ರೌಡಿ ಶೀಟರ್ ಸುಜಿತ್ ಪಿಂಟೋ ಹತ್ಯೆ: ಸಹೋದರರ ಬಂಧನ

ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕಾಡಿ ಎಂಬಲ್ಲಿ ಮಂಗಳವಾರ ರಾತ್ರಿ ನಡೆದ ರೌಡಿಶೀಟರ್ ಸುಜಿತ್ ಪಿಂಟೊ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೊಲೆ ಆರೋಪಿ ಬೈಕಾಡಿಯ ಪ್ರಮೋದ್ ಪೂಜಾರಿಯ ಸಹೋದರ ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ. ಪ್ರಮೋದ್ ಪೂಜಾರಿಯನ್ನು ಪೊಲೀಸರು ಈಗಾಗಲೇ ಪೊಲೀಸರಿಗೆ ಶರಣಾಗಿದ್ದಾನೆ. ಪ್ರದೀಪ್ ಪೂಜಾರಿ ರಿಕ್ಷಾ ಚಾಲಕ ಹಾಗೂ ಪ್ರಮೋದ್ ಪೂಜಾರಿ ಗಾರೆ ಕೆಲಸಗಾರ ಎಂದು ತಿಳಿದುಬಂದಿದೆ. ಪಿಂಟೋ ಜೊತೆ ಇದ್ದ ಜೀವನ್ ಎಂಬಾತ ಕೂಡ ಕೃತ್ಯ ಸಂದರ್ಭದಲ್ಲಿ ಸ್ಥಳದಲ್ಲಿ‌ ಇದ್ದ ಎನ್ನಲಾಗಿದೆ.

ಉಡುಪಿ ಸಂತೆಕಟ್ಟೆಯಲ್ಲಿ ವಾಸವಾಗಿದ್ದ ಸುಜಿತ್ ಪಿಂಟೊ ಐದು ವರ್ಷಗಳ ಹಿಂದೆ ಬೈಕಾಡಿಗೆ ಶಿಫ್ಟ್ ಆಗಿದ್ದನು. ಅಲ್ಲಿ ಒಂದೇ ತಂಡವಾಗಿದ್ದ ಇವರೆಲ್ಲ ಕುಡಿದು ಪರಸ್ಪರ ಗಲಾಟೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕೆಲವು ದಿನಗಳಿಂದ ಸುಜಿತ್ ಪಿಂಟೊ ಸಹೋದರಿಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಚಿತ್ರಹಿಂಸೆ ನೀಡುತ್ತಿದ್ದ ಎಂದು ದೂರಲಾಗಿದೆ.

ಇದೆ ದ್ವೇಷದಿಂದ ಬೈಕಾಡಿಯ ಸರ್ಕಲ್ ಬಳಿ‌ ರಾತ್ರಿ ಬರಲು ಹೇಳಿದ್ದರು. ಅದರಂತೆ ಸಹೋದರರಿಬ್ಬರು ಮತ್ತು ಸುಜಿತ್ ಪಿಂಟೋ ಹಾಗೂ ಆತನ ಗೆಳೆಯ ಅಲ್ಲಿ ಬಂದರು. ಇವರ ಮಧ್ಯೆ ಮಾತಿಗೆ ಮಾತು ಬೆಳೆದು ಪ್ರಮೋದ್ ಪೂಜಾರಿ ಬೈಕ್‌ನ ಸ್ವಾಕಾಪ್ಸರ್‌ ನಿಂದ ಸುಜಿತ್ ಪಿಂಟೊ ತಲೆಗೆ ಹೊಡೆದು ಕೊಲೆ ಮಾಡಿದ್ದ ಎಂದು ತಿಳಿದುಬಂದಿದೆ.

ಈ ಘಟನೆ ಬಳಿಕ ಪ್ರಮೋದ್ ಪೂಜಾರಿ ಕೂಡಲೇ ಠಾಣೆಗೆ ಶರಣಾದರೆ, ಪರಾರಿಯಾಗಿದ್ದ ಪ್ರದೀಪ್ ಪೂಜಾರಿಯನ್ನು ಪೊಲೀಸರು ಬಂಧಿಸಿದರು.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!