ವಿಕ್ಕಿ ಮೊಬೈಲ್‌ನಲ್ಲಿ ದೀಪಾವಳಿ ಪ್ರಯುಕ್ತ ಭರ್ಜರಿ ಆಫರ್- ಖರೀದಿಗೆ ಮುಗಿಬಿದ್ದ ಗ್ರಾಹಕರು…!

ಉಡುಪಿ: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ಉದ್ದೇಶದಿಂದ ಉಡುಪಿಯ ಕಿದಿಯೂರು ಹೋಟೆಲ್ ಎದುರಿನ ವಿಕ್ಕಿ ಮೊಬೈಲ್‌ನಲ್ಲಿ ‘ವಿಕ್ಕಿ ಮೊಬೈಲ್ ಉತ್ಸವ’ ಭರ್ಜರಿಯಾಗಿ ಆರಂಭಗೊಂಡಿದೆ.

ಈ ವಿಶೇಷ ಆಫ್‌ರ್‌ನಲ್ಲಿ ಹಬ್ಬದ ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಗ್ರಾಹಕರು ಮೊಬೈಲ್ ಖರೀದಿಸಲು ವಿಕ್ಕಿ ಮೊಬೈಲ್ ಶಾಪ್‌ಗೆ ಮುಗಿಬಿದ್ದಿದ್ದಾರೆ.

ನವೆಂಬರ್ 1ರಿಂದ ಡಿಸೆಂಬರ್ 31, 2026ರವರೆಗೆ ನಡೆಯಲಿರುವ ಈ ವಿಶೇಷ ಉತ್ಸವದಲ್ಲಿ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಘೋಷಿಸಲಾಗಿದೆ. ಪ್ರತಿ ಮೊಬೈಲ್ ಖರೀದಿಯೊಂದಿಗೆ ₹10,000 ಮೌಲ್ಯದ ಡಿಸ್ಕೌಂಟ್ ವೋಚರ್ ನೀಡಲಾಗುತ್ತಿದ್ದು, ₹10,000 ಮೌಲ್ಯದ ಉಚಿತ ಟ್ರಾಲಿ ಬ್ಯಾಗ್ ಗೆಲ್ಲುವ ಅವಕಾಶವೂ ಇದೆ.

ಇದರ ಜೊತೆಗೆ ‘ಸ್ಕ್ರ್ಯಾಚ್ ಆ್ಯಂಡ್ ವಿನ್’ ಮೂಲಕ ಗ್ರಾಹಕರಿಗೆ ವಿಶೇಷ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಲ್ಲಿ 11 ಬೈಕ್‌ಗಳು, 50 ಟಿವಿಗಳು ಹಾಗೂ 50 ವಾಷಿಂಗ್ ಮೆಷಿನ್‌ಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ.

ವಿವೋ, ಐಫೋನ್, ಒಪ್ಪೋ, ಸ್ಯಾಮ್‌ಸಂಗ್ ಸೇರಿದಂತೆ ವಿವಿಧ ಜನಪ್ರಿಯ ಬ್ರ್ಯಾಂಡ್‌ಗಳ ಮೊಬೈಲ್‌ಗಳ ಖರೀದಿಗೆ ಈ ಉತ್ಸವದಲ್ಲಿ ಅವಕಾಶವಿದೆ. ಗ್ರಾಹಕರಿಗೆ ಒಂದು ವರ್ಷದ ಉಚಿತ ವಿಸ್ತೃತ ವಾರಂಟಿ, ಶೇ.10ರಷ್ಟು ತಕ್ಷಣದ ಕ್ಯಾಶ್‌ಬ್ಯಾಕ್ ಹಾಗೂ ಮೆಗಾ ಇಎಂಐ ಸೌಲಭ್ಯವನ್ನೂ ಒದಗಿಸಲಾಗಿದೆ.

ಉಡುಪಿಯ ಕಿದಿಯೂರು ಹೋಟೆಲ್ ಎದುರಿನ ವಿಕ್ಕಿ ಮೊಬೈಲ್‌ನಲ್ಲಿ ಈ ವಿಶೇಷ ಉತ್ಸವ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ 9886834279 ಅಥವಾ 9743490364 ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

error: Content is protected !!