ದಲಿತ ಮುಖಂಡರ ಸಭೆ ಕರೆದು ಅವಮಾನ:ಉಡುಪಿ ನಗರಸಭೆಯ ಪೌರಾಯುಕ್ತರ ವಿರುದ್ಧ ಜಯನ್ ಮಲ್ಪೆ ಆಕ್ರೋಶ
ಉಡುಪಿ: ನಗರಸಭೆಯ ಎಸ್ಸಿ- ಎಸ್ಟಿ ಆರೋಗ್ಯ ವಿಮಾ ಯೋಜನೆಯ ಅವ್ಯವಸ್ಥೆಯ ಬಗ್ಗೆ ದಲಿತ ಮುಖಂಡರ ಸಭೆ ಕರೆದು ಸುಮಾರು ಎರಡು ಗಂಟೆಗಳ ಕಾಲ ಛೇಂಬರ್‌ಗೆ ಬಾರದೆ ದಲಿತ ಮುಖಂಡರಿಗೆ ಅವಮಾನ ಮಾಡಿರವ ಪೌರಾಯುಕ್ತರ ವಿರುದ್ಧ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಇಂದು ಬುಧವಾರ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಗೆ ಉಡುಪಿ ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ ಕಳೆದ ತಿಂಗಳು ಜಿಲ್ಲಾಧಿಕಾರಿಗಳ ಕುಂದು ಕೊರತೆಗಳ ಸಭೆಯಲ್ಲಿ ದಲಿತ ಮುಖಂಡರು ನಗರಸಭೆಯ ದಲಿತರ ಆರೋಗ್ಯ ವಿಮಾ ಯೋಜನೆಯಲ್ಲಿ ಆಗುತ್ತಿರುವ ಅವ್ಯವಸ್ಥೆಗಳ ಬಗ್ಗೆ ಗಮನ ಸೆಳೆದಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪೌರಾಯುಕ್ತರಿಗೆ ದಲಿತ ಮುಖಂಡರ ಸಭೆಯನ್ನು ಕರೆದು ಸಮಸ್ಯೆಯನ್ನು ಪರಿಹರಿಸುವಂತೆ ಆದೇಶಿಸಿದ್ದರು.
ಈ ಹಿನ್ನಲೆಯಲ್ಲಿ ಇಂದು ಸುಮಾರು ಹನ್ನೊಂದು ಗಂಟೆಗೆ ಸಭೆ ಕರೆದಿದ್ದ ಪೌರಾಯುಕ್ತರು ದಲಿತ ಮುಖಂಡರನ್ನು ತಮ್ಮ ಛೇಂಬರ್‌ನಲ್ಲಿ ಕೂರಿಸಿ ಮೇಲ್ಛಾವಣಿಯಲ್ಲಿ ಶಾಸಕರ ಮತ್ತು ಮಾಜಿ ನಗರಸಭೆಯ ಸದಸ್ಯರನ್ನು ಕರೆದು ದಲಿತ ಮುಖಂಡರು ಹೆಚ್‌ಡಿಫ್‌ಸಿ ಕಂಪೆನಿಗೆ ನೀಡಿರುವ ಆರೋಗ್ಯ ಕಾರ್ಡ್ನ್ನು ರದ್ಧುಗೊಳಿಸುವಂತೆ ಜಿಲ್ಲಾಧಿಕಾರಿಗಳ ಕುಂದುಕೊರೆತ ಸಭೆಯಲ್ಲಿ ಹೇಳಿರುವುದರ ವಿರುದ್ಧ ಸಭೆ ನಡೆಸಿರುವುದಲ್ಲದೆ ಇದೇ ಕಂಪೆನಿಯನ್ನು ಮುಂದುವರಿಸುವಂತೆ ಶಾಸಕರ ನೇತ್ರತ್ವದಲ್ಲಿ ಒತ್ತಾಯಿಸಿರುವುದನ್ನು ಜಯನ್ ಮಲ್ಪೆ ಆಕ್ಷೇಪಿಸಿದ್ದಾರೆ.
ದಲಿತ ಮುಖಂಡರ ನೋವನ್ನು ವಿಚಾರಿಸದ ಶಾಸಕರು ಕೇವಲ ಅವ್ಯವಸ್ಥೆಯ ವಿಮಾ ಕಂಪೆಣಿಗೆ ಬೆಂಗಾವಳಾಗಿ ನಿಂತು ಪೌರಾಯುಕ್ತರ ಮೂಲಕ ದಲಿತ ಮುಖಂಡರಿಗೆ ಅವಮಾನ ಮಾಡಿಸಿರುವುದು ಖಂಡನೀಯ. ನೀವು ನಿಮ್ಮ ಸರಕಾರ ಯಾರ ಜೊತೆಬೇಕಾದರೂ ಚೆಲ್ಲಾಟವಾಡಿ ಆದರೆ ನೊಂದ ದಲಿತರ ಜೊತೆ ಚೆಲ್ಲಾಟವಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಜಯನ್ ಮಲ್ಪೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸುತ್ತ ಉಡುಪಿ ನಗರಸಭೆಯಲ್ಲಿ ದಲಿತೆ ಆರೋಗ್ಯ ವಿಮಾ ಯೋಜನೆಗೆ ಸಂಬಂದಿಸಿ ಈ ವಿಮಾ ಕಂಪೆನಿಯ ಯಾವುದೇ ಕಛೇರಿ ಇರುವುದಿಲ್ಲ. ರೋಗಿಗಳು ತಮ್ಮ ಚಿಕಿತ್ಸೆ ಬಗ್ಗೆ ಬಿಲ್ ಕ್ಲೈಂ ಮಾತನಾಡಿದರೆ ಈ ಕಂಪೆನಿಯ ಸಿಬ್ಬಂದಿಗಳು ಉಢಾಫೆಯಲ್ಲಿ ಉತ್ತರಿಸುದಾಗಿ ಆರೋಪಿಸಿರವ ಜಯನ್ ಮಲ್ಪೆ ಈ ವಿಮಾ ಕಂಪೆನಿಯವರು ನೀಡಿರುವ ಹೆಲ್ತ್ ಕಾರ್ಡ್ನಲ್ಲಿ ಮನೆ ನಂಬರ್,ಕುಟುಂಬದ ಸದಸ್ಯರ ವಿವರ ಇರುವುದಿಲ್ಲ,ವಾರ್ಡ್ನ ಹೆಸರು ಇರುವುದಿಲ್ಲ ಎಂದಿದ್ದಾರೆ. ಇಂದು ಪೌರಾಯುಕ್ತರು ಕರೆದ ಸಭೆಯಲ್ಲಿ ದಲಿತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು,ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಗಣೇಶ್ ನೆರ್ಗಿ,ಮಾಜಿ ನಗರಸಭೆ ಅಧ್ಯಕ್ಷ ಯುವರಾಜ್ ಪುತ್ತೂರು ಮಾಜಿ ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್,ಹರೀಶ್ ಸಲ್ಯಾನ್,ಶಿವಾನಂದ ಮೂಡುಬೆಟ್ಟು,ದಲಿತ ಕಲಾಮಂಡಳಿಯ ಶಂಕರ್‌ದಾಸ್,ಸುಂದರಿ ಪುತ್ತೂರು, ದಿನೇಶ್ ಜವನೆರಕಟ್ಟೆ ಮುಂತಾದವರು ಭಾಗವಹಿಸಿ ಸಭೆಯನ್ನು ಬಹಿಷ್ಕಾರಿಸಿದರು.





