ಆ‌.15: ಸ್ವಾತಂತ್ರೋತ್ಸವ ತಾಳಮದ್ದಳೆ- ಕಾಡೂರು ಸೀತಾರಾಮ ಶಾಸ್ತ್ರಿಯವರಿಗೆ ‘ಸುಶಾಸನ’ ಪುರಸ್ಕಾರ

ಉಡುಪಿ: ಶ್ರೀಕೃಷ್ಣಮಠ ಪರ್ಯಾಯ ಶ್ರೀ ಶೀರೂರು ಮಠದ ಆಶ್ರಯದಲ್ಲಿ ‘ಸುಶಾಸನ’ ಉಡುಪಿ ಪ್ರಸ್ತುತಪಡಿಸುವ ಉಡುಪಿ ಸುಧಾಕರ ಆಚಾರ್ಯ ಅವರ ಕಲಾರಾಧನೆಯ 36ನೇ ವರ್ಷದ
ಸ್ವಾತಂತ್ರೋತ್ಸವ ತಾಳಮದ್ದಳೆ ಆಚರಣೆ ಆ.15ರ ಶನಿವಾರ ಮಧ್ಯಾಹ್ನ ಗಂಟೆ 1ರಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

ರಾಷ್ಟ್ರೀಯ ದಿನ ಸ್ವಾತಂತ್ರೋತ್ಸವ ಯಕ್ಷಗಾನ ತಾಳಮದ್ದಳೆಯನ್ನು ವಿಶಿಷ್ಟ ರೀತಿಯಿಂದ ಕಲಾರಾಧನೆ ಎಂದೇ ಭಾವಿಸಿ, 1990 ಆ.14 ರ ರಾತ್ರಿ, ಉಡುಪಿ ನಿಟ್ಟೂರು ಹೈಸ್ಕೂಲಿನಲ್ಲಿ ಪ್ರಾರಂಭಿಸಿದ ತಾಳಮದ್ದಳೆ ಆಚರಣೆಗೆ ಇದೀಗ 36ರ ಸಂಭ್ರಮ. ತಾಳಮದ್ದಳೆ ‘ಕೃಷ್ಣಾರ್ಪಣ’ ಆಖ್ಯಾನವು ಖ್ಯಾತ ಅರ್ಥಧಾರಿಗಳ ಕೂಡುವಿಕೆಯಲ್ಲಿ ಮೇಳೈಸಲಿದೆ.

ಸುಶಾಸನ’ ಗೌರವ ಪುರಸ್ಕಾರ-2026: ಪುತ್ತೂರಿನ ಯಕ್ಷರಂಗ ಸಂಸ್ಥೆಯ ಅಧ್ಯಕ್ಷ, ಪುತ್ತೂರು ನಗರ ಹವ್ಯಕ ಸಂಘಟನೆಯ ಅಧ್ಯಕ್ಷ, ಉದ್ಯಮಿ, ಕಲಾಪೋಷಕ ಹಾಗೂ ತಾಳಮದ್ದಳೆ ಸಂಘಟಕರಾದ ಕಾಡೂರು ಸೀತಾರಾಮ ಶಾಸ್ತ್ರಿ ಅವರನ್ನು ‘ಸುಶಾಸನ ಗೌರವ ಪುರಸ್ಕಾರ-2026’ ಪ್ರದಾನ ಮಾಡಿ ಗೌರವಿಸಲಾಗುವುದು. 2025ರಲ್ಲಿ ಚಂದ್ರಶೇಖರ ದಾಮ್ಲೆ ಸುಳ್ಯ ಅವರಿಗೆ ಸುಶಾಸನ ಪುರಸ್ಕಾರ ಪ್ರದಾನ ಮಾಡಲಾಗಿತ್ತು.
ಸ್ವಾತಂತ್ರೊ÷್ಯÃತ್ಸವ ತಾಳಮದ್ದಳೆಯಲ್ಲಿ ದಾಖಲೆಯ ನಿರಂತರ 25 ವರ್ಷಗಳಲ್ಲಿ ಭಾಗವತಿಕೆ ಮಾಡಿದ ಸ್ವರ್ಗೀಯ ದಿನೇಶ್ ಅಮ್ಮಣ್ಣಾಯರ ‘ಸ್ಮöÈತಿ’ ಕಾರ್ಯಕ್ರಮ ನಡೆಯಲಿದ್ದು, ‘ಅಮ್ಮಣ್ಣಾಯ ಹಿಟ್ಸ್’/ಎವರ್‌ಗ್ರೀನ್ ಪ್ರಸಂಗಗಳಾದ ‘ಸತ್ಯಹರಿಶ್ಚಂದ್ರ’, ‘ಮಾನಿಷಾದ’, ‘ಅಕ್ಷಯಾಂಬರ’, ಪ್ರೇಕ್ಷಕರಿಗೆ
ರಸದೌತಣ ಉಣಬಡಿಸಲಿದೆ. ಭಾಗವತಿಕೆಯಲ್ಲಿ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಡಾ. ಪ್ರಖ್ಯಾತ್ ಶೆಟ್ಟಿ, ಭರತರಾಜ್ ಶೆಟ್ಟಿ ಸಿದ್ಧಕಟ್ಟೆ ಹಾಗೂ 44 ಶ್ರೇಷ್ಠ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!