ಕಲಾರಾಧನೆಯ 36ನೇ ಸ್ವಾತಂತ್ರೋತ್ಸವ “ಯಕ್ಷಗಾನ ದಿನ’ ಶೀರೂರು ಮಠದ ಪರಂಪರೆಯೊಂದಿಗೆ ತಾಳಮದ್ದಳೆ ಆಚರಣೆ

ಉಡುಪಿ: ದೇಶದ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಯಕ್ಷಗಾನ ತಾಳಮದ್ದಳೆಯ ಕಲಾ ಪರಂಪರೆಯನ್ನು ಬೆಸೆದುಕೊಂಡು ಬರುತ್ತಿರುವ ಸುಧಾಕರ ಆಚಾರ್ಯರ ಕಲಾರಾಧನೆಯ 36ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಕಾರ್ಯಕ್ರಮ ಈ ಬಾರಿ ವಿಶೇಷ ಮಹತ್ವ ಪಡೆದುಕೊಂಡಿದೆ ಎಂದು ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ನುಡಿದರು.

ಶ್ರೀಕೃಷ್ಣ ಮಠ ಪರ್ಯಾಯ ಶೀರೂರು ಮಠ ಆಶ್ರಯದಲ್ಲಿ ರಾಜಾಂಗಣದಲ್ಲಿ ಶನಿವಾರ ನಡೆದ ಸುಶಾಸನ ಉಡುಪಿ ಪ್ರಸ್ತುತಪಡಿಸುವ ಸುಧಾಕರ ಆಚಾರ್ಯರ ಕಲಾರಾಧನೆಯ 36ನೇ ವರ್ಷದ ಕಲಾರಾಧನೆಯ ಸ್ವಾತಂತ್ರೋತ್ಸವ ತಾಳಮದ್ದಳೆ ಆಚರಣೆಯಲ್ಲಿ ಪುತ್ತೂರು ಪರಿಸರದಲ್ಲಿ ಅನೇಕ ವರ್ಷಗಳಿಂದ ತಾಳಮದ್ದಲೆ ಸಂಘಟಕರಾಗಿ, ಕಲಾಪೋಷಕರಾಗಿ ಪ್ರಸಿದ್ಧರಾದ ಕಾಡೂರು ಸೀತಾರಾಮ ಶಾಸ್ತ್ರಿ ಅವರಿಗೆ “ಸುಶಾಸನ ಪ್ರಶಸ್ತಿ’ ಪ್ರದಾನ ಮಾಡಿ ಆಶೀರ್ವಚನ ನೀಡಿದರು.

1947ರಲ್ಲಿ ದೇಶ ಸ್ವಾತಂತ್ರ್ಯ ಪಡೆದ ಸಂದರ್ಭ ರಥಬೀದಿಯ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ತಾಳಮದ್ದಳೆ ಏರ್ಪಡಿಸಲಾಗಿತ್ತು. ಆ ಸಂದರ್ಭ ಶೀರೂರು ಮಠಾಧೀಶರಾದ ಶ್ರೀ ಲಕ್ಷ್ಮೀಂದ್ರತೀರ್ಥ ಶ್ರೀಪಾದರು ಪರ್ಯಾಯ ಪೀಠಾಧಿಪತಿಗಳಾಗಿದ್ದರು. ಇದೀಗ ದೇಶವು 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಸಂದರ್ಭದಲ್ಲಿ ಸುಧಾಕರ ಆಚಾರ್ಯರ ಕಲಾರಾಧನೆಯ 36ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ನಡೆಯುತ್ತಿರುವುದು ವಿಶೇಷ. ಈ ಬಾರಿಯೂ ಶೀರೂರು ಮಠವೇ ಪರ್ಯಾಯ ಪೀಠದಲ್ಲಿರುವುದು ಈ ಕಾರ್ಯಕ್ರಮಕ್ಕೆ ಐತಿಹಾಸಿಕ ನಂಟನ್ನು ಕಲ್ಪಿಸಿದೆ ಎಂದು ಅಭಿಪ್ರಾಯಪಟ್ಟರು.

