ಬ್ರಹ್ಮಾವರ: ನ.27 ರಿಂದ 29 ‘ಉಡುಪಿ ಆಹಾರ ಮತ್ತು ಉದ್ಯಮ ಮೇಳ-2026’
ಉಡುಪಿ, ನ.25: ಜಿಲ್ಲಾ ಬೇಕರಿ, ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘದ ಆಶ್ರಯದಲ್ಲಿ ನ. 27, 28, 29ರಂದು ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ‘ಉಡುಪಿ ಆಹಾರ ಮತ್ತು ಉದ್ಯಮ ಮೇಳ-2026’ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಕಾನೂನು ಸಲಹೆಗಾರ ಶ್ರೀಧರ್ ಪಿ.ಎಸ್. ಮಾಹಿತಿ ನೀಡಿದರು.
ತಯಾರಕರ ಹಾಗೂ ಮಾರಾಟಗಾರರ ಸಂಘದ ಆಶ್ರಯದಲ್ಲಿ ನ. 27, 28, 29ರಂದು ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ‘ಉಡುಪಿ ಆಹಾರ ಮತ್ತು ಉದ್ಯಮ ಮೇಳ-2026’ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಕಾನೂನು ಸಲಹೆಗಾರ ಶ್ರೀಧರ್ ಪಿ.ಎಸ್. ಮಾಹಿತಿ ನೀಡಿದರು.
ನ. 27ರಂದು ಸಂಜೆ 4.30ಕ್ಕೆ ಬ್ರಹ್ಮಾವರದ ಮುಖ್ಯರಸ್ತೆಗಳಲ್ಲಿ ಪುರಮೆರವಣಿಗೆಯಲ್ಲಿ ಸಾಗಿ ಮೈದಾನ ತಲುಪಿದ ಬಳಿಕ ಮೇಳಕ್ಕೆ ಚಾಲನೆ ದೊರಕಲಿದೆ. ಯುನೈಟೆಡ್ ಟೊಯೊಟಾ ಮಂಗಳೂರು ಕಂಪೆನಿಯ ಮಾರ್ಕೆಟಿಂಗ್ ಹೆಡ್ ಸೋನಿಯಾ, ಬ್ರಹ್ಮಾವರ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಬಿಜು ಜೆ. ನಾಯರ್, ಬ್ರಹ್ಮಾವರ ವ್ಯ. ಸೇ. ಸ. ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ ಪುರಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 6.30ಕ್ಕೆ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಆಹಾರ ಮೇಳ ಉದ್ಘಾಟಿಸುವರು. ಬಿ-ಟು-ಬಿ ಝನ್ ಅನ್ನು ಜಿಲ್ಲಾಧಿಕಾರಿ ಸ್ವರೂಪಾ ಟಿ. ಕೆ., ಬಿ-ಟು-ಸಿ ಝನ್ ಅನ್ನು ಶಾಸಕ ಯಶ್‌ಪಾಲ್ ಎ. ಸುವರ್ಣ, ಆಹಾರ ಮೇಳವನ್ನು ಸಾಯಿರಾಧಾ ಸಮೂಹ ಸಂಸ್ಥೆಗಳ ಎಂಡಿ ಮನೋಹರ ಎಸ್. ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಂಸ್ಥಾಪಕರಾದ ದಿ| ರಾಬರ್ಟ್ ಪುಟಾರ್ಡೋ ವೇದಿಕೆಯಲ್ಲಿ ರಾತ್ರಿ 7ಕ್ಕೆ ನಡೆಯಲಿರುವ ದಶಮಾನೋತ್ಸವ ಸಂಭ್ರಮ-‘ದಶರುಚಿ’ ಸಭೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸುವರು.ದಶಮಾನೋತ್ಸವ ಸಮಿತಿ ಅಧ್ಯಕ್ಷ ಹೆರಾಲ್ಡ್ ಡಿ’ಸೋಜಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಘಟನ ಕಾರ್ಯದರ್ಶಿ ದಿವಾಕರ ಸನಿಲ್ ಮಾತನಾಡಿ, ನ.28ರ ರಾತ್ರಿ 8ರಿಂದ ‘ದಶ ರುಚಿ’ ಸಿಂಹಾವಲೋಕನ ಸಭೆಯು ಸಂಘದ ಉಪಾಧ್ಯಕ್ಷ ಸುದೇವ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ದಿಕ್ಕೂಚಿ ಭಾಷಣವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಆಶಯ ನುಡಿಯನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವಲೋಕನವನ್ನು ಪ್ರಧಾನ ಸಂಚಾಲಕ ಶ್ರೀಧರ ಪಿ. ಎಸ್. ಮಾಡಲಿದ್ದಾರೆ.
ನ.29ರ ರಾತ್ರಿ 7ಕ್ಕೆ ಸಮಾರೋಪ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ಸುನಿಲ್ ಕುಮಾರ್ ಸಮಾಪನ ನುಡಿಗಳನ್ನಾಡುವರು. ಶಾಸಕ ಕಿರಣ್ ಕುಮಾರ್ ಕೊಡ್ಡಿ ಆಶಯ ನುಡಿಗಳನ್ನು ದಿಕ್ಕೂಚಿ ಭಾಷಣವನ್ನು ಶಾಸಕ ಗುರುರಾಜ್ ಗಂಟಿಹೊಳೆ ಮಾಡಲಿದ್ದಾರೆ ಎಂದು ತಿಳಿಸಿದರು. ಅಧ್ಯಕ್ಷ ವಿಶ್ವನಾಥ ಕುಲಾಲ್, ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಣೈ, ಕೋಶಾಧಿಕಾರಿ ಶಶಿಕಾಂತ ಜಿ. ನಾಯಕ್ ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ಸುನಿಲ್ ಕುಮಾರ್ ಸಮಾಪನ ನುಡಿಗಳನ್ನಾಡುವರು. ಶಾಸಕ ಕಿರಣ್ ಕುಮಾರ್ ಕೊಡ್ಡಿ ಆಶಯ ನುಡಿಗಳನ್ನು ದಿಕ್ಕೂಚಿ ಭಾಷಣವನ್ನು ಶಾಸಕ ಗುರುರಾಜ್ ಗಂಟಿಹೊಳೆ ಮಾಡಲಿದ್ದಾರೆ ಎಂದು ತಿಳಿಸಿದರು. ಅಧ್ಯಕ್ಷ ವಿಶ್ವನಾಥ ಕುಲಾಲ್, ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಣೈ, ಕೋಶಾಧಿಕಾರಿ ಶಶಿಕಾಂತ ಜಿ. ನಾಯಕ್ ಉಪಸ್ಥಿತರಿದ್ದರು.





