ಎಸ್‌ಐಆರ್ ಪ್ರಕ್ರಿಯೆ ಬಳಿಕ ಉಡುಪಿ ಜಿಲ್ಲೆಯಲ್ಲಿ 10,14,143 ಮತದಾರರು

ಉಡುಪಿ, ಅ.27: ಭಾರತೀಯ ಚುನಾವಣಾ ಆಯೋಗದ ಮೂಲಕ ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ- 2026 (ಎಸ್‌ಐಆರ್) ಪ್ರಕ್ರಿಯೆಯ ಮುಕ್ತಾಯಗೊಂಡು ಇಂದು ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿಯಂತೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 10,14,143 ಮಂದಿ ಮತದಾರರಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾಧಿ ಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದ ನಡೆದ ಎಸ್‌ಐಆರ್ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ನೀಡಿದ್ದು, ಒಟ್ಟಾರೆಯಾಗಿ ಉಡುಪಿ ಜಿಲ್ಲೆಯಲ್ಲಿ 49,733 ಮತದಾರರು ಕಡಿಮೆಯಾಗಿದ್ದಾರೆ ಎಂದು ತಿಳಿಸಿದರು.

ಎಸ್‌ಐಆರ್ ಪ್ರಕ್ರಿಯೆಯ ಕೊನೆಯಲ್ಲಿ ಅತ್ಯಂತ ಕಡಿಮೆ ಮತದಾರರ ಇಳಿಕೆ ಕಂಡುಬಂದ ಜಿಲ್ಲೆಯಲ್ಲಿ ಉಡುಪಿ ಜಿಲ್ಲೆ ಅತ್ಯಂತ ಕನಿಷ್ಠ ಇಳಿಕೆಯ ಮೂಲಕ ಅಗ್ರಸ್ಥಾನದಲ್ಲಿದೆ. ಇಲ್ಲಿ ಒಟ್ಟಾರೆ ಮತದಾರರ ಪೈಕಿ ಶೇ.4.67ರಷ್ಟು ಮತದಾರರು ಮಾತ್ರ ಅನರ್ಹರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಶೇ.6.95 ಇಳಿಕೆಯೊಂದಿಗೆ ಎರಡನೇ ಹಾಗೂ ಉತ್ತರ ಕನ್ನಡ ಜಿಲ್ಲೆ ಶೇ.7.35 ಇಳಿಕೆಯೊಂದಿಗೆ ಮೂರನೇ ಸ್ಥಾನದಲ್ಲಿದೆ.

ಜೂನ್ 16ರಂದು ಎಸ್‌ಐಆರ್ ಪ್ರಾರಂಭಗೊಳ್ಳುವ ಮುನ್ನ ಉಡುಪಿ ಜಿಲ್ಲೆಯಲ್ಲಿ ಒಟ್ಟು 10,63,876 ಮತದಾರರಿದ್ದು, ಇದೀಗ ಇಂದು ಪ್ರಕಟಗೊಂಡು ಎಸ್‌ಐಆರ್ ಪ್ರಕ್ರಿಯೆ ಬಳಿಕದ ಅಂತಿಮ ಮತದಾರರ ಪಟ್ಟಿಯಲ್ಲಿ ಮತದಾರರ ಸಂಖ್ಯೆ 10,14,143ಕ್ಕೆ ಇಳಿದಿದೆ. ಆಗಸ್ಟ್ 24ರಂದು ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ 10,00,545 ಮಂದಿ ಮತದಾರರು ಸ್ಥಾನ ಪಡೆದಿದ್ದರು ಎಂದರು.

ಗಣತಿ ಹಂತದಲ್ಲೇ ಜಿಲ್ಲೆಯಲ್ಲಿ 63,331 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಕರಡು ಪಟ್ಟಿಯ ಬಳಿಕ 17,334 ಮಂದಿ ಹೆಸರು ಪಟ್ಟಿಗೆ ಸೇರ್ಪಡೆಗೊಂಡಿದೆ. ಕರಡು ಪಟ್ಟಿಯ ಬಳಿಕ ವಿವಿಧ ಕಾರಣಗಳಿಂದ 3,736 ಮಂದಿಯ ಹೆಸರು ತೆಗೆದು ಹಾಕಲಾಗಿದೆ. ಹೀಗಾಗಿ ಕರಡು ಪಟ್ಟಿಯ ನಂತರ 13,598 ಮತದಾರರು ಹೆಚ್ಚಳವಾಗಿದೆ ಎಂದವರು ವಿವರಿಸಿದರು.