ಅವರಿಗೆ “ಸುಶಾಸನ ಪ್ರಶಸ್ತಿ’ ಪ್ರದಾನ ಮಾಡಿ ಆಶೀರ್ವಚನ ನೀಡಿದರು. 1947ರಲ್ಲಿ ದೇಶ ಸ್ವಾತಂತ್ರ್ಯ ಪಡೆದ ಸಂದರ್ಭ ರಥಬೀದಿಯ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ತಾಳಮದ್ದಳೆ ಏರ್ಪಡಿಸಲಾಗಿತ್ತು. ಆ ಸಂದರ್ಭ ಶೀರೂರು ಮಠಾಧೀಶರಾದ ಶ್ರೀ ಲಕ್ಷ್ಮೀಂದ್ರತೀರ್ಥ ಶ್ರೀಪಾದರು ಪರ್ಯಾಯ ಪೀಠಾಧಿಪತಿಗಳಾಗಿದ್ದರು. ಇದೀಗ ದೇಶವು 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಸಂದರ್ಭದಲ್ಲಿ ಸುಧಾಕರ ಆಚಾರ್ಯರ ಕಲಾರಾಧನೆಯ 36ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ನಡೆಯುತ್ತಿರುವುದು ವಿಶೇಷ. ಈ ಬಾರಿಯೂ ಶೀರೂರು ಮಠವೇ ಪರ್ಯಾಯ ಪೀಠದಲ್ಲಿರುವುದು ಈ ಕಾರ್ಯಕ್ರಮಕ್ಕೆ ಐತಿಹಾಸಿಕ ನಂಟನ್ನು ಕಲ್ಪಿಸಿದೆ ಎಂದು ಅಭಿಪ್ರಾಯಪಟ್ಟರು.

ಶ್ರೀಕೃಷ್ಣ-ಮುಖ್ಯಪ್ರಾಣರ ಕೃಪೆ ಹಾಗೂ ಶೀರೂರು ಮಠದ ಶ್ರೀಪಾದರ ಆಶೀರ್ವಾದದಿಂದ ತಾಳಮದ್ದಳೆಯ ಈ ಕಲಾ ಪರಂಪರೆ ಹಲವು ವರ್ಷಗಳಿಂದ ನಿರಂತರವಾಗಿ ಮುನ್ನಡೆಯುತ್ತಿದೆ. ಕಲೆ, ಸಂಸ್ಕೃತಿ, ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಇಂತಹ ಪ್ರಯತ್ನಗಳು ಮುಂದಿನ ಪೀಳಿಗೆಗೂ ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಸಂದೇಶ ನೀಡಿದರು.

ಪ್ರಶಸ್ತಿ ಸ್ವೀಕರಿಸಿದ ಕಾಡೂರು ಸೀತಾರಾಮ ಶಾಸ್ತ್ರಿ ಮಾತನಾಡಿ, ಸಂಘಟಕರು ತಮ್ಮನ್ನು ಗೌರವಿಸಲಿ ಎಂಬ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ. ಬದಲಾಗಿ ಕಲೆಯ ಮೇಲಿನ ಆಸಕ್ತಿ ಹಾಗೂ ಆತ್ಮತೃಪ್ತಿಗಾಗಿ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾರೆ. ಸುಧಾಕರ ಆಚಾರ್ಯರು ಹಲವು ವರ್ಷಗಳಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ತಾಳಮದ್ದಳೆ ಆಯೋಜಿಸಿಕೊಂಡು ಬರುತ್ತಿರುವುದು ಇದಕ್ಕೆ ಉತ್ತಮ ಉದಾಹರಣೆ. ಯಕ್ಷಗಾನ ಕೇವಲ ಮನರಂಜನೆಯ ಕಲೆಯಲ್ಲ. ಅದು ದೈವೀಕ ಕಲೆಯಾಗಿದ್ದು ಸಂಸ್ಕಾರ, ಸಂಸ್ಕೃತಿ, ಧರ್ಮದ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿಯನ್ನು ಹೊಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಕೆಲವು ಹೊಸ ಪ್ರಸಂಗಗಳು ಮೌಲ್ಯಾಧಾರಿತ ಸಂದೇಶಗಳನ್ನು ಸಾರುವುದಕ್ಕಿಂತ ಮನರಂಜನೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ವಿಷಾದನೀಯ ಎಂದರು.

