ಹಾಡು ಜನರ ಹೃದಯ ಮುಟ್ಟುವಂತಿರಬೇಕು- ಶಿರೂರು ಮಠದ ದಿವಾನರು
ಉಡುಪಿ: ಸಾಹಿತ್ಯವನ್ನು ಬರೆದವರ ಅಭಿಪ್ರಾಯವನ್ನು ಇಟ್ಟುಕೊಂಡು ಹಾಡುವ ಸಂಗೀತ ಜನರ ಹೃದಯ ಮುಟ್ಟುವಂತಿರಬೇಕು. ಸಂಗೀತದ ಮೂಲಕ ಮಾತ್ರ ಸಾಧ್ಯ ಎಂದು ಶಿರೂರು ಮಠದ ದಿವಾನರು ಹೇಳಿದ್ದಾರೆ.
ಅವರು ರಾಗ ವಾಹಿನಿ ರಿಜಿಸ್ಟರ್ಡ್ ಉಡುಪಿ ಮತ್ತು ಕಲಾನಿಧಿ ಕಲಾ ಪ್ರಕಾರಗಳ ಸಂಸ್ಥೆ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಸಿದ ನನ್ನ ಹಾಡು ನನ್ನದು ಎಂಟನೇ ಆವೃತ್ತಿಯ ಫೈನಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿ ಜಯಕರ್ ಶೆಟ್ಟಿ ಇಂದ್ರಾಳಿ ಯವರು ಸ್ಪರ್ಧೆಯಲ್ಲಿ ಸೋಲು ಗೆಲುವು ಇದ್ದೇ ಇದೆ. ಸೋಲನ್ನು ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಿ ಎಂದರು. ಕಲಾನಿಧಿ ಸಂಸ್ಥೆಯ ಅಧ್ಯಕ್ಷರಾದ ಉಪ್ಪುರು ಭಾಗ್ಯಲಕ್ಷ್ಮಿಯವರು ಪ್ರಾಸ್ತಾವಿಕ ಮಾತಿನಿಂದ ಎಲ್ಲರನ್ನು ಸ್ವಾಗತಿಸಿದರು. ರಾಗ ವಾಹಿನಿ ಸಂಸ್ಥೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಮಲ್ಪೆ ಅವರು ಪ್ರಾರ್ಥಿಸಿದರು. ಅತಿಥಿಗಳಾಗಿ ರಂಜನ್ ಕಲ್ಕೂರ, ಹರಿಪ್ರಸಾದ್ ರೈ,ಲಯನ್ ವಿದ್ಯಾಲತಾ ಶೆಟ್ಟಿ, ವಿಜಯಾ ಜಿ. ಬಂಗೇರ, ಹಿರಿಯರಾದ ಕೆ ವಿಶ್ವನಾಥ ಶೆಣೈ, ಗಣೇಶ್ ಶೇರಿಗಾರ್, ಸಂಗೀತ ವಿಶಾರದ ಅಡಲ್ಫ್ ಶರ್ವಿನ್ ಅಮ್ಮಣ್ಣ ಉಪಸ್ಥಿತರಿದ್ದರು. ನಿವ್ರತ್ತ ಉಪನ್ಯಾಸಕರಾದ ಡಿ ದಯಾನಂದ್ ಕಿದಿಯೂರು ನಿರೂಪಿಸಿ, ವಂದಿಸಿದರು.





