ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌ.ಕೋ-ಅ.ಸೊಸೈಟಿ: ಶಿರ್ವ 2ನೇ ಶಾಖೆ ಉದ್ಘಾಟನೆ

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ. ಅಪರೇಟಿವ್ ಸೊಸೈಟಿ.ಲಿ. ಇದರ 2ನೇ ಶಾಖೆ ಶಿರ್ವದ ಮುಖ್ಯ ರಸ್ತೆಯ ಬಹ್ರೇನ್ ಟವರ್, ನೆಲಮಹಡಿಯಲ್ಲಿ ಶನಿವಾರ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಶ್ರಮ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದಾಗ ಸಂಸ್ಥೆ ಉತ್ತುಂಗಕ್ಕೆ ಏರುತ್ತದೆ. ಕರಾವಳಿ ಜನತೆಗೆ ವಿಶೇಷ ಶಕ್ತಿ ಇದೆ. ಆದ್ದರಿಂದಲೇ ರಾಷ್ಟ್ರೀಕತ ಬ್ಯಾಂಕ್‌ಗಳ ತವರೂ ನಮ್ಮ ಊರಾಗಿದೆ ಎಂದರು. ಶಿರ್ವ ಗ್ರಾಮದ ಶೇ.70 ಜನರು ವಿವಿಧ ದೇಶಗಳಲ್ಲಿ ದುಡಿಯುತ್ತ ಇದ್ದಾರೆ. ಅವರಿಗೆ ತಮ್ಮ ಪ್ರದೇಶದಲ್ಲಿ ಇಂತಹ ಸೌಹಾರ್ದ ಸೊಸೈಟಿಗಳ ಅಗತ್ಯ ಇತ್ತು. ಈ ಸಂಸ್ಥೆ ಗ್ರಾಹಕ ಸ್ನೇಹಿಯಾಗಿ ಬೆಳೆಯಲಿ ಎಂದು ಹಾರೈಸಿದರು.

ಶಿರ್ವ ಆರೋಗ್ಯ ಮಾತಾ ಚರ್ಚ್‌ನ ಧರ್ಮಗುರು ರೆ. ಫಾ. ಚಾರ್ಲ್ಸ್ ಮೆನೆಜಸ್ ಹಾಗೂ ಕೇರಳ ಡಿವೈನ್ ರಿಟ್ರೀಟ್ ಸೆಂಟರ್, ಪೊಟ್ಟಾನ ಧರ್ಮಗರು ರೆ.ಫಾ. ರಿಚರ್ಡ್ ಕ್ವಾಡ್ರಸ್ ಆಶೀರ್ವಚನಗೈದರು.

ಶಿರ್ವ ಆರೋಗ್ಯ ಮಾತಾ ಚರ್ಚ್‌ನ ಧರ್ಮಗುರು ರೆ. ಫಾ. ಚಾರ್ಲ್ಸ್ ಮೆನೆಜಸ್ ಹಾಗೂ ಕೇರಳ ಡಿವೈನ್ ರಿಟ್ರೀಟ್ ಸೆಂಟರ್, ಪೊಟ್ಟಾನ ಧರ್ಮಗರು ರೆ.ಫಾ. ರಿಚರ್ಡ್ ಕ್ವಾಡ್ರಸ್ ಆಶೀರ್ವಚನಗೈದರು.

ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಸಂಸ್ಥೆ, ಬೆಂಗಳೂರು ನಿರ್ದೇಶಕ ಮಂಜುನಾಥ್ ಎಸ್.ಕೆ.,ಜಿಲ್ಲಾ ಸೌಹಾರ್ದ ಸಹಕಾರಿ ಯೂನಿಯನ್ ಅಧ್ಯಕ್ಷ ಪಿ. ಜಗನ್ನಾಥ ಶೆಟ್ಟಿ, ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಮೆಲ್ವಿನ್ ಅರಾನ್ಹಾ, ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್, ಮಾಜಿ ಜಿ.ಪಂ ಸದಸ್ಯರಾದ ಜೆರಾಲ್ಡ್ ಫರ್ನಾಂಡೀಸ್, ವಿಲ್ಸನ್ ಫರ್ನಾಂಡೀಸ್, ಸಂಸ್ಥೆಯ ಅಧ್ಯಕೆ ಜಸಿಂತಾ ಡಿಸೋಜ ಉಪಸ್ಥಿತರಿದ್ದರು.

ಸಂಸ್ಥೆಯ ಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕರಾದ ಜೀವನ್ ಡಿ. ಸೋಜಾ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕೇವಲ ಮೂರು ವರ್ಷದಲ್ಲಿ 3 ಕೋಟಿ ರೂ. ಬಂಡವಾಳದಿಂದ 11 ಕೋಟಿ ದುಡಿಯುವ ಬಂಡವಾಳ ಸಂಗ್ರಹಿಸಿ, 19.5ಲಕ್ಷ ರೂ. ನಿವ್ವಳ ಲಾಭ ಗಳಿಸಿದ ಸಂಸ್ಥೆಯಲ್ಲಿ 1394 ಸದಸ್ಯರನ್ನು ಹೊಂದಿದ್ದಾರೆ. ಶೀಘ್ರದಲ್ಲೇ ಮೂರನೇ ಶಾಖೆ ಪೆರಂಪಳ್ಳಿಯಲ್ಲಿ ತೆರೆಯುವುದಾಗಿ ತಿಳಿಸಿದರು.ಶಾಖೆಯ ವ್ಯವಸ್ಥಾಪಕಿ ಫಿಲ್ಸಿ ಡಿಸೋಜ ವಂದಿಸಿದರೆ, ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿದರು.

Leave a Reply

Your email address will not be published. Required fields are marked *

error: Content is protected !!