ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕೊಡಂಕೂರು: ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೊಡಂಕೂರು ಇದರ 15ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಮಂದಿರದ ಧರ್ಮದರ್ಶಿಗಳಾದ ದಿವಾಕರ ಶೆಟ್ಟಿ ಇವರ ದಿವ್ಯ ಹಸ್ತದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಂತೋಷ್ ಜತ್ತನ್, ನಾರಾಯಣ ಜತ್ತನ್, ಗೋವರ್ಧನ್, ರಾಜ ಹನುಮಂತನಗರ, ರಾಜೇಶ್ ,ಶರತ್ ದೇವಾಡಿಗ, ಜಯಕರ್ ಪಾಲನ್, ಸಂಪಾವತಿ, ಶೋಭಾ ಶೆಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.





