ಮೂಡುಬೆಳ್ಳೆ: ನಿಯಂತ್ರಣ ತಪ್ಪಿದ ಬೈಕ್ ಗೋಡೆಗೆ ಡಿಕ್ಕಿ- ಗ್ಯಾರೇಜ್ ಕಾರ್ಮಿಕ ಮೃತ್ಯು
ಮೂಡುಬೆಳ್ಳೆ: ಕಾರ್ಕಳ- ಮೂಡುಬೆಳ್ಳೆ- ಉಡುಪಿ ರಾಜ್ಯ ಹೆದ್ದಾರಿಯ ಬಳಿ ಬೈಕೊಂದು ವಾಹನ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದು ಬೈಕ್ ಸವಾರ ಶಿರ್ವ ಕಡಂಬು ನಿವಾಸಿ ಸುಕೇಶ್ ಆಚಾರ್ಯ (24) ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.
ಗಂಭೀರ ಗಾಯಗೊಂಡವರನ್ನು ಸ್ಥಳೀಯರು ಸೇರಿ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಶಿರ್ವದ ಆಟೋ ಎಲೆಕ್ಟಿಕಲ್ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಸುಕೇಶ ಬೆಳಗ್ಗೆ ಅಂಗಡಿ,ವಾಹನ ಪೂಜೆ ಮುಗಿಸಿ ಮನೆಗೆ ತೆರಳಿದ್ದ ಎನ್ನಲಾಗಿದೆ.
ಬಳಿಕ ವಾಹನ ರಿಪೇರಿಗಾಗಿ ಕರೆ ಬಂದ ಹಿನ್ನೆಲೆಯಲ್ಲಿ ಮೂಡುಬೆಳ್ಳೆ ನಾಲ್ಕು ಬೀದಿಗೆ ತೆರಳಿದ್ದ ಆತ ಅಲ್ಲಿಂದ ಮನೆಗೆ ತೆರಳುವ ವೇಳೆ ಘಟನೆ ನಡೆದಿದೆ.
ಮೃತ ಯುವಕ ತಂದೆ ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.





