ಬ್ರಹ್ಮಾವರ: ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಮಾವೇಶ
ಬಹ್ಮಾವರ: ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘಟನೆಯ ಸಮಾವೇಶವು ಹೋಟೆಲ್ ಆಶ್ರಯ ಸಭಾಂಗಣದಲ್ಲಿ ಇತ್ತೀಚೆಗೆ ಸಿ. ಸಚ್ಚಿದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಹಿರಿಯ ಮಾಜಿ ಅಧ್ಯಕ್ಷ ಎ.ಎಸ್.ಹೆಗ್ಡೆ, ನಿಕಟ ಪೂರ್ವ ಅಧ್ಯಕ್ಷ ರಾಜೀವ ಶೆಟ್ಟಿ ಕಾರ್ಯದರ್ಶಿ ಮಂಜುನಾಥ ಶೆಟ್ಟಿಯವರು ಸಂಸ್ಥಾಪಕರಾದ ಎ.ಬಿ.ಶೆಟ್ಟಿ ಮತ್ತು ಬ್ಯಾಂಕಿನ ಬೆಳವಣಿಗೆಯ ರೂವಾರಿ ಸುಂದರರಾಮ್ ಶೆಟ್ಟಿಯವರ ಭಾವ ಚಿತ್ರಗಳಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಮೌನ ಪ್ರಾಥನೆ ಮಾಡಲಾಯಿತು ಯಕ್ಷಗಾನ ಭಾಗವತರಾದ ಚಂದ್ರಕಾಂತ್ ಮೂಡುಬೆಳ್ಳೆಯವರು ಪ್ರಾರ್ಥಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಸಚ್ಚಿದಾನಂದ ಶೆಟ್ಟಿಯವರು ಅ.23 ರಂದು ಸಂಸ್ಥಾಪನಾ ದಿನದ ಸ್ಮರಣೆಯೊಂದಿಗೆ ಬ್ಯಾಂಕಿನ ಇತಿಹಾಸ ರೂಪಿಸಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಎ.ಬಿ.ಶೆಟ್ಟಿ ಯವರು ತಮ್ಮ ದೂರದೃಷ್ಟಿ, ದೃಢ ಸಂಕಲ್ಪ ಮತ್ತು ಬದ್ಧತೆಯಿಂದ ಬ್ಯಾಂಕಿಗೆ ಭದ್ರ ಬುನಾದಿ ಹಾಕಿದರೆ ಸುಂದರರಾಮ್ ಶೆಟ್ಟಿಯವರು ತಮ್ಮ ನಾಯಕತ್ವ ಮತ್ತು ಆಡಳಿತ ಸಾಮರ್ಥ್ಯ ಮತ್ತು ಅವಿರತ ಪ್ರಯತ್ನಗಳಿಂದ ಬ್ಯಾಂಕಿನ ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿಗೆ ಅಪೂರ್ವ ಕೊಡುಗೆ ನೀಡಿದ್ದಾರೆ. ಈ ಇಬ್ಬರು ಮಹನೀಯರ ಸಾಧನೆಗಳು ವಿಜಯಾ ಬ್ಯಾಂಕಿನ ತಲೆಮಾರುಗಳಿಗೆ ಇಂದಿಗೂ ಸ್ಪೂರ್ತಿಯಾಗಿದೆ. ಎಂದು ಅಭಿಪ್ರಾಯ ಪಟ್ಟರು.
23 ರಂದು ಸಂಸ್ಥಾಪನಾ ದಿನದ ಸ್ಮರಣೆಯೊಂದಿಗೆ ಬ್ಯಾಂಕಿನ ಇತಿಹಾಸ ರೂಪಿಸಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಎ.ಬಿ.ಶೆಟ್ಟಿ ಯವರು ತಮ್ಮ ದೂರದೃಷ್ಟಿ, ದೃಢ ಸಂಕಲ್ಪ ಮತ್ತು ಬದ್ಧತೆಯಿಂದ ಬ್ಯಾಂಕಿಗೆ ಭದ್ರ ಬುನಾದಿ ಹಾಕಿದರೆ ಸುಂದರರಾಮ್ ಶೆಟ್ಟಿಯವರು ತಮ್ಮ ನಾಯಕತ್ವ ಮತ್ತು ಆಡಳಿತ ಸಾಮರ್ಥ್ಯ ಮತ್ತು ಅವಿರತ ಪ್ರಯತ್ನಗಳಿಂದ ಬ್ಯಾಂಕಿನ ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿಗೆ ಅಪೂರ್ವ ಕೊಡುಗೆ ನೀಡಿದ್ದಾರೆ. ಈ ಇಬ್ಬರು ಮಹನೀಯರ ಸಾಧನೆಗಳು ವಿಜಯಾ ಬ್ಯಾಂಕಿನ ತಲೆಮಾರುಗಳಿಗೆ ಇಂದಿಗೂ ಸ್ಪೂರ್ತಿಯಾಗಿದೆ. ಎಂದು ಅಭಿಪ್ರಾಯ ಪಟ್ಟರು.
