ಸೆ.14-23: ಕನ್ನರ್ಪಾಡಿ-ಕಿನ್ನಿಮುಲ್ಕಿ 21ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಉಡುಪಿ: ಕನ್ನರ್ಪಾಡಿ-ಕಿನ್ನಿಮುಲ್ಕಿ 21ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಕಿನ್ನಿಮುಲ್ಕಿ ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ಸಂಭ್ರಮದ ಗಣೇಶೋತ್ಸವ ಸೆ.14ರಿಂದ 23ರ ತನಕ ನಡೆಯಲಿದೆ.

ಸೆ.14ರಂದು ಬೆಳಗ್ಗೆ 8.30ಕ್ಕೆ ಮೆರವಣಿಗೆಯಲ್ಲಿ ಗಣಪತಿ ವಿಗ್ರಹ ತರಲಾಗುವುದು. ಬೆಳಗ್ಗೆ 10 ಗಂಟೆಗೆ ಪ್ರಾರ್ಥನೆ, ಬೆಳಗ್ಗೆ 10.15ಕ್ಕೆ ಪ್ರಾಣ ಪ್ರತಿಷ್ಠೆ ವಿಧಿ ನೆರವೇರಲಿದೆ. ನಿತ್ಯ ಭಜನೆ, ಭಕ್ತಿ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 7.30ಕ್ಕೆ ರಂಗಪೂಜೆ ಜರುಗಲಿದೆ.

ಸೆ.15ರ ರಾತ್ರಿ 7 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸಿವಿಲ್ ಎಂಜಿನಿಯರ್ ಎಂ.ಗಂಗಾಧರ ರಾವ್ ಕನ್ನರ್ಪಾಡಿ (ನಂದ ಕುಮಾರ್) ಉದ್ಘಾಟಿಸುವರು. ನಾಡೋಜ ಡಾ.ಕೃಷ್ಣ ಪ್ರಸಾದ್ ಅಧ್ಯಕ್ಷತೆ ವಹಿಸುವರು. ವಿದ್ಯಾ ನಿಧಿ ವಿತರಿಸಲಾಗುವುದು. ಸೆ. 21 ರಂದು ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ, ಸೆ.22ರಂದು ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ನರೇಂದ್ರ ಬಹುಮಾನ ವಿತರಿಸುವರು. ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷನಾಗರಾಜ್ ಸುವರ್ಣ ವಿದ್ಯಾನಿಧಿ ವಿತರಿಸುವರು. ನಾಡೋಜ ಡಾ.ಕೃಷ್ಣಪ್ರಸಾದ್ ಉಪಸ್ಥಿತರಿರುವರು. ಸೆ.23ರಂದು ಸಂಜೆ 5ಕ್ಕೆ ರಂಗ ಪೂಜೆ, ಸಂಜೆ 5.30ಕ್ಕೆ ವೈಭವದ ವಿಸರ್ಜನಾ ಮೆರವಣಿಗೆ ನಡೆಯಲಿದೆ.

ಸೆ.14ರಂದು ಬೆಳಗ್ಗೆ 10.30ಕ್ಕೆ ಶ್ರೀಹರಿದರ್ಶನ ಯಕ್ಷಗಾನ ತಾಳಮದ್ದಳೆ, ಸಂಜೆ 6ಕ್ಕೆ ಸವಿತಾ, ಶ್ವೇತಾ, ಸಂದೀಪ್ ಅವರಿಂದ ಸ್ಯಾಕ್ರೋಫೋನ್ ವಾದನ, ರಾತ್ರಿ 8ಕ್ಕೆ ಭಕ್ತಿ ಸಂಗೀತ.

ಸೆ.15ರಂದು ಸಂಜೆ 5ರಿಂದ ಭಕ್ತಿಗೀತೆ, ಭಾವಗೀತೆ, ಸುಗಮ ಸಂಗೀತ, ರಾತ್ರಿ 9ಕ್ಕೆ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ.

ಸೆ.16ರಂದು ಸಂಜೆ 5ಕ್ಕೆ ಯಕ್ಷಗಾನ ತಾಳಮದ್ದಳೆ, ಸಂಜೆ 6ಕ್ಕೆ ಭಕ್ತಿ ಸಂಗೀತ, ರಾತ್ರಿ 7.30ಕ್ಕೆ ರಂಗ ಪೂಜೆ, ರಾತ್ರಿ 9ಕ್ಕೆ ಶ್ರಾವಣಿ ನಾಟಕ ಪ್ರದರ್ಶನ.

ಸೆ.17ರಂದು ಸಂಜೆ 4ಕ್ಕೆ ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯಂ ವೃಂದದಿಂದ ಭಕ್ತಿ ಸಂಗೀತ, ಸಂಜೆ 6ಕ್ಕೆ ಬೇಬಿ ಶ್ರೀಯಾ ಅವರಿಂದ ಭಕ್ತಿ ಗೀತಾ ಸಾಂಸ್ಕೃತಿಕ ವೈಭವ ಗಾಯನ, ರಾತ್ರಿ 8ಕ್ಕೆ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ಗಾನ ಸಂಭ್ರಮ.

