ಉಡುಪಿ ಉಚ್ಚಿಲ ದಸರಾ- 2026: ಆಮಂತ್ರಣ ಪತ್ರಿಕೆ ಬಿಡುಗಡೆ
ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 21 ರವರೆಗೆ ಜರಗಲಿರುವ “ಪಂಚಮ” ಉಡುಪಿ – ಉಚ್ಚಿಲ ದಸರಾ – 2026 ಇದರ ಆಮಂತ್ರಣ ಪತ್ರಿಕೆಯನ್ನು ಭಾನುವಾರ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದಗೌರವ ಸಲಹೆಗಾರರಾದ ನಾಡೋಜಾ ಡಾ. ಜಿ ಶಂಕರ್ ಬಿಡುಗಡೆಗೊಳಿಸಿದರು.
ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯರವರು ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಬಳಿಕ ನಾಡೋಜಾ ಡಾ. ಜಿ ಶಂಕರ್ ಮಾತನಾಡಿ, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಕಾರಣ ನಮ್ಮ ಮಿತಿಯಲ್ಲಿ ಈ ಬಾರಿಯ 5 ನೇ ವರ್ಷದ ದಸರಾ ಆಚರಿಸಲಿದ್ದೇವೆ. ಕಳೆದ ಬಾರಿಯಂತೆ ಈ ಬಾರಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಶೇಷ ಆಕರ್ಷಣೆಗಳು ಇರಲಿದೆ.
ದಸರಾ ಕಾರ್ಯಕ್ರಮವನ್ನು ಮಾನ್ಯ ಸಕ್ಕರೆ ಮತ್ತು ಜವಳಿ ಸಚಿವರಾದ ರುದ್ರಪ್ಪ ಎಂ ಲಮಾಣಿ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಉಡುಪಿ ಉಸ್ತುವಾರಿ ಸಚಿವ ರಿಜ್ವಾನ್ ಅರ್ಶದ್, ಆರೋಗ್ಯ ಸಚಿವ ಯುಟಿ ಖಾದರ್ ಮತ್ತು ಗಣ್ಯಾತಿ ಗಣ್ಯರು ಭಾಗವಹಿಸಲಿದ್ದಾರೆ. ಶೋಭಾಯಾತ್ರೆಯು ಈ ಹಿಂದಿನ ದಸರಾದಂತೆ ಅತ್ಯಂತ ವಿಜೃಂಭಣೆಯಿಂದ ಜರಗಲಿದೆ ಎಂದರು.
ದಕ್ಷಿಣಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ.ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರಾ ಮಲ್ಪೆ ಮಾತನಾಡಿದರು.
ಈ ಸಂದರ್ಭ ದಕ್ಷಿಣಕನ್ನಡ ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ರತ್ನಾಕರ್ ಸಾಲ್ಯಾನ್ ಮಲ್ಪೆ, ಸುಜಿತ್ ಸಾಲ್ಯಾನ್ ಮೂಲ್ಕಿ, ಗುಂಡು ಬಿ. ಅಮೀನ್ ಕಿದಿಯೂರು, ವಾಸುದೇವ ಸಾಲ್ಯಾನ್ ಕಟಪಾಡಿ, ಸುಗುಣ ಎಸ್ ಕರ್ಕೇರ, ಸುಧಾಕರ್ ಕುಂದರ್ ಬಂಕೇರ್ ಕಟ್ಟ, ದಿನೇಶ್ ಎರ್ಮಾಳು, ಯಜ್ಞೇಶ್ ಕರ್ಕೇರ, ಕವಿತಾ ಶರತ್, ಉದಯ ಕುಮಾರ್ ಹಟ್ಟಿಯಂಗಡಿ, ಶಂಕರ್ ಸಾಲ್ಯಾನ್, ಮನೋಜ್ ಉಲ್ಲಾಳ್, ಸತೀಶ್ ಕುಂದರ್ ಕೈಪುಂಜಾಲು, ಸುಭಾಷ್ ಕಾಂಚನ್, ಯುವರಾಜ್ ಕಿದಿಯೂರು, ರವೀಶ್ ಕೊರವಾಡಿ, ಮನೋಜ್ ಕಾಂಚನ್ ಎರ್ಮಾಳ್, ದಿನೇಶ್ ಮೂಳೂರು, ಮೋಹನ್ ಬಂಗೇರ ಕಾಪು, ಸರ್ವೋತ್ತಮ ಕುಂದರ್, ಶಿವಪ್ಪ ಕಾಂಚನ್ ಮಲ್ಪೆ, ಸತೀಶ್ ಕುಂದರ್ ಮಲ್ಪೆ, ನಾರಾಯಣ ಸಿ. ಕರ್ಕೇರ, ಗುಂಡು ಬಿ ಅಮೀನ್ ಕಿದಿಯೂರ್, ಸತೀಶ್ ಸಾಲ್ಯಾನ್ ಎರ್ಮಾಳ್, ದೇವಳದ ಪ್ರಬಂಧಕ ಸತೀಷ್ ಅಮೀನ್ ಪಡುಕರೆ ಮುಂತಾದವರು ಉಪಸ್ಥಿತರಿದ್ದರು.





