ಮಹಿಳಾ ಮಂಡಳಿ ಮಾರ್ಪಳ್ಳಿ: 3ನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮಹಿಳಾ ಮಂಡಳಿ ಮಾರ್ಪಳ್ಳಿ ವತಿಯಿಂದ ಆಯೋಜಿಸಲಾದ 3ನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಉಮಾಮಹೇಶ್ವರ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಫಾರ್ಚೂನ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್‌ನ ಸ್ಥಾಪಕಿ ಅಕ್ಷತಾ ಕಿರಣ್ ಉದ್ಘಾಟಿಸಿದರು. ಶ್ರೀಮಹಾಲಿಂಗೇಶ್ವರ ಚೆಂಡೆ ಬಳಗ ಮಾರ್ಪಳ್ಳಿಯ ಅಧ್ಯಕ್ಷ ವಾದಿರಾಜ ಉಪಾಧ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರತ್ನಾಕರ್ ಜಿ.ಎಸ್., ದಿನೇಶ್ ಸಿ. ನಾಯ್ಕ್ ಅಲೆವೂರು, ಸುಷ್ಮಿತಾ ಹೆಗ್ಡೆ, ಶೇಖರ್ ಸುವರ್ಣ ಗರಡಿಮನೆ, ವಿಜಯ್ ಆರ್. ನಾಯಕ್, ವಿಶ್ವನಾಥ್ ಅಮೀನ್ ಹಾಗೂ ದಿನೇಶ್ ಶೆಟ್ಟಿ ಮಾರ್ಪಳ್ಳಿ ಉಪಸ್ಥಿತರಿದ್ದರು. ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಅನುರಾಧ ಉದಯ್ ಹಾಗೂ ಅಧ್ಯಕ್ಷೆ ಸುಲೋಚನ ನಾಯ್ಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗ ಮಾರ್ಪಳ್ಳಿಯ ಗೌರವಾಧ್ಯಕ್ಷ ಲಚೇಂದ್ರ ಬೈಲೂರು ವಹಿಸಿದ್ದರು. ಅತಿಥಿಗಳಾಗಿ ಡಾ. ಉದಯ್ ದೇವಾಡಿಗ, ಯತೀಶ್ ಕುಮಾರ್, ಹರಿದಾಸ್ ಪ್ರಭು, ಉಮೇಶ್ ಮಾರ್ಪಳ್ಳಿ, ಸುಧಾಕರ್ ಶೇರಿಗಾರ್, ಚಂದ್ರಾವತಿ ಸುವರ್ಣ ಹಾಗೂ ಪುಷ್ಪಲತಾ ರಮಾನಂದ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕುಮಾರಿ ಯುಕ್ತ ಆರ್.ಭಟ್ ನಿರೂಪಿಸಿ,ಕವಿತಾ ಮನೋಜ್ ಹಾಗೂ ವಿನುತ ಗಣೇಶ್  ವಂದಿಸಿದರು. ತೀರ್ಪುಗಾರರಾಗಿ ವಿದುಷಿ ಅನ್ವಿತಾ ಕೋಟ್ಯಾನ್ ಹಾಗೂ ವಿದುಷಿ ಸುಮಲತಾ ಪ್ರಶಾಂತ್  ಕಾರ್ಯನಿರ್ವಹಿಸಿದರು.

ಸ್ಪರ್ಧೆಗೆ 60ಕ್ಕೂ ಹೆಚ್ಚು ಮಕ್ಕಳು ನೋಂದಣಿ ಮಾಡಿಕೊಂಡಿದ್ದು, ಸುಮಾರು 75 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶ್ರೀಕೃಷ್ಣನ ವಿವಿಧ ವೇಷಭೂಷಣಗಳಲ್ಲಿ ಮುದ್ದು ಮಕ್ಕಳು ಕಂಗೊಳಿಸಿ, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ವಿಜೇತ ಮಕ್ಕಳಿಗೆ ವಿಶೇಷ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ಮಕ್ಕಳ ಪ್ರತಿಭೆ ಹಾಗೂ ಶ್ರೀಕೃಷ್ಣನ ಬಾಲಲೀಲೆಗಳನ್ನು ಅನಾವರಣಗೊಳಿಸಿದ ಈ ಮುದ್ದು ಕೃಷ್ಣ ಸ್ಪರ್ಧೆ, ಮಾರ್ಪಳ್ಳಿ ಪರಿಸರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

Leave a Reply

Your email address will not be published. Required fields are marked *

error: Content is protected !!