ಸೆ.18ರಂದು ಸಂಜೆ 6ಕ್ಕೆ ದಪರ್ಣ ಸ್ಕೂಲ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಸಂಸ್ಥೆಯ ವಿದುಷಿ ರಕ್ಷಾ ಮತ್ತು ರಮ್ಯಾ ಅವರಿಂದ ನೃತ್ಯ, ರಾತ್ರಿ 8.30ಕ್ಕೆ ಮಂಗಳೂರಿನ ಕಲಾ ಸಿರಿ ತಂಡದಿಂದ ನೃತ್ಯ ಕಲರವ.

ಸೆ.19ರಂದು ಸಂಜೆ 5ಕ್ಕೆ ಭಕ್ತಿ ಸಂಗೀತ, ಸಂಜೆ 6.30ಕ್ಕೆ ಉದ್ಯಾವರ ಶ್ರೀ ಕಲಾ ನಾಟ್ಯಾಲಯದಿಂದ ಭರತನಾಟ್ಯ ಪ್ರದರ್ಶನ, ರಾತ್ರಿ 9ಕ್ಕೆ ಕವಿರತ್ನ ಕಾಳಿದಾಸ ಯಕ್ಷಗಾನ ಪ್ರದರ್ಶನ.

ಸೆ.20ರಂದು ಸಂಜೆ 6ಕ್ಕೆ ಮೇದಿನಿ ಭಟ್ ಕಿನ್ನಿಮುಲ್ಕಿ ಮತ್ತು ಬಳಗದಿಂದ ಭಕ್ತಿ ಭಾವ ಗಾನ, ರಾತ್ರಿ 9ಕ್ಕೆ ಕಥೆ ಏರ್ ಬರೆಪೆರ್ ತುಳು ಹಾಸ್ಯ ನಾಟಕ ಪ್ರದರ್ಶನ.

ಸೆ.21ರಂದು ಬೆಳಗ್ಗೆ 11.30ಕ್ಕೆ ಸ್ವಾತಿ ಎಂ.ಭಟ್ ಮತ್ತು ಬಳಗದಿಂದ ಸಂಗೀತ ವೈವಿಧ್ಯ, ಮಧ್ಯಾಹ್ನ 1 ಗಂಟೆಗೆ ಭಜನೆ, ಸಂಜೆ 5ಕ್ಕೆ ಭಕ್ತಿ ಸಂಗೀತ, ಸಂಜೆ 6ಕ್ಕೆ ಭಕ್ತಿ ಸಂಗೀತ, ರಾತ್ರಿ 8ಕ್ಕೆ ನೃತ್ಯ ಪ್ರದರ್ಶನ, ರಾತ್ರಿ 9ಕ್ಕೆ ಯಾನೊರಿ ಬರೊಲಿಯಾ ತುಳು ಹಾಸ್ಯ ನಾಟಕ ಪ್ರದರ್ಶನ.

ಸೆ.22ರಂದು ಸಂಜೆ 5ಕ್ಕೆ ಭಕ್ತಿ ಸಂಗೀತ, ರಾತ್ರಿ 8ಕ್ಕೆ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ.

ಸೆ.23ರಂದು ಮಧ್ಯಾಹ್ನ 3ಕ್ಕೆ ರಾಜೇಶ್ ಶ್ಯಾನುಭಾಗ್ ಬಾರಕೂರು ತಂಡದಿಂದ ಗಾನಾಮೃತ.

10 ದಿನಗಳ ಕಾಲ ಭಕ್ತಿ, ಸಂಭ್ರಮ, ವೈಭವದಿಂದ 21ನೇ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗು ವುದು. ಈ ಬಾರಿ ಧೂಮ್ರವರ್ಣ ಗಣಪತಿ ಪ್ರತಿಷ್ಠಾಪನೆ, ಭಕ್ತರ ಇಷ್ಟಾರ್ಥ ಈಡೇರಿಸುವ ಗಣಪತಿ ಸನ್ನಿಧಿಯಲ್ಲಿ 750ಕ್ಕೂ ಹೆಚ್ಚು ಕಲಾ ಪ್ರತಿಭೆಗಳ ಪ್ರದರ್ಶನವಿದೆ- ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಅಧ್ಯಕ್ಷ ಕನ್ನರ್ಪಾಡಿ ಕಿನ್ಸಿಮುಲ್ಕಿ ಸಾರ್ವಜನಿಕ ಶ್ರೀಗಣೇಶೋತ್ಸವ

Leave a Reply

Your email address will not be published. Required fields are marked *

error: Content is protected !!