ಪ್ರಸಾದ್ ನೇತ್ರಾಲಯ- ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡ ಟ್ರಸ್ಟ್- ಉಚಿತ ಕನ್ನಡಕ ವಿತರಣೆ

ಉಡುಪಿ: ಶ್ರೀ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡ ಟ್ರಸ್ಟ್, ಪಡುಬೈಲೂರು ಇದರ 11 ನೇ ವರ್ಷದ ಸೇವಾ ಕಾರ್ಯಕ್ರಮದನ್ವಯ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಇವರ ಸಹಯೋಗದೊಂದಿಗೆ ಕಳೆದ ತಿಂಗಳು ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಆಯ್ಕೆಗೊಂಡಿದ್ದ ಫಲಾನುಭವಿಗಳಿಗೆ, ಉಡುಪಿ ಬೈಲೂರು ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಚಿತ ಕನ್ನಡಕ ವಿತರಿಸಲಾಯಿತು.

ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ಸ್ಥಾಪಕ ಹಾಗೂ ಕರ್ನಾಟಕ ಸರಕಾರ ವಿಷನ್ ಕಮಿಟಿ ಅಧ್ಯಕ್ಷ ಡಾ. ಕೃಷ್ಣಪ್ರಸಾದ್ ಕೂಡ್ಲು ಹಾಗೂ ಹಿರಿಯ ನ್ಯಾಯವಾದಿ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಟ್ಟಾರು ರತ್ನಾಕರ ಹೆಗ್ಡೆ ಅವರು ಕನ್ನಡಕ ವಿತರಿಸಿದರು. ಡಾ.ಕೃಷ್ಣ ಪ್ರಸಾದ್ ಕೂಡ್ಲು ಅವರು ಮಾತನಾಡುತ್ತಾ, ಪ್ರಸಾದ್ ನೇತ್ರಾಲಯವು ಕಳೆದ 25 ವರ್ಷಗಳಿಂದ ಶಿಬಿರಗಳ ಮೂಲಕ ಜನರಿಗೆ ಉಚಿತ ಸೇವೆ ನೀಡುತ್ತಿದ್ದು, ಇಂದು ಹೊರಗಿನಿಂದ ಯಾವುದೇ ಅನುದಾನಗಳು ಬರದೇ, ಸ್ವಂತ ಸಂಪನ್ಮೂಲಗಳಿಂದ ಶಿಬಿರಗಳ ಮೂಲಕ ಉಚಿತ ನೇತ್ರ ಸೇವೆ ನೀಡುತ್ತಿದೆ. ಉಚಿತ ಸೇವೆಗಳ ಫಲಾನುಭವಿಗಳು ಈ ಸೇವೆಗಳನ್ನು ಪ್ರಶಂಸಿಸಿ ಪ್ರೋತ್ಸಾಹಿಸ ಬೇಕು ಎಂದರು. ಇಷ್ಟ ಮಹಾಲಿಂಗೇಶ್ವರ ತಂಡದ ಸಮಾಜ ಸೇವೆಗಳು ಉತ್ತಮ ರೀತಿಯಲ್ಲಿ ಮುಂದುವರಿಯಲಿ ಎಂದರು.

ರತ್ನಾಕರ ಹೆಗ್ಡೆ ಅವರು ಮಾತನಾಡುತ್ತಾ, ಪ್ರಸಾದ್ ನೇತ್ರಾಲಯದ ನೇತ್ರ ಸೇವೆಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಇಂತಹ ಸೇವೆಗಳಿಗೆ ಊರಿನವರು ಸಹಕಾರ ನೀಡಬೇಕು ಎಂದರು. ಈ ಸಂಧರ್ಭದಲ್ಲಿ 90 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು.
ಪ್ರಸಾದ್ ನೇತ್ರಾಲಯದ ಮುಖ್ಯ ಆಡಳಿತಾಧಿಕಾರಿ ಮಧ್ವವಲ್ಲಭ ಆಚಾರ್ಯ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡದ ವ್ಯವಸ್ಥಾಪಕ ನಾಗರಾಜ ಐತಾಳ್ ಧನ್ಯವಾದವಿತ್ತರು. ತಂಡದ ನಾಯಕ ಗೌತಮ್ ಕೆ.ಬಿ, ಸದಸ್ಯರಾದ ವಿಜಿತ್, ಅಮೋಘ ಆಚಾರ್ಯ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!