ವಿಧಾನಸಭಾ ಕ್ಷೇತ್ರವಾರು ವಿವಿಧ ಹಂತದಲ್ಲಿ ಮತದಾರರ ವಿವರ ಹೀಗಿದೆ…

118.ಬೈಂದೂರು ಕ್ಷೇತ್ರ: ಎಸ್‌ಐಆರ್ ಮುನ್ನ ಮತದಾರರ ಸಂಖ್ಯೆ -2,41,863, ಕರಡು ಪಟ್ಟಿಯಲ್ಲಿ ಮತದಾರರು- 2,27,583, ಅಂತಿಮ ಪಟ್ಟಿಯಲ್ಲಿ ಮತದಾರರರು- 2,30,309, ಒಟ್ಟು ತೆಗೆದುಹಾಕಿದವರು- 14,992, ಅಂತಿಮ ಇಳಿಕೆ-11,554.

119.ಕುಂದಾಪುರ: 2,12,473 – 2,00,839 – 2,03,103 – 12,244 – 9,370.

120. ಉಡುಪಿ: 2,21,680 – 2,03 – 954 – 2,07,598 – 18,651 – 14,082.

121. ಕಾಪು: 1,94,718 – 1,84,684 – 1,87,952 – 10,850 – 6,766.

122.ಕಾರ್ಕಳ: 1,93,142 – 1,83,485 – 1,85,181 – 10,330 – 7,961.

ಒಟ್ಟು: 10,63,876 – 10,00,545 – 10,14,143 – 67,067 – 49,733.

ಗಣತಿ ಹಂತದಲ್ಲಿ 63,331 ಮಂದಿಯ ಹೆಸರು ತೆಗೆದು ಹಾಕಿದ ಕಾರಣಗಳು: 4,145 ಮಂದಿ ಲಭ್ಯವಿಲ್ಲ, 29,361 ಮಂದಿ ಸ್ಥಳಾಂತರ, 21,262 ಮಂದಿ ಮರಣ ಹೊಂದಿದ್ದರು, 8,374 ಮಂದಿ ನಕಲಿ ಹಾಗೂ ದ್ವಿರುಕ್ತಿ ಹೆಸರು, 189 ಮಂದಿ ಇತರೆ ಕಾರಣಗಳು. 63,331 ಮಂದಿಯಲ್ಲಿ 14,280 ಮಂದಿ ಬೈಂದೂರು ತಾಲೂಕು, 11,634 ಮಂದಿ ಕುಂದಾಪುರ ತಾಲೂಕು, 17,726 ಮಂದಿ ಉಡುಪಿ ತಾಲೂಕು, 10,034 ಮಂದಿ ಕಾಪು ತಾಲೂಕು ಹಾಗೂ 9,657 ಮಂದಿ ಕಾರ್ಕಳ ತಾಲೂಕಿಗೆ ಸೇರಿದವರು.

ಕರಡು ಪಟ್ಟಿಯ ಬಳಿಕ 3,736 ಮಂದಿಯ ಹೆಸರು ತೆಗೆದು ಹಾಕಿದ ವಿವಿಧ ಕಾರಣಗಳು: ಮರಣ-35, ಸ್ಥಳಾಂತರ-2,620, ನಕಲಿ/ದ್ವಿರುಕ್ತಿ-4, ಇತರೆ ಕಾರಣ-1,077, ಒಟ್ಟು 3,736 ಮಂದಿ. ಇವರಲ್ಲಿ ಬೈಂದೂರು ತಾಲೂಕಿನವರು-712 ಮಂದಿ, ಕುಂದಾಪುರ-610, ಉಡುಪಿ-925, ಕಾಪು-816, ಕಾರ್ಕಳ-673 ಮಂದಿ ಇದ್ದಾರೆ.

ಯುವ ಮತದಾರರ ವಿವರ: ಎಸ್‌ಐಆರ್ ಪ್ರಕ್ರಿಯಲ್ಲಿ ಹೊಸದಾಗಿ ನೊಂದಾಯಿತಗೊಂಡ ಯುವ ಮತದಾರರ ವಿವರ: ಕರಡು ಪಟ್ಟಿಯಲ್ಲಿ ಯುವ ಮತದಾರರು 5,914, ಎಸ್‌ಐಆರ್‌ನಲ್ಲಿ ಹೊಸದಾಗಿ ನೊಂದಾಯಿತ ಯುವ ಮತದಾರರು 5,347. ಅಂತಿಮ ಪಟ್ಟಿಯಲ್ಲಿ ಯುವ ಮತದಾರರ ಸಂಖ್ಯೆ-11,261.

