ಆದರ್ಶ ಆಸ್ಪತ್ರೆ ಉಡುಪಿ: ನ.15ರಂದು ಉಚಿತ ಮಧುಮೇಹ ತಪಾಸಣಾ ಶಿಬಿರ
ಉಡುಪಿ: ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಉಡುಪಿಯ ಆದರ್ಶ ಆಸ್ಪತ್ರೆಯ ವತಿಯಿಂದ ನವೆಂಬರ್ 15ರಂದು ಭಾನುವಾರ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರವು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆದರ್ಶ ಆಸ್ಪತ್ರೆ, ಉಡುಪಿಯಲ್ಲಿ ನಡೆಯಲಿದೆ.
ಶಿಬಿರದಲ್ಲಿ ರಕ್ತದ ಸಕ್ಕರೆ ಅಂಶ (RBS), ಥೈರಾಯ್ಡ್ ಪರೀಕ್ಷೆ, ಮೂತ್ರ ಪರೀಕ್ಷೆ (Urine Routine Test), ಮೂರು ತಿಂಗಳ ಸರಾಸರಿ ಸಕ್ಕರೆ ಮಟ್ಟದ ಪರೀಕ್ಷೆ (HbA1c), ಕ್ರಿಯಾಟಿನಿನ್ ಪರೀಕ್ಷೆ ಹಾಗೂ ಲಿಪಿಡ್ ಪ್ರೊಫೈಲ್ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ.
ಈ ಶಿಬಿರದ ಮೂಲಕ ಸಾರ್ವಜನಿಕರಿಗೆ ಮಧುಮೇಹದ ಆರಂಭಿಕ ಪತ್ತೆ, ನಿಯಂತ್ರಣ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ.
ಶಿಬಿರದ ಜೊತೆಗೆ ನವೆಂಬರ್ 16ರಿಂದ 30ರವರೆಗೆ ವಿಶೇಷ ಡಯಾಬಿಟಿಸ್ ಕೇರ್ ಪ್ಯಾಕೇಜ್ ಕೂಡ ಲಭ್ಯವಿರಲಿದೆ. ಈ ಪ್ಯಾಕೇಜ್‌ನ ಸಾಮಾನ್ಯ ಶುಲ್ಕ ₹2,200 ಆಗಿದ್ದು, ರಿಯಾಯಿತಿ ದರದಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಪ್ಯಾಕೇಜ್‌ನಲ್ಲಿ ಸಿಬಿಸಿ, ಮೂತ್ರ ಪರೀಕ್ಷೆ, ಲಿಪಿಡ್ ಪ್ರೊಫೈಲ್, ಎಫ್‌ಬಿಎಸ್ ಮತ್ತು ಪಿಪಿಬಿಎಸ್, ಕ್ರಿಯಾಟಿನಿನ್, ಎಚ್‌ಬಿಎ1ಸಿ, ಎಲ್‌ಎಫ್‌ಟಿ, ಯೂರಿಕ್ ಆಸಿಡ್, ಇಸಿಜಿ ಹಾಗೂ ಎಕೋ/ಟಿಎಂಟಿ ಸೇರಿದಂತೆ ವಿವಿಧ ಪರೀಕ್ಷೆಗಳು ಒಳಗೊಂಡಿವೆ.
ಮಧುಮೇಹವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಮತ್ತು ಜೀವನಶೈಲಿಯ ಬದಲಾವಣೆಗಳ ಮೂಲಕ ನಿಯಂತ್ರಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಸಾರ್ವಜನಿಕರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ.





