್ ನವಾಝ್ (30) ಹಾಗೂ 16 ವರ್ಷದ ಬಾಲಕ ಎಂದು ತಿಳಿದು ಬಂದಿದೆ. ಪ್ರಕರಣದ ಆರೋಪಿ ನವಾಝ್‌ಗೆ ಡಿ.24ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಬಾಲಕನನ್ನು ಉಡುಪಿಯ ನಿಟ್ಟೂರಿನ ಬಾಲಮಂದಿರಕ್ಕೆ ಸೇರಿಸಲಾಗಿದೆ.
ಇನ್ನು ಪ್ರಕರಣ ಆರೋಪಿ ಯಾಗಿರುವ ನವಾಝ್ 2019ರ ಡಿ.19ರಂದು ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ನೌಶೀನ್‌ನ ಸಂಬಂಧಿ ಎಂದು ತಿಳಿದು ಬಂದಿದ್ದು, ಈ ಘಟನೆಯ ಪ್ರತಿಕಾರವಾಗಿಯೇ ಈತ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.