ನಿಟ್ಟೂರು ಪ್ರಾಥಮಿಕ ಶಾಲೆಯ ಸಂಚಾಲಕಿ ಬ್ರಿಜಿತ್ ಕರ್ನೆಲಿಯೋ ನಿಧನ
ಉಡುಪಿ: ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬ್ರಿಜಿತ್ ಕರ್ನೆಲಿಯೋ (79), ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ.
ಅಂಬಾಗಿಲು ಕಕ್ಕುಂಜೆ ನಿವಾಸಿಯಾಗಿದ್ದ ಇವರು, ಧರ್ಮಗುರು ಫಾ. ವಿಲ್ಸನ್ ಕರ್ನೆಲಿಯೋ, ಅಂಬಾಗಿಲು ಆರ್ದಶ್ ಬೇಕರಿ ಮಾಲೀಕ ಲಿಯೋ ಕರ್ನೆಲಿಯೋ, ಕಥೋಲಿಕ್ ಸಭಾ ಉಡುಪಿ ಪ್ರದೇಶ್ ನ ಮಾಜಿ ಅಧ್ಯಕ್ಷ ಸಂತೋಷ್ ಕರ್ನೇಲಿಯೋ ಸಹಿತ 6 ಪುತ್ರರನ್ನು ಅಗಲಿದ್ದಾರೆ.





