ನೂತನ ಪ್ರಿಯದರ್ಶಿನಿ ಕೋ- ಅ. ಸೊಸೈಟಿಯ ಉಡುಪಿ ಶಾಖೆಯೂ ಮೌಲ್ಯಯುತ ಗ್ರಾಹಕರನ್ನು ಹೊಂದಲಿ: ಸುಧಾ ನಿತ್ಯಾನಂದ

ಉಡುಪಿ: ಉಭಯ ಜಿಲ್ಲೆಯಲ್ಲಿ ಐದು ಶಾಖೆಯನ್ನು ಹೊಂದಿರುವ, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಉಡುಪಿಯಲ್ಲೂ ಹೊಸ ಶಾಖೆಯನ್ನು ತೆರೆದಿದ್ದು, ಆದಷ್ಟು ಬೇಗ ಮೌಲ್ಯಯುತ ಗ್ರಾಹಕರನ್ನು ಹೊಂದಿ ಉಡುಪಿ ಶಾಖೆ ಕೂಡ ಅಭಿವೃದ್ಧಿ ಹೊಂದಲಿ ಎಂದು ಸುಧಾ ನಿತ್ಯಾನಂದ ಅವರು ಹಾರೈಸಿದರು.

ಇವರು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಉಡುಪಿ ಶಾಖೆಯಲ್ಲಿ ನಡೆದ ಗ್ರಾಹಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾದ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಉಡುಪಿ ಶಾಖೆಯ ಶಾಖಾ ಪ್ರಬಂಧಕರಾದ ಕೆ. ಎಸ್ ರವಿರಾಜ್ ರವರು ಸಾಂದರ್ಭಿಕವಾಗಿ ನುಡಿದರು.

ಉಡುಪಿ ಶಾಖಾ ಪ್ರಬಂಧಕಿ ನಿಶಾ ಸುಹೇಲ್ ಡೇನಿಯಲ್ ರವರು ಸ್ವಾಗತಿಸಿ, ಸಹ ಸಿಬ್ಬಂದಿ ರಕ್ಷಿತಾ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!