ನಾರಾಯಣಗುರುಗಳ 172ನೇ ಜನ್ಮ ದಿನಾಚರಣೆ:ಪೂರ್ವಭಾವಿ ಸಭೆ

Oplus_131072

ಉಡುಪಿ: ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಉಡುಪಿ ಇದರ ನೇತೃತ್ವದಲ್ಲಿ ನಡೆಯಲಿರುವ “ಗುರು ಸಂದೇಶ ಸಾಮರಸ್ಯ ಜಾಥಾ” ಕಾರ್ಯಕ್ರಮದ ಪೂರ್ವಭಾವಿ ಸಭೆಯು ಜು.24ರಂದು ಬನ್ನಂಜೆ ಬಿಲ್ಲವರ ಸೇವಾ ಸಂಘದಲ್ಲಿ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಸಭೆಯಲ್ಲಿ ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆಯ ಪೋಸ್ಟರ್ನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ದಿವಾಕರ್ ಸನಿಲ್, ಗೌರವ ಸಲಹೆಗಾರ ಸುಧಾಕರ್ ಪೂಜಾರಿ ಪಾಂಗಾಳ, ಮಾಧವ ಪಾಲನ್ ಕಾಪು, ಶೇಖರ್ ಪೂಜಾರಿ ಮಾರ್ಪಳ್ಳಿ, ಓಬು ಪೂಜಾರಿ, ಶೇಖರ್ ಪೂಜಾರಿ ಹಿರಿಯಡ್ಕ, ಗುರು ಸಂದೇಶ ಸಾಮರಸ್ಯ ಜಾಥಾದ ಸಂಚಾಲಕರು ಹಾಗೂ ಬಿಲ್ಲವ ಯುವ ವೇದಿಕೆ ಬ್ರಹ್ಮಾವರ ಅಧ್ಯಕ್ಷರಾದ ಸಚಿನ್ ಪೂಜಾರಿ, ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಅಜೇಯ ಪೂಜಾರಿ ಮೇಲ್ಮನೆ ಅವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!