ಕಾಪುವಿನ ಅಮ್ಮನ ಸನ್ನಿದಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಉದ್ಘಾಟನೆ

ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ; ಡಾ. ಮೋಹನ್ ಆಳ್ವ ಸಹಿತ 9 ಜನ ಗಣ್ಯರಿಂದ ಅಕ್ಷರ ನಮನ

ಕಾಪು, ಅ. 11: ಕಾಪು ಮಾರಿಯಮ್ಮನ ಸನ್ನಿದಾನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ದೇವಳದ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ ಕುಮಾರಗುರು ತಂತ್ರಿ ಕೊರಂಗ್ರಪಾಡಿ ಮತ್ತು ವೇದಮೂರ್ತಿ ಶ್ರೀನಿವಾಸ್ ತಂತ್ರಿ ಕಲ್ಯ ಅವರು ಉಚ್ಚಂಗಿ ಸಹಿತ ಮಾರಿಯಮ್ಮನಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ, ನಂತರ ಶರನ್ನವರಾತ್ರಿ ಮಹೋತ್ಸವದ ಉದ್ಘಾಟನೆ ಮತ್ತು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಎಮ್ ಮೋಹನ್ ಆಳ್ವ ದೀಪ ಬೆಳಗಿಸುವ ಮೂಲಕ ನೆರೆವೇರಿಸಿದರು.

ಉದ್ಘಾಟಕರಾಗಿ ಡಾ. ಎಂ ಮೋಹನ್ ಆಳ್ವ ಅವರು ಮಾತನಾಡಿ ಬಹಳ ಪುರಾತನ ಸಂಸ್ಕೃತಿ ಇರುವಂತಹ ದೇವಳ ದೇಶಕ್ಕೆ, ರಾಜ್ಯಕ್ಕೆ ಮಾದರಿಯಾಗಿದೆ, ನವದುರ್ಗಾ ಲೇಖನ ಅನ್ನುವಂತಹ ವಿಶೇಷವಾದ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಡಿನ ಎಲ್ಲಾ ಭಕ್ತರು ಪಾಲ್ಗೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆನಂದ್ ಎಮ್. ಶೆಟ್ಟಿ ಮಾತನಾಡಿ ನನ್ನ ಅಮ್ಮನ ಕನಸಿನಲ್ಲಿ ಬಂದು ನನ್ನಮ್ಮ ಇಲ್ಲಿಗೆ ಬರುತ್ತಿದ್ದರು, ಆದರೆ ಇಂದು ನಾನು ಕೂಡಾ ಬರುತ್ತಿದ್ದೇನೆ ಇಲ್ಲಿನ ತಾಯಿಯ ಶಕ್ತಿ ಅಪಾರ, ಎಂತಹ ಕಷ್ಟವನ್ನು ಕೂಡಾ ದೂರ ಮಾಡುವ ಶಕ್ತಿ ಜಗದೀಶ್ವರಿ, ಜಗನ್ಮಾತೆ ತಾಯಿ ಮಾರಿಯಮ್ಮನಿಗಿದೆ, ಎಲ್ಲರೂ ಇಲ್ಲಿರುವ ನವದುರ್ಗಾ ಲೇಖನ ಬರೆಯಿರಿ, ಶಾಶ್ವತ ಸೇವೆ ನೀಡಿ ಅವಳ ಅನುಗ್ರಹವನ್ನು ಪಡೆಯಿರಿ ಎಂದರು.

ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಪ್ರತೀಕ್ ಬಾಯಲ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಆರ್ಗ್ಯಾನಿಕ್ ಇಂಡಸ್ಟ್ರೀಸ್ ಪ್ರೈ.ಲಿ. ಮುಂಬೈ ಆಡಳಿತ ನಿರ್ದೇಶಕ ಆನಂದ್ ಎಂ ಶೆಟ್ಟಿ ತೋನ್ಸೆ, ವಿಕೆ ಗ್ರೂಪ್ ಆಫ್ ಕಂಪನೀಸ್ ಪ್ರೈ. ಲಿ. ಮುಂಬೈ ಆಡಳಿತ ನಿರ್ದೇಶಕ ಕೆ. ಎಂ ಶೆಟ್ಟಿ, ಮಾಹೆ ಮಣಿಪಾಲ ಉಪಕುಲಪತಿ ಡಾ. ಎಚ್ ಎಸ್ ಬಳ್ಳಾಲ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಡಾ ದೇವಿಪ್ರಸಾದ್ ಶೆಟ್ಟಿ ಬೆಳಪು, ಗೌರವ ಸಲಹೆಗಾರ ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಕೆ. ವಿಶ್ವನಾಥ್, ಕಾಪು ಲಕ್ಷ್ಮಿ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಎಸ್. ಶೆಟ್ಟಿ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಧಾರ್ಮಿಕ ಸಮಿತಿಯ ಪ್ರಧಾನ ಸಂಚಾಲಕ ಕೆ. ಭಗವಾನ್ ದಾಸ್, ನವದುರ್ಗಾ ಲೇಖನ ಯಜ್ಞ ಸಮಿತಿಯ ಕಾರ್ಯಧ್ಯಕ್ಷ ಯೋಗೀಶ್ ವಿ ಶೆಟ್ಟಿ, ಸಾವಿತ್ರಿ ಗಣೇಶ್, ಪ್ರಧಾನ ಕಾರ್ಯದರ್ಶಿ ಗೀತಾಂಜಲಿ ಎಂ ಸುವರ್ಣ, ಕೋಶಾಧಿಕಾರಿ ಸುನಿಲ್ ಎಸ್. ಪೂಜಾರಿ, ವ್ಯವಸ್ಥಾಪನ ಸಮಿತಿ ಸದಸ್ಯ ಶೇಖರ ಸಾಲ್ಯಾನ್, ಮನೋಹರ್ ರಾವ್, ರವೀಂದ್ರ ಮಲ್ಲಾರ್, ಜಯಲಕ್ಷ್ಮಿ ಎಸ್. ಶೆಟ್ಟಿ, ಚರಿತ ದೇವಾಡಿಗ, ಕೊಡವೂರು ಸಾಯಿಬಾಬಾ ಮಂದಿರ ಟ್ರಸ್ಟಿ ದಿವಾಕರ ಶೆಟ್ಟಿ ಕೊಡವೂರು, ಸುಧಾಕರ ಶೆಟ್ಟಿ ಮಕರ, ಡಾ. ಪ್ರಶಾಂತ್ ಶೆಟ್ಟಿ ಕಾಪು, ಬೀನಾ ವಿ.ಶೆಟ್ಟಿ, ಶಿಲ್ಪಾ ಜಿ. ಸುವರ್ಣ, ಅನುರಾಧ ಮನೋಹರ್ ಶೆಟ್ಟಿ, ಕಾಪು ಜಯರಾಮ್ ಆಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ನಿರ್ಮಲ್ ಕುಮಾರ್ ಹೆಗ್ಡೆ ಮತ್ತು ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು, ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ. ಕೆ.ವಾಸುದೇವ ಶೆಟ್ಟಿ ಸ್ವಾಗತಿಸಿ, ಧನ್ಯವಾದಗೈದರು.

Leave a Reply

Your email address will not be published. Required fields are marked *

error: Content is protected !!