ಯಾವ ಊರಲ್ಲೂ ಕಾಣಸಿಗದ ಸರ್ಕಲ್ ಉಡುಪಿ ನಗರದಲ್ಲಿ ನಿರ್ಮಾಣ…!
ಉಡುಪಿ: ನಗರದ ಚಿತ್ತರಂಜನ್ ವೃತ್ತ ಬಳಿಯ ಪಾದಚಾರಿ ಮಾರ್ಗದಲ್ಲಿದ್ದ ಬೃಹತ್ ಮರವೊಂದನ್ನು ಕಡಿದು ರಸ್ತೆಯ ಮಧ್ಯದಲ್ಲಿ ಬಿಟ್ಟು ಹೋಗಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.

ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ಕೆಇಬಿ ರಸ್ತೆಯ ಫುಟ್‌ಪಾತ್‌ನಲ್ಲಿದ್ದ ಮರದ ಗೆಲ್ಲುಗಳನ್ನು ಸಂಪೂರ್ಣವಾಗಿ ಕಳೆದ ಐದು ದಿನಗಳ ಹಿಂದೆ ಕಡಿದಿದ್ದಾರೆ. ಆದರೆ ಅದನ್ನು ತೆರೆವುಗೊಳಿಸದೆ ರಸ್ತೆಯ ಮಧ್ಯ ಭಾಗದಲ್ಲಿ ವೃತ್ತಾಕಾರವಾಗಿ ಬಿದ್ದುಕೊಂಡ ಪರಿಣಾಮ ವಾಹನ ಸವಾರರಿಗೆ, ಪಾದಚಾರಿಗಳಿಗೆ ತುಂಬಾ ತೊಂದರೆ ಆಗುತ್ತಿದ್ದರೂ ಸಂಬಂಧಪಟ್ಟವರು ಯಾರು ಇದನ್ನು ತೆರವಿಗೆ ಮುಂದಾಗಿಲ್ಲ. ಈ ಬಗ್ಗೆ ನಗರಸಭಾ ಅಧಿಕಾರಿಗಳನ್ನು ಸಂಪರ್ಕಿಸಿದರೆ ಯಾವೊಬ್ಬ ಅಧಿಕಾರಿಗಳು ಫೋನ್ ಕರೆಯನ್ನು ಸ್ವೀಕರಿಸುವುದಿಲ್ಲ.





