ರಂಗಭೂಮಿ ಕಲಾವಿದ ಮಠದಬೆಟ್ಟು ಶೇಖರ್ ಜಿ. ಅಮೀನ್ ಇನ್ನಿಲ್ಲ

ಉಡುಪಿ: ಶಿರಿಬೀಡು ಮಠದ ಬೆಟ್ಟು ಪರಿಸರದ ನಿವಾಸಿ ಶೇಖರ್ ಜಿ ಅಮೀನ್ ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷವಾಗಿತ್ತು.

ಮೃತರು ಪತ್ನಿ ಮತ್ತು ಕುಟುಂಬಸ್ಥರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ ಅವರು. ನಗರದ ಬಸ್ ನಿಲ್ದಾಣ ಬಳಿಯ ನೆಲ್ಲಿಕಟ್ಟೆಯ ಕಂಬಿಗಾರ ಬಬ್ಬು ಸ್ವಾಮಿ, ದೈವದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿದ್ದರು. ಶಿರಿಬೀಡಿನ ಬನ್ನಂಜೆಯ ನಾಗಬ್ರಹ್ಮ ಸ್ಥಾನದಲ್ಲಿ ಕಾರ್ಯದರ್ಶಿಯಾಗಿಯೂ, ಉಡುಪಿ ಶಿರಿಬೀಡಿನಲ್ಲಿರುವ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ನಾಟಕ ಕಲಾವಿದರಾದ, ಶೇಖರ್ ಜಿ ಅಮೀನ್ ಅವರು, ಬಯ್ಯ ಮಲ್ಲಿಗೆಯ ಹೀರೋ ಶಶಾಂಕ್ ಪಾತ್ರದಲ್ಲಿ ನಟಿಸಿ ಮಿಂಚಿದ್ದರು. ಮೃತರ ಅಗಲಿಕೆಗೆ ಕಾಂಗ್ರೆಸ್ ಮುಖಂಡ ಜಯ ಶೆಟ್ಟಿ ಬನ್ನಂಜೆ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುರೇಶ್ ಶೆಟ್ಟಿ ಬನ್ನಂಜೆ, ಕೋಶಾಧಿಕಾರಿ ಗಣೇಶ್ ರಾಜ್ ಸರಳೆಬೆಟ್ಟು, ಸುಭಾಷ್ ಪೂಜಾರಿ, ಶಾಲಾ-ಕಲಾ ಕಾರ್ಯದರ್ಶಿ ಮುರಳಿಧರ ದೇವಾಡಿಗ, ಶಿರಿಬೀಡು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!