ಬೆಂಗಳೂರಿಗೆ ಬರುವ ಶಾಸಕರಿಗೆ ಎರಡೆರಡು ಮದುವೆ!- ಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ವೈರಲ್

ಬೆಂಗಳೂರು : ‘ಬೆಂಗಳೂರಿಗೆ ಬಂದ ಶಾಸಕರೆಲ್ಲರೂ ಎರಡೆರಡು ಮದುವೆಯಾಗಿದ್ದಾರೆ. ನನ್ನ ಬಳಿ ಅಂತಹ ಡಜನ್‌ಗಟ್ಟಲೆ ಶಾಸಕರ ಸಂಪೂರ್ಣ ಪಟ್ಟಿ ಇದೆʼ ಎಂದು ಮಾತನಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗುರುವಾರ ವಿಧಾನಸಭೆಯ ಕಲಾಪದಲ್ಲಿ ರಾಜ್ಯದ ಬರ ಪರಿಸ್ಥಿತಿ ಹಾಗೂ ರಾಜಧಾನಿ ಬೆಂಗಳೂರಿನ ಬೆಳವಣಿಗೆಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ,ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿದ ಹೇಳಿಕೆಯೊಂದು ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿತು.

ಬೆಂಗಳೂರಿಗೆ ಬಂದ ಶಾಸಕರೆಲ್ಲರೂ ಎರಡೆರಡು ಮದುವೆಯಾಗಿದ್ದಾರೆ. ನನ್ನ ಬಳಿ ಅಂತಹ ಡಜನ್‌ಗಟ್ಟಲೆ ಶಾಸಕರ ಸಂಪೂರ್ಣ ಪಟ್ಟಿ ಇದೆ. ಅದರಲ್ಲೂ, ಧಾರವಾಡ, ಕಾರವಾರ, ದಕ್ಷಿಣ ಕನ್ನಡ ಸೇರಿದಂತೆ ಎಲ್ಲಾ ಜಿಲ್ಲೆಗಳಿಂದ ಬಂದವರ ಇತಿಹಾಸವೂ ನನಗೆ ಗೊತ್ತು. ಆದರೆ ಈಗ ಆ ಇತಿಹಾಸವನ್ನೆಲ್ಲಾ ಬಿಚ್ಚಿಡುವುದು ಬೇಡ ಎಂದು ಶಿವಕುಮಾರ್ ಹೇಳಿದರು.

ಡಿ.ಕೆ. ಶಿವಕುಮಾರ್ ಅವರ ಈ ‘ಎರಡು ಮದುವೆ’ ಹೇಳಿಕೆಗೆ ತಕ್ಷಣವೇ ಮಧ್ಯಪ್ರವೇಶಿಸಿದ ಶಾಸಕ ಬಿ.ಪಿ. ಹರೀಶ್, ಸರ್ ಅದೇನೋ ಎರಡು-ಮೂರು ಮದುವೆ? ಯಾರದ್ದು ಸರ್ ಅದು? ಅವರ ಕತೆಯಲ್ಲ ನಿಮಗೆ ಹೇಗೆ ಗೊತ್ತು? ಅದನ್ನು ಹುಡುಕಿಕೊಂಡು ಹೊರಟಿದ್ದೀರಲ್ಲ, ನೋಡಿದರೆ ನೀವು ಮಹಾನ್ ಕಲಾವಿದ ಇರಬೇಕು ಸರ್ ಎಂದು ಕಾಲೆಳೆದರು.

ಇದಕ್ಕೆ ಡಿ.ಕೆ.ಶಿವಕುಮಾರ್, ಅದೆಲ್ಲಾ ಈಗ ಬೇಡ ಬಿಡಿ, ವೈಯಕ್ತಿಕ ವಿಷಯಗಳನ್ನು ಸದನದಲ್ಲಿ ಚರ್ಚಿಸುವುದು ಬೇಡ. ಅದನ್ನೆಲ್ಲಾ ಆಮೇಲೆ ಕುಳಿತು ಮಾತನಾಡೋಣ ಎಂದು ವಿಷಯಕ್ಕೆ ತೆರೆ ಎಳೆದರು.

Leave a Reply

Your email address will not be published. Required fields are marked *

error: Content is protected !!