ಕುಂದಾಪುರ: ಶೂಟೌಟ್ ಉದ್ಯಮಿಯ ಹತ್ಯೆ
ಕುಂದಾಪುರ: ಚರ್ಚ್ ರಸ್ತೆಯಲ್ಲಿ ಉದ್ಯಮಿಯೊಬ್ಬರಿಗೆ ಪಿಸ್ತೂಲ್ ನಲ್ಲಿ ಗುಂಡಿಕ್ಕಿ ಹತ್ಯೆಗೈದ ಘಟನೆ ಇಂದು ನಸುಕಿನ ವೇಳೆ ನಡೆದಿದೆ.
ಘಟನೆಯಲ್ಲಿ ಉದ್ಯಮಿ ಐವನ್ ರಿಚಾರ್ಡ್ ಮಸ್ಕರೇನಸ್ ಗುಂಡು ತಗಲಿ ಕಾರಿನ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಸ್ನೇಹಿತನಿಂದಲೇ ಹತ್ಯೆ: ಐವನ್ ರಿಚರ್ಡ್ ಮಸ್ಕರೇನಸ್ ಅವರನ್ನು ಅವರ ಸ್ನೇಹಿತ ಕನ್ನಡಕುದ್ರು ನಿವಾಸಿ ಡೆಗ್ರಿಕ್ ಎಂಬಾತನ ನಡುವೆ ವ್ಯವಹಾರದ ಕಾರಣಕ್ಕೆ ಮೊಬೈಲ್ ನಲ್ಲಿ ಮಾತುಕತೆ ನಡೆದಿದೆ. ಮಾತು ಜಗಳಕ್ಕೆ ತಿರುಗಿದ ಬಳಿಕ ಡೆಗ್ರಿಕ್ ಐವನ್ ನನ್ನು ಕುಂದಾಪುರಕ್ಕೆ ಬರುವಂತೆ ಚಾಲೆಂಜ್ ಮಾಡಿದ ಹಿನ್ನೆಲೆಯಲ್ಲಿ ಐವನ್ ತನ್ನ ಎರಡನೇ ಪತ್ನಿ ಲಲಿತ ಜೊತೆಗೆ ಮತ್ತೊಬ್ಬ ಸ್ನೇಹಿತನ ಕಾರಿನಲ್ಲಿ ಬಂದಿದ್ದ. ಕುಂದಾಪುರದ ಚರ್ಚ್ ರಸ್ತೆಯಲ್ಲಿರುವ ಸಂತ ಜೋಸೆಫರ ಶಾಲೆಯ ಮುಂಭಾಗದಲ್ಲಿ ಕಾರು ನಿಲ್ಲಿಸಿ ಮತ್ತೆ ಜಗಳ ಆರಂಭಗೊಂಡಿದೆ. ಈ ಸಂದರ್ಭ ಲಲಿತ ಕಾರಿನಲ್ಲಿಯೇ ಇದ್ದರು. ಜಗಳ ತಾರಕಕ್ಕೇರಿದಾಗ ಡೆರಿಕ್ ತನ್ನೊಂದಿಗೆ ತಂದಿದ್ದ ಗನ್ ನಿಂದ ಸುಮಾರು 3.35ರ ಸುಮಾರಿಗೆ ಐವನ್ ರಿಚರ್ಡ್ ಮಸ್ಕರೇನಸ್ ಅವರ ಸೊಂಟದ ಭಾಗಕ್ಕೆ ಶೂಟ್ ಮಾಡಿದ್ದಾನೆ. ಗನ್ ಶೂಟ್ ನಿಂದ ಗಂಭೀರ ಗಾಯಗೊಂಡ ಐವನ್ ರಿಚರ್ಡ್ ಮಸ್ಕರೇನಸ್ ರಸ್ತೆಯಲ್ಲಿಯೇ ಸಾವನ್ನಪ್ಪಿದ್ದಾರೆ.