ಸಾರ್ವಜನಿಕರಿಗೆ ಸೂಚನೆ: ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ ಹಾಗೂ ಇತರ ವಿವರಗಳನ್ನು ಪರಿಶೀಲಿಸಿ ಕೊಳ್ಳುವಂತೆ ತಿಳಿಸಿದ ಜಿಲ್ಲಾದಿಕಾರಿ ಸ್ವರೂಪ ಟಿ.ಕೆ. ಅವರು 1-10-2026ಕ್ಕೆ ಅರ್ಹ ನಾಗರಿಕರು ತಮ್ಮ ಹೆಸರು ನೊಂದಾಯಿಸದೇ ಇದ್ದಲ್ಲಿ ಅಥವಾ ವಿವರಗಳಲ್ಲಿ ತಿದ್ದುಪಡಿ ಅಗತ್ಯವಿದ್ದಲ್ಲಿ ಚುನಾವಣಾ ಆಯೋಗದ ಅಧಿಕೃತ ಮಾರ್ಗ ಸೂಚಿಗಳ ಪ್ರಕಾರ ಸಂಬಂಧಿತರಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ವಿವರಿಸಿದ್ದಾರೆ.

ಚುನಾವಣಾ ಆಯೋಗದ ಮಾರ್ಗಸೂಚಿಗಳ ಅನುಸಾರ ಅಂತಿಮ ಮತದಾರರ ಪಟ್ಟಿಯಲ್ಲಿರುವ ನಿರ್ಧಾರಗಳ ಬಗ್ಗೆ ತೃಪ್ತಿ ಇಲ್ಲದಿದ್ದದ್ದಲ್ಲಿ ಸಾರ್ವಜನಿಕರು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಚುನಾವಣಾ ನೊಂದಣಿ ಅಧಿಕಾರಿ (ಇಆರ್‌ಒ) ತೀರ್ಪಿನ ವಿರುದ್ಧವ ಭಾರತೀಯ ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಜಿಲ್ಲಾ ಚುನಾವಣಾ ಅಧಿಕಾರಿ ಬಳಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿದ್ದಾರೆ.

ಎಸ್‌ಐಆರ್ ತಿರಸ್ಕರಿಸಿದ 21 ಮಂದಿ

ಜಿಲ್ಲೆಯಲ್ಲಿ 21 ಮಂದಿ ಎಸ್‌ಐಆರ್‌ನ್ನು ತಿರಸ್ಕರಿಸಿದ್ದಾರೆ. ಇವರು ಎಮ್ಯುನಿರೇಷನ್ ಫಾರ್ಮ್ ತೆಗೆದುಕೊಳ್ಳಲು, ಯಾವುದೇ ದಾಖಲೆಗಳನ್ನು ನೀಡಲು, ಪಡೆಯಲು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಇವರಲ್ಲಿ ಉಡುಪಿಯ 9 ಮಂದಿ, ಕಾಪು ತಾಲೂಕಿನ 12 ಮಂದಿ ಸೇರಿದ್ದಾರೆ ಎಂದು ಸ್ವರೂಪ ಟಿ.ಕೆ. ತಿಳಿಸಿದರು.

ಕರಡು ಪಟ್ಟಿಯ ಬಳಿಕ ಅನರ್ಹರಾದ 1077 ಮಂದಿಯ ಪೈಕಿ 97 ಮಂದಿ ಗೈರು ಆಗಿದ್ದರೆ, 213 ಮಂದಿ ಮರಣ ಹೊಂದಿದ್ದಾರೆ, 286 ಮಂದಿ ನಕಲಿ ಅಥವಾ ದ್ವಿರುಕ್ತಿ, 390 ಮಂದಿ ವರ್ಗಾವಣೆಗೊಂಡಿದ್ದರೆ, 23 ಮಂದಿ ಯಾವುದೇ ದಾಖಲೆ ಸಲ್ಲಿಸಿಲ್ಲ ಎಂದು ಅವರು ವಿವರಿಸಿದರು.

ಉಡುಪಿ ಜಿಲ್ಲೆಯಲ್ಲಿ 47 ಮಂದಿ ‘ಭಾರತೀಯರಲ್ಲದವರ’ ಪತ್ತೆ

ಎಸ್‌ಐಆರ್ ಪ್ರಕ್ರಿಯೆ ವೇಳೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 47 ಮಂದಿ ‘ಭಾರತೀಯ ನಾಗರಿಕರಲ್ಲದವರು’ ಪತ್ತೆಯಾಗಿ ದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇವರಲ್ಲಿ ನೇಪಾಳದವರು 37 ಮಂದಿ, ಬ್ರಿಟನ್‌ನ 3, ಅಮೆರಿಕದ ನಾಲ್ವರು, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯನ್ ಪೌರತ್ವ ಹೊಂದಿರುವ ತಲಾ ಒಬ್ಬರು ಪತ್ತೆಯಾಗಿದ್ದಾರೆ.

