ಜನ್ಮಾಷ್ಠಿಮಿಗೆ ವೇಷ ಧರಿಸಿ ಚಿಕಿತ್ಸೆಗೆ ನೆರವು: ₹1ಲಕ್ಷ ರೋಗಿಗೆ ಹಸ್ತಾಂತರ

ಉಡುಪಿ: ಅನಾರೋಗ್ಯದಿಂದ ಬಳಲುತ್ತಿರುವ 14 ವರ್ಷದ ಬಾಲಕಿಯ ವೈದ್ಯಕೀಯ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಲೋಕ ಕಲ್ಯಾಣ ಫೌಂಡೇಶನ್ ವತಿಯಿಂದ ಸಾರ್ವಜನಿಕರಿಂದ ಸಂಗ್ರಹಿಸಲಾದ ₹1 ಲಕ್ಷ ಮೊತ್ತವನ್ನು ರೋಗಿಯ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಬಾಲಕಿಯ ಚಿಕಿತ್ಸೆಗೆ ಸುಮಾರು ₹3.5 ಲಕ್ಷದಿಂದ ₹5 ಲಕ್ಷದವರೆಗೆ ವೆಚ್ಚವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರ್ಥಿಕ ನೆರವಿಗಾಗಿ ಮನವಿ ಮಾಡಲಾಗಿತ್ತು. ಈ ಮನವಿಗೆ ಸ್ಪಂದಿಸಿದ ದಾನಿಗಳು ಹಾಗೂ ಸಾರ್ವಜನಿಕರಿಂದ ಸಂಗ್ರಹವಾದ ₹1 ಲಕ್ಷವನ್ನು ಸುಬ್ರಹ್ಮಣ್ಯ ನಗರದ ಬಾಲಕಿಯ ಚಿಕಿತ್ಸಾ ವೆಚ್ಚಕ್ಕಾಗಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಫೌಂಡೇಶನ್‌ನ ಪದಾಧಿಕಾರಿಗಳು ಹಾಗೂ ಸಹಕಾರ ನೀಡಿದವರು ಉಪಸ್ಥಿತರಿದ್ದರು. ಬಾಲಕಿಯ ಚಿಕಿತ್ಸೆಗೆ ಇನ್ನಷ್ಟು ನೆರವಿನ ಅಗತ್ಯವಿದ್ದು, ಮಾನವೀಯ ನೆಲೆಯಲ್ಲಿ ಸಾರ್ವಜನಿಕರು ತಮ್ಮ ಕೈಲಾದ ಸಹಾಯ ನೀಡುವಂತೆ ಫೌಂಡೇಶನ್ ಮನವಿ ಮಾಡಿದೆ.

ಯಶ್, ಆಕಾಶ್, ಲತೀಶ್, ಭಾವಂತ್, ಯಶ್ವಿನ್, ನಿಖಿಲ್, ಶಾಶ್ವತ್, ಸಂದೇಶ್, ರಕ್ಷಿತ್ ಫೌಂಡೇಶನ್ ವತಿಯಿಂದ ಕಾರ್ಯಪ್ರವೃತ್ತರಾಗಿದ್ದಾರೆ, ಮಾಜಿ ನಗರಸಭಾ ಸದಸ್ಯ, ಉದ್ಯಮಿ ಬಾಲಕೃಷ್ಣ ಶೆಟ್ಡಿ ಅವರು ಈ ತಂಡಕ್ಕೆ ಸಹಕಾರ ನೀಡಿದರು.

“ಸಾರ್ವಜನಿಕರ ಸಣ್ಣ ನೆರವೂ ಸಂಕಷ್ಟದಲ್ಲಿರುವ ಕುಟುಂಬಕ್ಕೆ ದೊಡ್ಡ ಆಸರೆಯಾಗುತ್ತದೆ. ಬಾಲಕಿಯ ಚಿಕಿತ್ಸೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು” ಎಂದು ಫೌಂಡೇಶನ್ ತಿಳಿಸಿದೆ

Leave a Reply

Your email address will not be published. Required fields are marked *

error: Content is protected !!