ಬ್ಯಾಂಕ್ ಚಿಕ್ಕ ಬಂಡವಾಳದಲ್ಲಿ ಪ್ರಾರಂಭವಾಗಿದ್ದರೂ ಸಂಸ್ಥಾಪಕರ ಕನಸು ದೊಡ್ಡದಾಗಿತ್ತು. ಬ್ಯಾಂಕಿನ ಸಾಧನೆ ಕೇವಲ ಹಣಕಾಸು ಕ್ಷೇತ್ರದ ಬೆಳವಣಿಗೆಗೆ ಸೀಮಿತವಾಗಿರದೆ, ಉದ್ಯೋಗ ಸೃಷ್ಟಿ, ಕುಟುಂಬಗಳ ಆರ್ಥಿಕ ಪ್ರಗತಿ ಹಾಗೂ ಸಮಾಜದ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯದರ್ಶಿ ಮುಂಜುನಾಥ ಶೆಟ್ಟಿಯವರು ವರದಿ ವಾಚಿಸಿದರು. ಸಮಾವೇಶದ ಪ್ರಮುಖ ಆಕರ್ಷಣೆಯಾಗಿ ಉಡುಪಿಯ ಸಾಫಲ್ಯ ಮಹಿಳಾ ಯಕ್ಷಗಾನ ಬಳಗದ ವತಿಯಿಂದ “ಕವಿರತ್ನ ಕಾಳಿದಾಸ” ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು. ಮಹಿಳಾ ಕಲಾವಿದರು ಪಾತ್ರಾಭಿನಯದಲ್ಲಿ ತೋರಿದ ಆದ್ಭುತ ಪ್ರತಿಭೆ, ಕಲಾ ನೈಪುಣ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮ ಸಂಯೋಜಕರಾದ ನಿರುಪಮಾ ಪ್ರಸಾದ್ ಶೆಟ್ಟಿಯವರ ಮಹಿಳಾ ಯಕ್ಷಗಾನ ತಂಡವನ್ನು ಸನ್ಮಾನಿಸಲಾಯಿತು. ಹೋಟೆಲ್ ಮೂಲಕ ರಾಜಾರಾಮ್ ಶೆಟ್ಟಿಯವರನ್ನು ಅವರ ಸಮಾಜ ಸೇವೆ ಮತ್ತು ನಿವೃತ್ತರ ಬಗೆಗಿನ ಕಾಳಜಿ ಮತ್ತು ಸೇವೆಗೆ ಸನ್ಮಾನಿಸಲಾಯಿತು. ಅಣ್ಣಪ್ಪ ಶೆಟ್ಟಿ ಮತ್ತು ಜಯರಾಮ ಹೆಗ್ಡೆಯವರು ಕಾರ್ಯಕ್ರಮದ ನಿರ್ವಹಣೆಗೆ ಸಹಕರಿಸಿದರು. ಸಾಮಾಜಿಕ ಕಳಕಳಿಯ ಭಾಗವಾಗಿ ಇಬ್ಬರು ಅಸಹಾಯಕರಿಗೆ ಚಿಕಿತ್ಸೆಗೆ ಹಣಕಾಸಿನ ಸಹಾಯ ನೀಡಲಾಯಿತು. ಎ. ರಘರಾಮ ಶೆಟ್ಟಿ, ಕೆ. ಸೀತಾರಾಮ ಶೆಟ್ಟಿ, ಬಿ. ಶ್ಯಾಮರಾಮ ಶೆಟ್ಟಿ, ಎಂ.ಬಿ. ಕರುಣಾಕರ ರೈ, ರಮೇಶ್ ಶೆಟ್ಟಿ -ಸೂಡರವರು ಹೊಸ ಸದಸ್ಯರಾಗಿ ಸಂಘಕ್ಕೆ ಸೇರ್ಪಡೆಗೊಂಡರು.
ಉದಯ ಕುಮಾರ್ ಶೆಟ್ಟಿಯವರು ಬ್ಯಾಂಕಿನ ಹೆಮ್ಮೆಯ ಪರಂಪರೆಯನ್ನು ಸ್ಮರಿಸಿದರು ಮತ್ತು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