ಸಾಕಷ್ಟು ಸುಂದರವೂ ಮೌಲ್ಯಯುತವಾದ ಪೌರಾಣಿಕ ಪ್ರಸಂಗಗಳಿವೆ. ಅಂತಹ ಪ್ರಸಂಗಗಳನ್ನು ಹೆಚ್ಚಾಗಿ ಪ್ರದರ್ಶಿಸುವ ಮೂಲಕ ಯಕ್ಷಗಾನದ ಮೂಲ ಆಶಯ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಬಹುದು. ಈ ನಿಟ್ಟಿನಲ್ಲಿ ಕಲಾವಿದರು, ಸಂಘಟಕರು ಹೆಚ್ಚಿನ ಗಮನಹರಿಸಬೇಕು. ಶ್ರೀಕೃಷ್ಣ ಮಠದಿಂದ ಯಕ್ಷಗಾನ ಮೇಳವೊಂದನ್ನು ಹೊರಡಿಸಿದರೆ ಶ್ರೀಕೃಷ್ಣ ಪರಮಾತ್ಮನ ಲೀಲೆಗಳು, ಆದರ್ಶಗಳು ಹಾಗೂ ಕಥಾಮೃತವನ್ನು ಯಕ್ಷಗಾನದ ಮೂಲಕ ದೇಶದಾದ್ಯಂತ ಜನರಿಗೆ ತಲುಪಿಸಲು ಸಾಧ್ಯವಾಗುತ್ತದೆ. ತನ್ಮೂಲಕ ಯಕ್ಷಗಾನ ಕಲೆಯ ಜತೆಗೆ ಶ್ರೀಕೃಷ್ಣನ ಸಂದೇಶವೂ ವ್ಯಾಪಕವಾಗಿ ಪ್ರಸಾರವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಉಜ್ವಲ್‌ ಡೆವಲಪರ್ಸ್‌ನ ಪುರುಷೋತ್ತಮ ಪಿ. ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಷನ್‌ ಅದ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ, ಪ್ರಮುಖರಾದ ರತನ್‌ರಾಜ್‌, ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯ, ಸುಧಾಕರ ಆಚಾರ್ಯ, ತ್ರಿಲೋಚನ ಶಾಸ್ತ್ರೀ, ಬಿ. ರಮಾನಂದ ರಾವ್‌ ಮುಂಬಯಿ ಉಪಸ್ಥಿತರಿದ್ದರು. ಹರೀಶ್‌ ಬೊಳಂತಿಮುಗರು ನಿರೂಪಿಸಿ, ಡಾ| ಹರೀಶ್‌ ಜೋಷಿ ವಿಟ್ಲ ವಂದಿಸಿದರು.

ಅಮ್ಮಣ್ಣಾಯರ ಸ್ಮತಿ ನಿರಂತರ 25 ವರ್ಷಗಳ ಕಾಲ ಉಡುಪಿಯ ತಾಳಮದ್ದಳೆಯಲ್ಲಿ ಭಾಗವತಿಕೆ ನೀಡಿದ ದಿನೇಶ್‌ ಅಮ್ಮಣ್ಣಾಯರ ಸ್ಮತಿ ಕಾರ್ಯಕ್ರಮದಲ್ಲಿ ಭಾಗವತ ಪಟ್ಲ ಸತೀಶ್‌ ಶೆಟ್ಟಿಯವರಿಗೆ ಜಾಗಟೆ ನೀಡುವ ಮೂಲಕ ದಿನೇಶ್‌ ಅಮ್ಮಣ್ಣಾಯರನ್ನು ಸ್ಮರಿಸಲಾಯಿತು. ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಬಿ. ಜಯಕರ ಶೆಟ್ಟಿ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್.ಸಾಮಗ, ಕೊಡವೂರು ಶಿರ್ಡಿ ಸಾಯಿಬಾಬಾ ಮಂದಿರದ ಆಡಳಿತ ಟ್ರಸ್ಟಿ ದಿವಾಕರ ಶೆಟ್ಟಿ ತೋಟದಮನೆ, ಭುವನ ಪ್ರಸಾದ್‌ ಹೆಗ್ಡೆ, ಸುಧಾಕರ ಆಚಾರ್ಯ, ಅಮಿತಾ ಸುಧಾಕರ ಆಚಾರ್ಯ ಉಪಸ್ಥಿತರಿದ್ದರು. ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪದ್ಮನಾಭ ಉಪಾಧ್ಯಾಯ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಅವರನ್ನು ಅಭಿನಂದಿಸಲಾಯಿತು.
ಶಕುಂತಳಾ ಭಂಡಾರ್ಕರ್‌ ಬೆಂಗಳೂರು, ಕೋಳ್ಯೂರು ಶ್ರೀಪತಿ ರಾವ್‌, ಎಸ್‌.ಜಿ.ನಾಯ್ಕ್ ಸಿದ್ದಾಪುರ, ಅಜಿತ್‌ ಅಂಬಲಪಾಡಿ, ಮಾಲತಿ ಅವರು ಪಂಚರತ್ನ ದೀಪ ಮಾಲಾವನ್ನು ಬೆಳಗಿಸಿ ತಾಳಮದ್ದಳೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕಾರ್ಯಕ್ರಮದ ಪೂರ್ವದಲ್ಲಿ “ವಂದೇ ಮಾತರಂ’ ಗೀತೆಯನ್ನು ಭರತ್‌ರಾಜ್‌ ಶೆಟ್ಟಿ ಸಿದ್ಧಕಟ್ಟೆ ಹಾಡಿದರು. ವಾದಿರಾಜ ಕಲ್ಲೂರಾಯ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!