ಬ್ರಹ್ಮಾವರ ತಾಲೂಕಿನಲ್ಲಿ ಇಬ್ಬರು ನೇಪಾಳದವರು, ಉಡುಪಿಯಲ್ಲಿ 26 ಮಂದಿ (18 ನೇಪಾಳ, 3-ಯುಕೆ, 3-ಅಮೆರಿಕ, 1-ಕೆನಡಾ, 1-ಫ್ರಾನ್ಸ್) ಪತ್ತೆಯಾದರೆ, ಕಾಪು ತಾಲೂಕಿನಲ್ಲಿ 17 ಮಂದಿ ನೇಪಾಳಿಗರು, ಕಾರ್ಕಳದಲ್ಲಿ ಅಮೆರಿಕ ಮತ್ತು ಆಸ್ಟ್ರೇಲಿಯದ ತಲಾ ಒಬ್ಬರು ಪತ್ತೆಯಾಗಿದ್ದಾರೆ. ನೇಪಾಳಿಗರನ್ನು ಹೊರತು ಪಡಿಸಿ ಉಳಿದ ಹೆಚ್ಚಿನವರು ಸ್ಥಳೀಯರೇ ಆಗಿದ್ದು, ಆಯಾ ದೇಶಗಳ ಪೌರತ್ವ ಪಡೆದವರಾಗಿದ್ದಾರೆ ಎಂದು ಡಿಸಿ ತಿಳಿಸಿದರು.

ಕರಡು ಪಟ್ಟಿ ಬಳಿಕ ಸ್ವೀಕರಿಸಿದ ಅರ್ಜಿಯ ಮಾಹಿತಿ

ಆಗಸ್ಟ್ 24ರಂದು ಕರಡು ಪಟ್ಟಿ ಪ್ರಕಟಿಸಿದ ಬಳಿಕ ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಗಳ ಸ್ಥಿತಿಗತಿ: ಜಿಲ್ಲೆಯಲ್ಲಿ ಸೇರ್ಪಡೆಗೆ ಬಂದ ಫಾರ್ಮ್ ನಂ.6- 14,712, ಇದರಲ್ಲಿ ತಿರಸ್ಕೃತ- 361, ಸ್ವೀಕೃತ-14,351. ಫಾರ್ಮ್ ನಂ.6ಎ (ಎನ್‌ಆರ್‌ಐ)-349, ತಿರಸ್ಕೃತ-84, ಸ್ವೀಕೃತ-265, ಫಾರ್ಮ್ ನಂ.7(ಕೈಬಿಟ್ಟ ಹೆಸರು)-5043, ತಿರಸ್ಕೃತ -1,307, ಸ್ವೀಕೃತ-3736, ಫಾರ್ಮ್ ನಂ.8 (ವರ್ಗಾವಣೆ)-38,976, ತಿರಸ್ಕೃತ-1441, ಸ್ವೀಕೃತ-37,535. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 59,080 ಅರ್ಜಿಗಳನ್ನು ಸ್ವೀಕರಿಸಿದ್ದು, ಇವುಗಳಲ್ಲಿ 3193 ಅರ್ಜಿ ತಿರಸ್ಕೃತಗೊಂಡು 55,887 ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕರಡು ಪಟ್ಟಿಯ ಬಳಿಕ ಜಿಲ್ಲೆಯಲ್ಲಿ ಮತದಾರರ ಸೇರ್ಪಡೆಯ ವಿವರ: ಫಾರ್ಮ್ 6 ಅಂಗೀಕಾರ-14,351, ಫಾರ್ಮ್‌6ಎ ಅಂಗೀಕಾರ-265, ಫಾರ್ಮ್ 8 ಅಂಗೀಕಾರಣ-2,718. ಒಟ್ಟು ಸೇರ್ಪಡೆ-17,334. ಕರಡು ಪಟ್ಟಿಯ ಬಳಿಕ ಮತದಾರರ ಪಟ್ಟಿಗೆ 8,540 ಪುರುಷ ಹಾಗೂ 8,794 ಮಹಿಳಾ ಮತದಾರರು ಸೇರಿದಂತೆ ಒಟ್ಟು 17,334 ಮತದಾರರ ಸೇರ್ಪಡೆ ಯಾಗಿದೆ.

ಉಡುಪಿ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ

ವಿಧಾನಸಭಾ ಕ್ಷೇತ್ರ ಪುರುಷ ಮಹಿಳೆ ತೃತೀಯಲಿಂಗ ಒಟ್ಟು

ಬೈಂದೂರು 112987, 117319, 3 = 230309

ಕುಂದಾಪುರ 97975, 105126, 2 = 203103

ಉಡುಪಿ 100112, 107483, 3 = 207598

ಕಾಪು 90588, 97361, 3 = 187952

ಕಾರ್ಕಳ 89447 95734 0 185181

ಜಿಲ್ಲೆ ಒಟ್ಟು 491109 523023 11 1014143

Leave a Reply

Your email address will not be published. Required fields are marked *

error: Content is protected !!